TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಮಗುವಾಗಿ ಜನ್ಮ ತಳೆದ ಶ್ರೀ ಶಾಂತಾದುರ್ಗೆಗೆ ತೊಟ್ಟಿಲು ತೂಗಿದ ಗುನಗರು

Jun 21, 2024 | ವಿಶೇಷ |

ಮಗುವಾಗಿ ಜನ್ಮ ತಳೆದ ಶ್ರೀ ಶಾಂತಾದುರ್ಗೆಗೆ ತೊಟ್ಟಿಲು ತೂಗಿದ ಗುನಗರು

ಮಗುವಾಗಿ ಜನ್ಮ ತಳೆದ ಶ್ರೀ ಶಾಂತಾದುರ್ಗೆಗೆ ತೊಟ್ಟಿಲು ತೂಗಿದ ಗುನಗರು

ರಾಘು ಕಾಕರಮಠ.

ಅಂಕೋಲಾ : ತಾಲೂಕಿನ ಒಡತಿ ಭೂಮ್ತಾಯಿ ಶ್ರೀ ಶಾಂತಾದುರ್ಗಾ ದೇವರಿಗೆ ಗುರುವಾರದಂದು ಹುಟ್ಟಿದ ವೈಭವದ ಸಂಭ್ರಮ. ಈ ಸಂಭ್ರಮದಲ್ಲಿ ಶ್ರೀ ಶಾಂತಾದುರ್ಗೆಯ ಪ್ರತೀಕವಾದ ಶಿಶುವನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಸಾಂಪ್ರದಾಯಿಕ ಆಚರಣೆ ನಡೆಸಲಾಯಿತು.

ಹೌದು.. ಅಂಕೋಲೆಯ ಅಧಿದೇವತೆ ಶ್ರೀ ಶಾಂತಾದುರ್ಗೆಗೆ ತನ್ನದೇ ಆದ ಮಹತ್ವಪೂರ್ಣ ಇತಿಹಾಸವಿದೆ. ಶಾಂತಾದುರ್ಗೆ ಎಂದೊಡನೆ ನಮಗೆ ಬಂಡಿಹಬ್ಬದ ವೈಭವ ಕಳೆ ಕಟ್ಟುತ್ತದೆ. ಇಂಥ ಭವ್ಯ ಪರಂಪರೆಯ ಇತಿಹಾಸವಿರುವ ಶ್ರೀ ಶಾಂತಾದುರ್ಗೆ ದೇವತೆಯ ಹುಟ್ಟಿದ ದಿನದ ಆಚರಣೆಯು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ವೈಶಿಷ್ಠಪೂರ್ಣ ಪದ್ಧತಿಯನ್ನು ಕುಂಬಾರಕೇರಿಯ ಕಳಸ ದೇವಸ್ಥಾನದ ಪಕ್ಕದಲ್ಲಿ ಜಟಗನ ಆವಾಸ ಸ್ಥಾನದಲ್ಲಿ ಸಾಕ್ಷೀಕರಿಸುತ್ತದೆ.

ಹಿಟ್ಟಿನ ಬೊಂಬೆಯಲ್ಲಿ ಮೈ ತಳೆದ ಶಾಂತಾದುರ್ಗೆ :

ತೊಟ್ಟಿಲ ಜಟಗನ ಹಬ್ಬದಂದು ಭೂಮ್ತಾಯಿ ಶ್ರೀ ಶಾಂತಾದುರ್ಗಾ ದೇವರ ಕಳಸದ ಬಂಗಾರದ ಗಿಂಡಿಯನ್ನು ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ಕಳಸ ದೇವಸ್ಥಾನದಲ್ಲಿ ಸಿದ್ಧಪಡಿಸಿದ ಉಪಹಾರದೊಂದಿಗೆ ಕಳಸದ ಗಿಂಡಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ತೊಟ್ಟಿಲ ಜಟಗನ ಎದುರಿನಲ್ಲಿ ಕಟ್ಟಿದ ಬಾಳೆ ಹಂಬೆಯ ತೊಟ್ಟಿಲಿನಲ್ಲಿ ಅಕ್ಕಿ ಹಿಟ್ಟಿನಿಂದ ರೂಪಿಸಿದ ಭೂತಾಯಿಯ ಪ್ರತೀಕದ ಶಿಶುವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಭೂತಾಯಿಯು ಹುಟ್ಟಿದ ದಿನವನ್ನು ತೊಟ್ಟಿಲ ಜಟಗನ ಹಬ್ಬವೆಂಬ ನಂಬಿಕೆ ಇದೆ.

ಶ್ರದ್ಧಾ ಭಕ್ತಿಯೊಂದಿಗೆ ಆಚರಣೆಗೊಳ್ಳುವ ತೊಟ್ಟಿಲ ಜಟಗನ ಹಬ್ಬದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಹರಕೆಯನ್ನು ಒಪ್ಪಿಸುತ್ತಾರೆ. ಮಕ್ಕಳಾಗದವರು ಪೂಜಿಸಿದಲ್ಲಿ ಮಕ್ಕಳಾಗುತ್ತವೆ. ಎಂಬ ನಂಬಿಕೆ ಎಲ್ಲರಲ್ಲಿದೆ. ತೊಟ್ಟಿಲ ಜಟಗನ ಹಬ್ಬ ಆರಂಭವಾದ ನಂತರ ಭೂತಾಯಿಯ ದೇವಸ್ಥಾನದಲ್ಲಿ ಸೋಮವಾರದ ಪೂಜೆ ಸೇರಿದಂತೆ ಇತರೇ ಸೇವಾ ಕಾರ್ಯಗಳು ಆರಂಭಗೊಳ್ಳುವ ಪರಿಪಾಠ ರೂಢಿಯಲ್ಲಿದೆ.

ಕಳಸ ಹೊರುವ ಗುನಗ ಉದಯ ಗುನಗಾ, ಹಾಗೂ ಬಿಡಿ ಗುನಗಾ ವಾಸುದೇವ ಗುನಗಾ ಹಾಗೂ ಜಟಕನ ತೊಟ್ಟಿಲ ಜಟಗನ ಪೂಜೆಯನ್ನು ಅಲಗೇರಿಯ ಅಣ್ಣಪ್ಪ ಕೃಷ್ಣಾ ಗುನಗಾ ಪೂಜಾ ಕೈಂಕರ್ಯ ನೆರವೇರಿಸಿದರು. ವಿಘ್ನೇಶ್ವರ ಗುನಗಾ, ನಾರಾಯಣ ಗುನಗಾ, ಅರುಣ ಗುನಗಾ ಸಹಕರಿಸಿದರು.

ಏನಿದು ತೊಟ್ಟಿಲ ಜಟಗನ ಹಬ್ಬ :

ಅಂಕೋಲೆಯ ಸಮಸ್ತ ಜನರ ಗ್ರಾಮ ದೇವತೆಯಾಗಿ ಭೂಮ್ತಾಯಿ ಶ್ರೀ ಶಾಂತಾದುರ್ಗಾ ಗುರುತಿಸಿಕೊಂಡಿದ್ದಾಳೆ. ಭೂಮಿ ದೇವತೆ, ಶ್ರೀ ಶಾಂತಾದುರ್ಗಾ ಎಂದು ಭಕ್ತ ಜನರು ಭಕ್ತಿ ಭಾವದಿಂದ ಪೂಜಿಸುವ ಭೂಮ್ತಾಯಿ ದೇವರ ಬಂಡಿಹಬ್ಬವು ಬುದ್ಧ ಪೂರ್ಣಿಮೆಯಂದು ನಡೆಯುತ್ತದೆ. ಸುಮಾರು 15 ದಿನಗಳ ಕಾಲ ನಡೆಯುವ ಬಂಡಿಹಬ್ಬದ ಆಚರಣೆಯ ಆರಂಭ ಆವಾರೆಯೊಂದಿಗೆ ಚಾಲನೆಗೊಳ್ಳುತ್ತದೆ. ಆವಾರೆಯೊಂದಿಗೆ ಭೂಮ್ತಾಯಿ ದೇವರ ಉಪಹಾರ ಸೇವೆ, ಪ್ರಸಾದ ಹಚ್ಚುವುದು, ಸುವರ್ಣಾಲಂಕಾರ ಪೂಜೆ ಪದ್ಧತಿಗಳು ಕೊನೆಗೊಂಡರೆ, ತೊಟ್ಟಿಲ ಜಟಗನ ಹಬ್ಬದೊಂದಿಗೆ ಮತ್ತೆ ಸೇವೆಗಳು ಆರಂಭಗೊಳ್ಳುವುದು ವಾಡಿಕೆ.

ತೊಟ್ಟಿಲ ಜಟಗ ಹಬ್ಬವೆಂದರೆ ಶ್ರೀ ಭೂಮ್ತಾಯಿ ಶ್ರೀ ಶಾಂತಾದುರ್ಗೆ ಹುಟ್ಟಿದ ದಿನ ಎಂದು ನಮೆಲ್ಲರ ನಂಬಿಕೆಯಾಗಿದೆ. ಶ್ರೀ ದೇವರನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಸಂಭ್ರಮಿಸಲಾಗುತ್ತದೆ. ಸಂತಾನ ಇಲ್ಲದವರು ತೊಟ್ಟಿಲು ತೂಗಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ಶ್ರೀ ದೇವರು ಎಲ್ಲರ ಸಂಕಲ್ಪಗಳನ್ನು ಈಡೇರಿಸಲಿ

ವಾಸುದೇವ ಗುನಗಾ. ಬಿಡಿ ಗುನಗಾ.

Share:

Rate:

Previousಹುಲಿದೇವರವಾಡಾದಲ್ಲಿ ರಾತ್ರಿಯಾದೊಡನೆ ಮನೆಯಿಂದ ಹೊರ ಬೀಳಲು ಹೆದರುತ್ತಿರುವ ಜನ
Nextಹಿಲ್ಲೂರಿನಲ್ಲಿ ತಾಯಿ-ಮಗಳ ಡಬಲ ಮರ್ಡರ್..!

Related Posts

ಅಲಗೇರಿ ಕ್ರಾಸ ಬಳಿ IRB ರಸ್ತೆ ಡಿವೈಡರ ಹಾಗೂ ಮಲ್ಟಿ ಸ್ಪೆಸಾಲಟಿ ಆಸ್ಪತ್ರೆಗಾಗಿ ಜ 9 ಕ್ಕೆ ಅರೆಬೆತ್ತಲೆ ಮೆರವಣಿಗೆ

ಅಲಗೇರಿ ಕ್ರಾಸ ಬಳಿ IRB ರಸ್ತೆ ಡಿವೈಡರ ಹಾಗೂ ಮಲ್ಟಿ ಸ್ಪೆಸಾಲಟಿ ಆಸ್ಪತ್ರೆಗಾಗಿ ಜ 9 ಕ್ಕೆ ಅರೆಬೆತ್ತಲೆ ಮೆರವಣಿಗೆ

January 8, 2024

ನಿರ್ಗಮಿತ ಜಿಲ್ಲಾಧಿಕಾರಿಗೆ ಜನಶಕ್ತಿ ಸನ್ಮಾನ

ನಿರ್ಗಮಿತ ಜಿಲ್ಲಾಧಿಕಾರಿಗೆ ಜನಶಕ್ತಿ ಸನ್ಮಾನ

August 2, 2023

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

July 8, 2023

ಪಾರ್ಟಿಗೆ ಹೋದವರಲ್ಲಿ ಒರ್ವ ನೀರಿಗೆ ಬಿದ್ದು ನಾಪತ್ತೆ : ಬೊಬ್ರವಾಡದ ಸುಹಾಸ್ ಪಾಂಡುರಂಗ ನಾಯ್ಕನ ಹುಡುಕಾಟದಲ್ಲಿ ಕಾರ್ಯಾಚರಣೆಗೆ ಇಳಿದ ಅಗ್ನಿ ಶಾಮಕ ಹಾಗೂ ಪೊಲೀಸ್ ಇಲಾಖೆ

ಪಾರ್ಟಿಗೆ ಹೋದವರಲ್ಲಿ ಒರ್ವ ನೀರಿಗೆ ಬಿದ್ದು ನಾಪತ್ತೆ : ಬೊಬ್ರವಾಡದ ಸುಹಾಸ್ ಪಾಂಡುರಂಗ ನಾಯ್ಕನ ಹುಡುಕಾಟದಲ್ಲಿ ಕಾರ್ಯಾಚರಣೆಗೆ ಇಳಿದ ಅಗ್ನಿ ಶಾಮಕ ಹಾಗೂ ಪೊಲೀಸ್ ಇಲಾಖೆ

October 15, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy