ಅಕ್ರಮ ಮರಳು ಮಾಫಿಯಾಕ್ಕೆ ಸಿಂಹಸ್ವಪ್ನವಾದ ಸಿಪಿಐ ಚಂದ್ರಶೇಖರ ಮಠಪತಿ
ಸಿಪಿಐ ಚಂದ್ರಶೇಖರ ಮಠಪತಿ ಅವರ ದಕ್ಷತೆಗೆ ಕೆಸರು ಅಂಟಿಸಲು ಮುಂದಾದ ಅಕ್ರಮ ದಂಧೆಕೋರರು.

ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ತಾಲೂಕಿನಲ್ಲಿ ನಡೆಯುತ್ತಿರುರುವ ಅಕ್ರಮ ಮರಳು ಮಾಫಿಯಾ ಕಡಿವಾಣಕ್ಕೆ ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರ ದಕ್ಷತೆಗೆ ಕೆಸರು ಅಂಟಿಸಲು ಮರಳು ಮಾಫಿಯಾದವರು ಸಂಚು ಹಣೆಯುತ್ತಿರುವ ವಿದ್ಯಮಾನವು ಕೂಡ ಗುಟ್ಟಾಗಿ ನಡೆಯುತ್ತಿದೆ.
ಅಂಕೋಲಾದಕ್ಕೆ ಪೊಲೀಸ್ ನೀರಿಕ್ಷಕರಾಗಿ ಚಂದ್ರಶೇಖರ ಮಠಪತಿ ಅವರು ಅಧಿಕಾರ ಸ್ವೀಕರಿಸಿದ ಕೆಲವೆ ದಿನಗಳಲ್ಲಿ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ತಮ್ಮ ದಕ್ಷತೆ ಪ್ರದರ್ಶಿಸಿದ್ದರು.
ಭಾನುವಾರ ಬುಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಅಂಕೋಲಾ ಪೊಲೀಸರು ದಾಳಿ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ಈ ಅಕ್ರಮ ಮರಳು ಸಾಗಾಟದ ಪ್ರಕರಣದಲ್ಲಿ ಮಂಗೇಶ ಗೌಡ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ವಾಹನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ನೀಡಿದ್ದಾರೆ. ಪಿಎಸೈ ಸುನೀಲ ಹುಲ್ಲೊಳ್ಳಿ ದಾಳಿಯ ಕಾರ್ಯಾಚರಣೆಯ ನೇತ್ರತ್ವ ವಹಿಸಿದ್ದರು.
ಅಂಕೋಲಾ ಪೊಲೀಸರ ಖಡಕ್ ಕಾರ್ಯಾಚರಣೆಯ ಫಲವಾಗಿ ಮರಳು ಮಾಪಿಯಾ ನಲಗುತ್ತಿದೆ. ಆದರೆ ಸಿಪಿಐ ಚಂದ್ರಶೇಖರ ಮಠಪತಿ ಅವರು ಪ್ರತಿ ಬುಲೊರೊ ವಾಹನಕ್ಕೆ 30 ಸಾವಿರ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಕೊನೆಗೆ 20 ಸಾವಿರ ಆದರೂ ನೀಡಿ ಎಂದು ಹೇಳುತ್ತಿದ್ದಾರೆ. ಹಣ ನೀಡದಿದ್ದಾಗ ದಾಳಿ ನಡೆಸಲಾಗುತ್ತಿದೆ ಎಂದು ಮಾಫಿಯಾ ಗ್ಯಾಂಗ್ ವದಂತಿ ಹಬ್ಬಿಸುತ್ತಲೆ ತಮ್ಮ ಪಾರುಪತ್ಯ ಮೆರೆದಿದ್ದಾರೆ.
ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಚಂದ್ರಶೇಖರ ಮಠಪತಿ ಅವರು ತಮ್ಮ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿ ತಮ್ಮ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ದಂಧೆ ನಡೆಯದಂತೆ ನೋಡಿಕೊಳ್ಳಬೇಕು ಎ0ದು ಎಚ್ಚರಿಕೆಯ ಮೂಲಕ ಮೆಮೋ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.
