ಪತ್ನಿ ನಾಪತ್ತೆ : ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪತಿ

ವರದಿ: ದಿನಕರ ನಾಯ್ಕ ಅಲಗೇರಿ.
ಅಂಕೋಲಾ : ತನ್ನ ಪತ್ನಿ ಹಾಗೂ ಪುತ್ರಿ ನಾಪತ್ತೆಯಾಗಿದ್ದು ಅವರನ್ನು ಹುಡುಕಿಕೊಡುವಂತೆ ಎಂದು ಪತಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೀಡಿದ್ದಾರೆ.
ಕಣಗಿಲದ ಗಿರಿಜಾ ಬಾಲಚಂದ್ರ ಆಗೇರ (ಪ್ರಾಯ 32 ವರ್ಷ) ನಾಪತ್ತೆಯಾದವಳಾಗಿದ್ದಾಳೆ. ನಾಪತ್ತೆಯಾದ ಗೀರಿಜಾ ಬಾಲಚಂದ್ರ ಆಗೇರ ಈಕೆ ಸೂರ್ವೆಯಿಂದ ಯಾವುದೋ ಕೆಲಸಕ್ಕೆ ಅಂಕೋಲಾಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಇದೂವರೆಗೂ ವಾಪಸ್ ಮನೆಗೆ ಬಾರದೇ. ಪೋನ್ ಸಂಪರ್ಕಕ್ಕೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಪತಿ ಬಾಲಚಂದ್ರ ಮೋಹನ ಆಗೇರ ದೂರಿನಲ್ಲಿ ನಮೂದಿಸಿದ್ದಾರೆ. ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನುನೂ ಕ್ರಮ ಕೈಗೊಂಡಿದ್ದಾರೆ.
ಇವರ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 ಅಥವಾ 9480805268 ನಂಬರಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.