ಯಾವುದೇ ಪರವಾನಿಗೆ ಇಲ್ಲದೆ ಮರಗಳ ಮಾರಣ ಹೋಮ :
ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ

ಅಂಕೋಲಾ : ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಬೃಹತ ಮರಗಳನ್ನು ಕಡಿದ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಗುಡಿಗಾರಗಲ್ಲಿಯ ನಾಗವನದ ಪಕ್ಕದಲ್ಲಿ ಇದ್ದ ಎನ್ನಲಾದ ಮಾವು, ಅಂಟುವಾಳ, ಹಾಗೂ ಜಂಗಲಿ ಮರಗಳು ಯಾವುದೇ ಪರವಾನಿಗೆ ಇಲ್ಲದೆ ಕಡಿತ ಮಾಡಿದ ಹಿನ್ನಲೆಯಲ್ಲಿ ಕರ್ನಾಟಕ ಮರಗಳ ಅಧಿನಿಯಮ ಕಾಯ್ದೆಯ ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ.
ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಹೋದಾಗ ಕೇವಲ ಮರದ ಬುಡುಚಿಗಳು ಇರುವದು ಮಾತ್ರ ಕಂಡು ಬಂದಿದೆ. ಮರದ ತುಂಡುಗಳ ಪತ್ತೆಗೂ ಸಹ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಆರ್.ಎಚ್. ನಾಯ್ಕ, ಗಸ್ತು ಅರಣ್ಯ ಪಾಲಕ ವೆಂಕಟರಾಯ ನಾಯಕ, ಅರಣ್ಯ ವೀಕ್ಷಕ ಚೇತನ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು. ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದಾರೆ.
