ಅಂಕೋಲಾ : ರಿಯಲ ಎಸ್ಟೇಟ ಉದ್ಯಮ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿತೊಡಗಿಸಿಕೊಂಡಿದ್ದ ನಾರಾಯಣ ಜಾನು ನಾಯ್ಕ ( ಜಾನು ನಾರಾಯಣ ನಾಯ್ಕ) (78 ) ಭಾನುವಾರ ನಿಧನರಾದರು.
ಬೇಳಾಬಂದರ ನಿವಾಸಿಯಾಗಿದ್ದ ಜಾನು ನಾರಾಯಣ ನಾಯ್ಕ ಎಂದರೆ ಅದೊಂದು ಕ್ರೀಯಾಶೀಲ ವ್ಯಕ್ತಿತ್ವ. ಅಂಕೋಲಾದಲ್ಲಿ ಸಾವಿರಾರು ಜನರಿಗೆ ರಿಯಲ ಎಸ್ಟೇಟ್ ಉದ್ಯಮದಲ್ಲಿ ಭೂಮಿ ಕೊಡಿಸಿ ತನ್ನದೆ ಆದ ಖ್ಯಾತಿ ಗಳಿಸಿದ್ದರು.
ಅಂಕೋಲಾ ಪ್ರಖ್ಯಾತ. ದಹಿಂಕಾಲ ಉತ್ಸವ ಸಮಿತಿಗೆ 10 ವರ್ಷಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಉತ್ಸವದ ಮೆರಗನ್ನು ಹೆಚ್ಚಿಸುವಲ್ಲಿ ಕಾರಣರಾಗಿದ್ದರು.
ಅಂಕೋಲಾದಲ್ಲಿ ಸ್ಥಾಪಿತವಾಗಿರುವ ಅನೇಕ ಹೆಸರಾಂತ ಉದ್ಯಮಗಳಿಗೆ ಭೂಮಿ ನೀಡಿದ ಕಿರ್ತಿಯು ಸಹ ಇವರಿಗೆ ಸಲ್ಲುತ್ತದೆ.
ಅಂಕೋಲಾದ ಬೇಳಾಬಂದರ ಶಾಲೆಗೆ 2 ಕೊಠಡಿಯನ್ನು ತನ್ನ ಮಗ ದಿ. ವಿಜಯಕುಮಾರ ಅವರ ಹೆಸರಲ್ಲಿ ನಿರ್ಮಿಸಿ ಕೊಟ್ಟ ಇವರು, ಅಂಕೋಲಾದಲ್ಲಿ ಐಟಿಐ ಕಾಲೇಜು ಸ್ಥಾಪನೆ ಆಗಬೇಕು ಎಂಬ ಉದಾತ್ತ ಉದ್ದೇಶದಿಂದ ಬೃಹತ ಕಟ್ಟಡವನ್ಬು ಕಟ್ಟಿ, ವಿದ್ಯಾರ್ಜನೆಗೆ ಅವಕಾಶ ಮಾಡಿ ಕೊಟ್ಟ ಜಾನು ನಾರಾಯಣ ನಾಯ್ಕ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲಿಯೂ ಪ್ರಚಾರ ಬಯಸದ ಇವರು ಹೊನ್ನೆಬೈಲನ ಕುಸ್ಲೆ ದೇವಸ್ಥಾನದ ಅಭಿವೃದ್ದಿ ಮತ್ತು ಬೇಳಾಬಂದರಿನ ಶ್ರೀ ವೀರ ಭದ್ರೇಶ್ವರ ದೇವಸ್ಥಾನ ಹೀಗೆ ಅನೇಕ ದೇವಸ್ಥಾನದ ಅಭಿವೃದ್ದಿಗೆ ಕೈ ಜೋಡಿಸಿ ಧಾರ್ಮಿಕ ಕ್ಷೇತ್ರ ತಮ್ಮ ವಿಶೇಷ ಕೊಡುಗೆ ನೀಡಿದವರಾಗಿದ್ದಾರೆ.
ಮೃತರು ಪತ್ನಿ ಮಗ ಸುಜೀತ್ ನಾಯ್ಕ, ಮಕ್ಕಳಾದ ಭಾರತಿ, ರೇಖಾ, ಪದ್ಮಾ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ಸೋಮವಾರ ನಡೆಯಲಿದ್ದು, ಮೃತರ ಅಂತಿಮ ದರ್ಶನಕ್ಕೆ ಪಡೆಯಲು ಬೆಳಿಗ್ಗೆ 9-30 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೃತರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.