ಗ್ರಹರಕ್ಷಕ ಪ್ರವೀಣ ನಾಯ್ಕ ಹೃದಯಾಘಾತಕ್ಕೆ ಬಲಿ

ಅಂಕೋಲಾ : ಗ್ರಹರಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನೆಕೇರಿಯ ಪ್ರವೀಣ ಗೋಪಾಲ ನಾಯ್ಕ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಇಂದು ಸೋಮವಾರ ಬೆಳಗಿನ ಜಾವ ನಡೆದಿದೆ.
ಗ್ರಹರಕ್ಷಕನಾಗಿ ಸೇವೆಯಲ್ಲಿಯಲ್ಲಿದ್ದ ಪ್ರವೀಣ ನಾಯ್ಕ ಭಾನುವಾರ ರಾತ್ರಿ ಪಟ್ಟಣದಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ಪೊಲೀಸ್ ಸಿಬ್ಬಂದಿ ರೈಸ್ ಭಗವಾನ ಅವರೊಂದಿದೆ ಜಂಟಿಯಾಗಿ ಕೈಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಗೆ ಮನೆಗೆ ತೆರಳಿದ್ದಾನೆ.
ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಸೋಮವಾರ ಬೆಳಿಗ್ಗೆ 7 ರ ಸುಮಾರಿಗೆ ಹೃದಯಾಘಾತಕ್ಕೆ ಪ್ರವೀಣ ತುತ್ತಾಗಿದ್ದಾನೆ. ಕೂಡಲೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತಾದರೂ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿ, ಪ್ರವೃತ್ತಿಯಲ್ಲಿ ಗ್ರಹರಕ್ಷಕನಾಗಿ ಹಾಗೆ ರಂಗಭೂಮಿಯ ಪ್ರಖ್ಯಾತ ಕಲಾವಿದನಾಗಿ ಪ್ರವೀಣತೆಯನ್ನು ಹೊಂದಿರುವ ಪ್ರವೀಣ ನಾಯ್ಕ ಎಲ್ಲರೊಂದಿಗೂ ಚೆನ್ನಾಗಿದ್ದು ಆತ್ಮೀಯನಾಗಿದ್ದ.
ಕಳೆದ 17 ವರ್ಷದಿಂದ ಗ್ರಹರಕ್ಷಕದಳದಲ್ಲಿ ಪ್ರವೀಣ ನಾಯ್ಕ ತನ್ನ ಶಿಸ್ತುಬಧ್ಧ ಕರ್ತವ್ಯದೊಂದಿಗೆ ಗುರುತಿಸಿಕೊಂಡು ಉತ್ತಮ ಗ್ರಹರಕ್ಷಕ ಪ್ರಶಸ್ತಿಗೂ ಪಾತ್ರನಾಗಿದ್ದ. ಸಂಗ್ಯಾಬಾಳ್ಯಾ ಬಯಲಾಟದಲ್ಲಿ ಖ್ಯಾತ್ ಭಾಗವತನಾಗಿ ಕಲಾ ಸೇವೆಯಲ್ಲಿ ತೊಡಗಿದ್ದ ಪ್ರವೀಣ ನಾಯ್ಕ ಸಂಗ್ಯಾನ ಪಾತ್ರ ಜೀವ ತುಂಬಿ ಜನಪ್ರೀಯತೆಗೆ ಕಾರಣನಾಗಿದ್ದ.
ಮೃತ ಪ್ರವೀಣ ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾನೆ.
ಸಂತಾಪ :
ಉತ್ತಮ ಗ್ರಹರಕ್ಷಕನಾಗಿ ಗುರುತಿಸಿಕೊಮಡಿದ್ದ ಪ್ರವೀಣ ನಾಯ್ಕ ನಿಧನಕ್ಕೆ ಅಂಕೋಲಾ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಕಾಂತ ತೋಟಗಿ, ಗ್ರಹರಕ್ಷಕದ ದಳದ ಜಿಲ್ಲಾ ಸಮಾದೇಷ್ಠಧಿಕಾರಿ ಡಾ. ಸಂಜು ಟಿ. ನಾಯ್ಕ, ಗ್ರಹರಕ್ಷಣ ದಳದ ತಾಲೂಕಾ ಘಟಕಾಧಿಕಾರಿ ಹಿರಿಯ ನ್ಯಾಯವಾದಿ ವಿನೋದ ಶಾನಭಾಗ, ಹಿರಿಯ ನ್ಯಾಯವಾದಿ ಸುಭಾಷ ನಾರ್ವೆಕರ ಸೇರಿದಂತೆ ಸಂತಾಪ ಸೂಚಿಸಿದ್ದಾರೆ.