ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಅವಿರತವಾಗಿ ಶ್ರಮಿಸಿದ ಶಾಸಕ ಸತೀಶ ಸೈಲ ಅವರಿನ್ನು ಅಭಿನಂದಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ರಾಘು ಕಾಕರಮಠ.
ಅಂಕೋಲಾ : ಶಿರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆಯಲ್ಲಿ ಹಗಲು ರಾತ್ರಿ ಎನ್ನದೆ ಅವಿರತವಾಗಿ ತೊಡಗಿಸಿಕೊಂಡ ಕಾರವಾರ –ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ ಹಾಗೂ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿಶಿಷ್ಠ ಸೇವಾ ಕಾರ್ಯಕ್ಕೆ ಕೇರಳ ಸರಕಾರ ಕೃತಜ್ಞತೆ ಸಲ್ಲಿಸಿ, ಅಭಿನಂದನಾ ಪತ್ರ ಸಲ್ಲಿಸಿದೆ.
ಕೇರಳ ರಾಜ್ಯ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಅಭಿನಂದನಾ ಪತ್ರ ಸಲ್ಲಿಸಿ, ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಪ್ರಯತ್ನಗಳಿಗೆ ಕೇರಳ ಸರ್ಕಾರ ಮತ್ತು ಜನರ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
ನಮ್ಮ ಕಡೆಯಿಂದ ಬಂದ ವಿನಂತಿಗಳಿಗೆ ತಾವು ಆತ್ಮೀಯತೆಯಿಂದ ತಕ್ಷಣವೇ ಪ್ರತಿಕ್ರಿಯಿಸಿರುವದು ನಮ್ಮಲ್ಲಿ ಸಂತಸ ತಂದಿದೆ. ಶಾಸಕ ಸತೀಶ ಸೈಲ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಕಠಿಣ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೀದ್ದೇವೆ ಎಂದು ಅಭಿನಂದನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಸತೀಶ ಸೈಲ ಅವರು ಘಟನೆ ನಡೆದ ಜುಲೈ 16 ರಂದು ಬೆಂಗಳೂರಿನ ಅಧಿವೇಶನದಲ್ಲಿದ್ದರು. ಘಟನೆಯ ಕುರಿತಾಗಿ ಮಾಹಿತಿ ಬಂದ ತಕ್ಷಣವೆ ಕೂಡಲೆ ಬೆಂಗೂರಿನಿAದ ಕೇವಲ ನಾಲ್ಕು ತಾಸಿನೊಳಗೆ ಅಂಕೋಲಾಕ್ಕೆ ಆಗಮಿಸಿ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿ ಘಟನೆಯ ಕುರಿತು ಮಮ್ಮಲ ಮರಗಿದ್ದರು.
ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಂಕೋಲಾಕ್ಕೆ ಕರೆಯಿಸಿ, ಇಲ್ಲಿನ ವಾಸ್ತವ ಚಿತ್ರಣವನ್ನು ತೋರಿಸಿದ ಸತೀಶ ಸೈಲ ರಕ್ಷಣಾ ಕಾರ್ಯಕ್ಕೆ ವೇಗ ಹಾಗೂ ಸಂತ್ರಸ್ತರಿಗೆ ವಿಶೇಷ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾಯಪ್ರವೃತ್ತರಾದರು.
ತಮ್ಮ ವೈಯಕ್ತಿಕ ಕಾರ್ಯಗಳನ್ನು ಬದಿಗೊತ್ತಿ, ಹೆಚ್ಚಿನ ಸಮಯವನ್ನು ಶಿರೂರಿನ ಗುಡ್ಡ ಕುಸಿತ ರಕ್ಷಣಾ ಕಾರ್ಯದಲ್ಲಿ ವಿನಿಯೋಗಿಸಿಕೊಂಡ ಶಾಸಕ ನಸತೀಶ ಸೈಲ ಅವರು ಕಾರ್ಯಚರಣೆಯ ಪ್ರತಿ ಹಂತದಲ್ಲೂ ಸೂಕ್ತ ಮಾರ್ಗದರ್ಶನ ನೀಡುತ್ತ ಕಾರ್ಯಾಚರಣೆಯ ರಕ್ಷಣಾ ತಂಡಕ್ಕೂ ಹುಮ್ಮಸ್ಸು ತುಂಬುತ್ತಾ ಯಶಸ್ವಿ ಕಾರ್ಯಾಚರಣೆಗೆ ಪಾಲುದಾರರಾದರು.
ಇವೆಲ್ಲ ವಿದ್ಯಮಾನವನ್ನು ಸೂಕ್ಷö್ಮವಾಗಿ ವೀಕ್ಷಿಸುತ್ತಿದ್ದ ಕೇರಳ ಸರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಾಸಕ ಸತೀಶ ಸೈಲ ಅವರ ಅಪೂರ್ವ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
