ಇನ್ಟಾಗ್ರಾಮ್‌ನಲ್ಲಿ ಪ್ರೇಮದ ಬಲೆಗೆ ಸಿಲುಕಿ ನಾಪತ್ತೆಯಾಗಿದ್ದ ಯುವತಿಯನ್ನು ರಕ್ಷಿಸಿದ ಅಂಕೋಲಾ ಪೊಲೀಸರು

ರಾಘು ಕಾಕರಮಠ.
ಅಂಕೋಲಾ : ಇನ್ಟಾಗ್ರಾಮ್‌ನಲ್ಲಿ ಯುವಕನೊರ್ವನ ರೀಲ್ಸ್ಗೆ ಮರಳಾದ ತಾಲೂಕಿನ ಮೊರಳ್ಳಿಯ ಗ್ರಾಮದ ಯುವತಿಯೊಬ್ಬಳು, ಆತನ ಪ್ರೇಮದ ಹುಚ್ಚಿಗೆ ಮನೆಯಿಂದ ನಾಪತ್ತೆಯಾದವಳನ್ನು ಅಂಕೋಲಾ ಪೊಲೀಸರು ರಕ್ಷಿಸಿ ತಂದು ಪಾಲಕರಿಗೆ ಒಪ್ಪಿಸಿದ ವಿಲಕ್ಷಣ ಘಟನೆ ನಡೆದಿದೆ.
ಅಂಕೋಲಾ ಪೊಲೀಸ್ ಠಾಣೆಯ ಪಿಎಸೈ ಉದ್ಧಪ್ಪ ಧರೆಪ್ಪನವರ್, ಅಫರಾಧ ದಳದ ಸಿಬ್ಬಂದಿ ಶ್ರೀಕಾಂತ ಕಟಬರ, ಸಿಬ್ಬಂದಿ ಶಿಲ್ಪಾ ಗೌಡ ಅವರು ಅಂತೂ ಯುವತಿಯನ್ನು ರಕ್ಷಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ಟಾಗ್ರಾಮ್‌ದಲ್ಲಿ ಪೇಮದ ಖೆಡ್ಡಾಕ್ಕೆ :
19 ರ ಪ್ರಾಯದ ಈ ಯುವತಿ ಗ್ರಾಮದಲ್ಲಿ ಅತ್ಯಂತ ಸೌಮ್ಯವಾಗಿ, ಮಿತ ಮಾತಿನೊಂದಿಗೆ ಎಲ್ಲರೊಂದಿಗೆ ಚೆನ್ನಾಗಿದ್ದಳು. ಹಾಗೆ ಪ್ರತಿಭಾವಂತೆ ಕೂಡ ಆಗಿದ್ದಳು. ಈ ಯುವತಿಗೆ ಇನ್ಟಾಗ್ರಾಮ್‌ದಲ್ಲಿ ದಾಂಡೇಲಿ ಯುವಕನೊರ್ವನ ಪರಿಚಯವಾಗಿದೆ. ಆತನ ರೀಲ್ಸ್ಗೆ ಈ ಯುವತಿ ಪ್ರೇಮದ ಖೆಡ್ಡಾಕ್ಕೆ ಬಿದ್ದಿದ್ದಾಳೆ.
ಇನ್ಟಾಗ್ರಾಮ್‌ದಿಂದ ಪರಸ್ಪರ ಮೇಸೆಜ್, ಕಾಲ್ ಎಲ್ಲವೂ ನಡೆದಿದೆ. ಕೊನೆಗೆ ಬಿಟ್ಟಿರಲಾರದಷ್ಟು ಈ ಯುವತಿಯಲ್ಲಿ ಪ್ರೇಮವು ಚಿಗುರೊಡೆದು ನಿಂತಿದೆ. ಕೊನೆಗೆ ದಾಂಡೇಲಿಯ ಆ ರೀಲ್ಸ್ ಹಿರೋನೊಂದಿಗೆ ಜೀವನದ ಬಂಡಿ ಸಾಗಿಸಬೇಕು ಎಂಬ ನಿರ್ಧಾರದಿಂದ ಮನೆಯಿಂದ ನಾಪತ್ತೆಯಾಗುವ ತಿರ್ಮಾನಕ್ಕೆ ಬಂದಿದ್ದಾಳೆ.
ನಿರುದ್ಯೋಗಿ ಪೇಮಿ :
ಇನ್ಟಾಗ್ರಾಮ್‌ನಲ್ಲಿ ಯುವಕನ ನವನವೀನ ರೀಲ್ಸ್ ಕಂಡ ಯುವತಿ ಮನೆಯಲ್ಲಿ ಬೆಂಗಳೂರಿಗೆ ಕೆಲಸ ಹೋಗೆತ್ತೇಂದು ಹೇಳಿ ಮನೆಯಲ್ಲಿ ತೆರಳಿದ್ದಳು. ಆದರೆ ಆಕೆ ಪ್ರಯಾಣಿಸಿದ್ದು ಮಾತ್ರ ದಾಂಡೇಲಿಯ ಪ್ರೇಮಿಯ ಹೃದಯದ ಗೂಡಿಗೆ ಆಗಿತ್ತು. ದಾಂಡೇಲಿಗೆ ತೆರಳಿ ನೋಡಿದರೆ ಆತನ ನಿರುದ್ಯೋಗಿಯಾಗಿದ್ದ. ಮೋಬೈಲ ಬಿಟ್ಟರೆ ಆತನಲ್ಲಿ ಇನ್ನೇನು ಇರದೆ ಆತ ಬಿಕಾರಿಯಂತೆ ನಿಂತಿದ್ದ.
ಒಂದೆರೆಡು ದಿನದಲ್ಲಿ ಈ ರೀಲ್ಸ್ ಪ್ರೇಮಿಯ ಅಸಲಿಯತ್ತು ಈ ಯುವತಿಗೆ ಮನವರಿಕೆಯಾಗಿದೆ. ಇತ ಬೇಡಾ ಎಂಬುವಷ್ಟರ ಮಟ್ಟಿಗೆ ಆಕೆಯ ಪ್ರೀತಿ ದಡಕ್ಕೆ ಬಂದು ನಿಂತಿತ್ತು. ಆದರೆ ಏನು ಮಾಡಲು ಸಾಧ್ಯವಾಗದೆ ಆ ಯುವತಿ ಅತಂತ್ರತೆಯಿ0ದಲೆ ಕಾಲ ಕಳೆಯುವಂತಾಗಿತ್ತು.
ಪೊಲೀಸ್ ಠಾಣೆಗೆ ಬಂದ ತಾಯಿ ಕರಳು ;
ಇತ್ತ ಯುವತಿಯ ತಾಯಿ ಅಂಕೋಲಾ ಪೊಲೀಸ್ ಠಾಣೆಗೆ ಬಂದು ತನ್ನ ಮಗಳು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೆನೆಂದು 22-06-2024 ಸಂಜೆ 7 ಗಂಟೆಗೆ ರಂದು ಮನೆಯಿಂದ ಹೋದವಳು. ಇದುವರೆಗೂ ಬೆಂಗಳೂರಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಈಕೆಯನ್ನು ಹುಡುಕಿ ಕೊಡುವಂತೆ ಪೊಲೀಸ್ ದೂರು ನೀಡಿದ್ದಳು. ಪಿಎಸೈ ಉದ್ಧಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ಮುಂದಾಗಿದ್ದರು.
ತಾಂತ್ರಿಕ ಸಾಕ್ಷಿಯೊಂದಿಗೆ ಪಿಎಸೈ ಉದ್ಧಪ್ಪ ಧರೆಪ್ಪನವರ್, ಅಫರಾಧ ದಳದ ಸಿಬ್ಬಂದಿ ಶ್ರೀಕಾಂತ ಕಟಬರ, ಸಿಬ್ಬಂದಿ ಶಿಲ್ಪಾ ಗೌಡ ಅವರು ಯುವತಿ ಇದ್ದಲ್ಲಿಗೆ ತೆರಳಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲನಿಂದ ದೂರ ಇಡಿ :
ಮೊಬೈಲ ಮೋಹಕ್ಕೆ ಯುವತಿಯರು ಹೆಚ್ಚಾಗಿ ಮರಳಾಗಿ ತಮ್ಮ ಜೀವನಕ್ಕೆ ಕಪ್ಪು ಚುಕ್ಕೆ ಅಂಟಿಸಿಕೊಳ್ಳುತ್ತಿರುವ ವಿದ್ಯಮಾನ ಹೆಚ್ಚಾಗುತ್ತಿದೆ. ದಯವಿಟ್ಟು ಮೊಬೈಲನಿಂದ ಆದಷ್ಟು ಮಕ್ಕಳನ್ನು ದೂರ ಇಡಲು ಪಾಲಕರು ಇಚ್ಛಾಶಕ್ತಿ ಪ್ರದರ್ಶಿಸಬೇಕು.
ಶ್ರೀಕಾಂತ ತೋಟಗಿ.
ಸಿಪಿಐ ಅಂಕೋಲಾ ಅಂಕೋಲಾ ಪೊಲೀಸ್ ಠಾಣೆ.