
ಟಾಕ್ಸಿ ಚಾಲಕರ ಹಾಗೂ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಅಂಕೋಲಾ ; ಶ್ರೀ ಸಿದ್ಧಿ ವಿನಾಯಕ ಟಾಕ್ಸಿ ಚಾಲಕರ ಹಾಗೂ ಮಾಲಕರ ಸಂಘ(ರಿ) ದ ನೂತನ ಅಧ್ಯಕ್ಷರಾಗಿ ರಮಾಕಾಂತ (ಗಜು) ಮಾದೇವ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಕ್ಷಯ ದಿನಕರ ಅಂಕೋಲೆಕರ, ಕಾರ್ಯದರ್ಶಿಯಾಗಿ ಸತೀಶ ಬಿ. ಕಾಮತ, ಸಹಕಾರ್ಯದರ್ಶಿಯಾಗಿ ಪ್ರವೀಣ ಎಸ್. ಕೇಣಿಕರ, ಖಜಾಂಚಿಯಾಗಿ ವಿಘ್ನೇಶ್ವರ (ಚೇತು) ನಾಯ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಂದ್ರಕಾAತ ಎಮ್. ನಾಯ್ಕ, ಅಶೋಕ ಎಚ್, ನಾಯ್ಕ, ರಫೀಕ ಶೇಖ, ಪ್ರದೀಪ ಬಂಟ, ವಿವೇಕ ನಾಯ್ಕ, ಚಂದ್ರಹಾಸ ನಾಯ್ಕ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರವೀಣ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷ ರಮಾಕಾಂತ (ಗಜು) ಮಾದೇವ ನಾಯ್ಕ ಅಧಿಕಾರ ಸ್ವೀಕರಿಸಿ ಮಾತನಾಡಿ ಟಾಕ್ಸಿ ಚಾಲಕರ ಹಾಗೂ ಮಾಲಕರು ಅನೇಕ ಸಂಕಷ್ಠಗಳ ನಡುವೆ ನಮ್ಮ ವೃತ್ತಿಯನ್ನ ನಿರ್ವಹಿಸುತ್ತಿದ್ದೇವೆ.. ಮುಂದಿನ ದಿನಗಳಲ್ಲಿ ಟಾಕ್ಸಿ ಚಾಲಕರ ಹಾಗೂ ಮಾಲಕರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿ ಸಂಘವನ್ನು ಸಂಘಟಿಸಲಾಗುವದು ಎಂದರು.