ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೆ ಅರಳಿದ ಬ್ರಹ್ಮ ಕಮಲ

ಅಂಕೋಲಾ : ಭಾರತ ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಹಾಟ್ರಿಕ್ ಗೆಲುವಿನೊಂದಿಗೆ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರ ಮನೆಯ ಕೈತೋಟದಲ್ಲಿ ಅರಳಿದ ಬ್ರಹ್ಮ ಕಮಲ ಜನರ ಗಮನ ಸೆಳೆಯಿತು.
ಯಲ್ಲಾಪುರ ತಾಲೂಕಿನ ಶಾರದಾ ಗಲ್ಲಿಯ ನಿವಾಸಿ ಯಾದವ ಎಸ್. ರೇವಣಕರ್ ಎಂಬುವವರ ಮನೆಯಲ್ಲಿ ವಾರ ರಾತ್ರಿ ಬ್ರಹ್ಮ ಕಮಲ ಹೂ ಅರಳಿದೆ. ಮನೆಯ ಮಂದಿಯೆಲ್ಲ ಬ್ರಹ್ಮ ಕಮಲ ಅರಳಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಿಶೇಷತೆ ಏನೆಂದರೆ ಮೋದಿಯವರು ಪ್ರಧಾನಿಯಾಗಿ 3 ನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಕಮಲ ಅರಳಿರುವುದು ವಿಶೇಷ ಎನ್ನಲಾಗುತ್ತಿದೆ.
ವರ್ಷದಲ್ಲಿ ಒಂದು ರಾತ್ರಿ ಮಾತ್ರ ಅರಳುವ ಈ ಹೂವು ಮುಂಜಾನೆಯಾಗುತ್ತಿದ್ದAತೆ ಒಣಗಿ ಹೋಗುತ್ತವೆ. ಈ ಹೂವು ಔಷಧೀಯ ಬಳಕೆಯನ್ನು ಸಹ ಹೊಂದಿದೆ, ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅಭ್ಯಾಸ ಮಾಡುವವರು ಅಥವಾ ನಂಬುವವರಿ0ದ ಇದನ್ನು ಪೂಜಿಸಲಾಗುತ್ತದೆ. ಮತ್ತೊಂದು ಕುತೂಹಲಕಾರಿ ನಂಬಿಕೆಯ ಪ್ರಕಾರ ಬ್ರಹ್ಮ ಕಮಲ ಅರಳುವಾಗ ಯಾರು ತಮ್ಮ ಆಸೆಯನ್ನು ಹೇಳಿಕೊಳ್ಳುತ್ತಾರೋ ಅವರ ಆಸೆಗಳೆಲ್ಲವೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ.
ಬ್ರಹ್ಮ ಕಮಲವನ್ನು ರಾತ್ರಿ ರಾಣಿಯೆಂತಲೂ ಕರೆಯುವ ದೈವಿಕ ಹೂವು ಇದಾಗಿದೆ. ಈ ಹಿಂದೆ 3 ಬಾರಿ ಗಿಡಕ್ಕೆ ಬ್ರಹ್ಮ ಕಮಲದ ಹೂವು ಆಗಿತ್ತು. ಇದೀಗ ನಮ್ಮ ಮನೆಯಲ್ಲಿ ವಿಶೇಷ ದಿನದಂದು ಅರಳಿದ ಬ್ರಹ್ಮ ಕಮಲದ ಚಿತ್ರವನ್ನು ನಾಗೇಶ್ವರ ಯಾದವ ರೇವಣಕರ್ ಪತ್ರಿಕೆಗೆ ಕಳುಹಿಸಿದ್ದಾರೆ.