ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಯುವಕರ ತಂಡ
ತೆ0ಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ ಅಸ್ವಸ್ಥ

ಅಂಕೋಲಾ : ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಉಡುಪಿಯಲ್ಲಿ ನಡೆದ ಗ್ಯಾಂಗವಾರ್ ಪ್ರಕರಣದ ವಿದ್ಯಮಾನ ಮಾಸುವ ಮುನ್ನವೆ, ಅಂಕೋಲಾದ ಹಟ್ಟಿಕೇರಿಯಲ್ಲಿ ಹಾಡುಹಗಲೆ ಯುವಕನೊರ್ವನನ್ನ 6-7 ಯುವಕರ ತಂಡ ಮಾರಣಾಂತಿಕ ಹಲ್ಲೆ ನಡೆಸುತ್ತಿರುವಾಗ, ಊರ ನಾಗರಿಕರರನ್ನು ಕಂಡು ಅಸ್ವಸ್ಥನಾದ ಯುವಕನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದ ಘಟನೆ ವರದಿಯಾಗಿದೆ.
ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (27) ಭೀಕರ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ತೀವ್ರ ಮಾರಣಾಂತಿಕ ಹಲ್ಲೆ ನಡೆಸಿದ 6-7 ಯುವಕರ ತಂಡವನ್ನು ಪಿಎಸೈ ಸುನೀಲ ಹುಲ್ಲೋಳ್ಳಿ ಅವರ ನೇತ್ರತ್ವದ ತಂಡ ಬಂಧಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಯುವಕನ ಸ್ಥಿತಿ ಗಂಭಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರದ ವೈಧ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ.

ಪಟ್ಟಣದ ಪಿ.ಎಂ. ಪ್ರೌಡ ಶಾಲೆಯ ಎದುರಿನಿಂದ ಹರ್ಷ ನಾಯ್ಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ತೆರಳಿ ಹಟ್ಟಿಕೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಬದಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿದ್ದ ಮತ್ತು ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಸಿನೀಮಿಯ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದ ಈ ಘಟನೆಯನ್ನು ಕಂಡ ಗ್ರಾಮಸ್ಥರ ಕಂಡ ಯುವಕರ ತಂಡ ಅಲ್ಲಿಂದ ಕಾಲ್ಕಿತ್ತು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಆಗಿದ್ದೇನು :
ಮೀನು ಲಾರಿ ಚಾಲಕನಾಗಿರುವ ಹರ್ಷ ನಾಗೇಂದ್ರ ನಾಯ್ಕ ಇಂದು (ಗುರುವಾರ) ಮದ್ಯಾಹ್ನ 3-30 ರ ಸುಮಾರಿಗೆ ಅಂಕೋಲಾದಿAದ ತನ್ನ ಮನೆ ತೆಂಕಣಕೇರಿಗೆ ಭೈಕ್ನಲ್ಲಿ ಸಾಗುತ್ತಿರುವಾಗ ಕಾರನಲ್ಲಿ ಬಂದ ಯುವಕರು ಆತನನ್ನು ಅಪಹರಿಸಿ ತೆರಳಿದ್ದಾರೆ ಎಂದು ಹರ್ಷ ತಂದೆ ನಾಗೇಂದ್ರ ನಾಯ್ಕ ಹಾಗೂ ತಾಯಿ ಜಯಶ್ರೀ ನಾಯ್ಕ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದರು.
ಪೊಲೀಸರು ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವಾಗಲೆ, ಅಂಕೋಲಾ ಸರಕಾರಿ ಆಸ್ಪತ್ರೆಗೆ ತೀವ್ರವಾಗಿ ಮಾರಾಣಾಂತಿಕ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡ ಯುವಕನನ್ನ ಚಿಕಿತ್ಸೆಗೆ ಕರೆ ತರಲಾಗಿದೆ ಎಂಬ ಮಾಹಿತಿ ಬಂದಿತ್ತು. ಆಸ್ಪತ್ರೆಗೆ ಹೋಗಿ ನೋಡಿದಾಗ ಆತ ಹರ್ಷ ನಾಯ್ಕ ಆಗಿದ್ದ ಎಂದು ಗೊತ್ತಾಗಿದೆ. ಹರ್ಷ ನಾಯ್ಕ ತೀವ್ರವಾಗಿ ಹಲ್ಲೆಗೊಳಗಾಗಿದ್ದರಿಂದ ಪೊಲೀಸರು ಹರ್ಷನಿಂದ ಪ್ರಕರಣ ಮಾಹಿತಿ ಪಡೆದುಕೊಳ್ಳಲು ಪರದಾಡುವಂತಾಗಿದೆ.
ಕೇವಲ ಬೊಬ್ರವಾಡದ ಹುಡುಗರು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರೂ ಎಂಬ ಮಾತು ಬಿಟ್ಟರೆ ಬೇರೆನೂ ಮಾಹಿತಿ ಹರ್ಷನಿಂದ ಲಭ್ಯವಾಗಿಲ್ಲ. ಡಾ. ರಮೇಶಕುಮಾರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಎಎಸೈ ಚಂದ್ರಕಾAತ ನಾಯ್ಕ ಪ್ರಕರಣದ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.