ಅಂಕೋಲಾದಲ್ಲಿ ನಾಗ ಮೂರ್ತಿಯೆ ನಾಪತ್ತೆ
ನಾಗರಾಧನೆ ಮಾಡದೆ ನಿರಾಶೆಯಿಂದ ತೆರಳಿದ ಭಕ್ತರು

ಅಂಕೋಲಾ : ಶುಕ್ರವಾರದಂದು ಎಲ್ಲೆಡೆ ನಾಗರಪಂಚಮಿಯ ಸಂಭ್ರಮ ಒಂದೆಡೆಯಾದರೆ, ಇನ್ನೊಂದಡೆ ನಾಗಾರಾಧೆನೆಗಾಗಿ ಭಕ್ತರು ಪೂಜಿಸಲು ಬಂದರೆ ನಾಗ ಮೂರ್ತಿಯೆ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಆರಾಧಕರು ನಿರಾಶೆಯಿಂದ ತೆರಳಿದ ಘಟನೆ ಇಲ್ಲಿಯ ಗುಡಿಗಾರಗಲ್ಲಿಯಲ್ಲಿ ನಡೆದಿದೆ.
ಪಟ್ಟಣದ ಗುಡಿಗಾರಗಲ್ಲಿಯ ಪ್ರಾನ್ಸಿಸ್ ಫರ್ನಾಂಡಿಸ್ ಅವರ ಮನೆಯ ಹಿಂಬದಿಯಲ್ಲಿ ಸುಮಾರು ೪೫೦ ವರ್ಷಗಳ ಇತಿಹಾಸವಿರುವ ನಾಗ ಹಾಗೂ ಚೌಡೇಶ್ವರಿ ಸೇರಿದಂತೆ ಶಾಸನವಿರುವ ಇನ್ನು ಎರಡು ಮೂರ್ತಿ ಇದ್ದವು.
ನಾಗಪಂಚಮಿಯAದು ಇಲ್ಲಿ ಅನೇಕ ಭಕ್ತರು ಬಂದು ಪೂಜೆ ಸಲ್ಲಿಸಿ, ಸಂಕಲ್ಪಿತ ಹಾಗೂ ಸಾಂಪ್ರದಾಯಿಕ ಹರಕೆ ಸಮರ್ಪಿಸುತ್ತ ಧನ್ಯತೆ ಮೆರೆಯುತ್ತಿದ್ದರು. ಈ ಮೂರ್ತಿ ಇದ್ದ ಸನಿಹದಲ್ಲೆ ಗ್ಯಾರೇಜ್ ನಡೆಸುತ್ತಿರುವ ಮೆಕ್ಯಾನಿಕ್ ಮಂಜುನಾಥ ನಾರಾಯಣ ನಾಯ್ಕ. ಮಂಜಗುಣಿ ಅವರು ನಾಗ ಪಂಚಮಿಯ ಸಂದರ್ಭದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದರು.
ನಾಗಪಂಚಮಿಯ ಹಿನ್ನಲೆಯಲ್ಲಿ ಬುಧವಾರದಂದು ಮೂರ್ತಿಯನ್ನು ಸ್ವಚ್ಛಗೊಳಿಸಿ ತೆರಳಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಪೂಜೆಗೆಂದು ಭಕ್ತರು ಬಂದಾಗ ಅಲ್ಲಿಂದ ನಾಲ್ಕು ಕಲ್ಲಿನ ವಿಗ್ರಹಗಳು ನಾಪತ್ತೆಯಾಗಿದ್ದರಿಂದ ಭಕ್ತರು ಒಮ್ಮೆಲೆ ಆತಂಕಕ್ಕೆ ಆಳಗಾಗುವಂತಾಯಿತು.
ಈ ನಾಗ ಮೂರ್ತಿ ಇದ್ದ ಸ್ಥಳವು ಅನ್ಯಕೋಮು ಸಮೂದಾಯದ ಸ್ಥಳದಲ್ಲಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಅಂಕೋಲಾದಲ್ಲಿ ಭಾರಿ ಚರ್ಚೆಗೆ ಗ್ರಾಸ್ವಾಗಿದ್ದು, ಈ ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹಿಂದು ಕಾರ್ಯಕರ್ತರು ಮುಂದಾಗಿದ್ದಾರೆ. ನಾಗ ಮೂರ್ತಿಯ ವಿಗ್ರಹ ನಾಪತ್ತೆಯಾಗಿರುವ ವಿದ್ಯಮಾನವು ತೀವ್ರ ಕೂತುಹಲಕ್ಕೆ ಎಡೆಮಾಡಿ ಕೊಟ್ಟಿದೆ.
——————————-
ಶೆಟಗೇರಿಯ ಶ್ರೀ ಕ್ಷೇತ್ರದಲ್ಲಿ ನಾಗಾರಾಧನೆ

ಅಂಕೋಲಾ : ತಾಲೂಕಿನ ಶಕ್ತಿ ಸ್ಥಳ ಶೆಟಗೇರಿಯ ಶ್ರೀ ಕ್ಷೇತ್ರ ವರಮಹಾಗಣಪತಿ ದೇವಸ್ಥಾನದ ಆವಾರ ದಲ್ಲಿರುವ ನಾಗದೇವನಿಗೆ ಶುಕ್ರವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ವಿಶೇಷ ನಾಗಪೂಜೆ ನಡೆಯಿತು.
ದೇವಸ್ಥಾನದ ದರ್ಮದರ್ಶಿ ಅನುಪ ನಾರಾಯಣ ನಾಯಕ ದಂಪತಿಗಳು ಪೂಜಾ ಕೈಕಂರ್ಯ ನಡೆಸಿಕೊಟ್ಟರು.
ಅರ್ಚಕ ನಾಗೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು, ಹಾಲೆರೆದು ಪೂಜೆ ಸಮರ್ಪಿಸಿ ಶ್ರೀ ದೇವರ ನಾಗಾರಾಧನೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.
ಈ ಸಂದರ್ಭದಲ್ಲಿ ಬೀರಮ್ಮಾ ನಾರಾಯಣ ನಾಯಕ, ಪ್ರಕೃತಿ ಅನುಪ ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.