ನಿಮ್ಮ ನೋವುಗಳೊಂದಿಗೆ ನಾನಿದ್ದೇನೆ ಎಂದು ವಿಶೇಷ ಚೇತನರಿಗೆ ದೈರ್ಯ ತುಂಬಿದ ಶಾಸಕ ಸತೀಶ ಸೈಲ್
ವಿಶೇಷ ಚೇತನರನ್ನು ಗೌರವದಿಂದ ಕಾಣಬೇಕು : ಶಾಸಕ ಸತೀಶ ಸೈಲ್
ವರದಿ : ಗೋಪು ನಾಯಕ. ಅಡ್ಲೂರು.
ಕಾರವಾರ.: ವಿಶೇಷ ಚೇತನರನ್ನು ಗೌರವದಿಂದ ಕಾಣಬೇಕು. ಅವರಿಗೆ ಸರ್ಕಾರದಿಂದ ದೊರೆಯುವ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು. ಅಂತಹ ಉದ್ದೇಶದಿಂದಲೇ ನಮ್ಮ ಸರ್ಕಾರ ವಿಕಲಚೇತನರಿಗಾಗಿ ಹಲವು ಸವಲತ್ತುಗಳನ್ನು ಒದಗಿಸಿಕೊಡುವ ಕಾರ್ಯ ಮಾಡುತ್ತಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ ಹೇಳಿದರು.
ತಾಲೂಕಿನ ಅಮದಳ್ಳಿ ಗ್ರಾಪಂ ವಿಶೇಷ ಗ್ರಾಮ ಸಭೆ ಹಾಗೂ ವಿಕಲಚೇತನರ ಗ್ರಾಮ ಸಭೆಯನ್ನು ಉದ್ಘಾಟಿಸಿ, ವಿಶೇಷ ಚೇತನರಿಗೆ ಗ್ರಾಪಂದ %5 ನಿಧಿಯಲ್ಲಿ ಆರು ತ್ರಿಚಕ್ರ ವಾಹನ 8 ಶ್ರವಣ ಸಾಧನ 13 ವೀಲ್ ಚೇರ್ ಮೂರು ಉರುಗೋಲು ನೀಡಿ ಮಾತನಾಡಿ ನಮ್ಮ ನಡುವೆ ನಮ್ಮ ಸಹೋದರ ಸಹೋದರಿಯರಂತೆ ಇರುವ ವಿಶೇಷ ಚೇತನರಿಗೆ ಪ್ರೀತಿ ತೋರಿಸಬೇಕು. ಅವರಿಗೆ ಸಮಸ್ಯೆ ಇರುವ ಸಂದರ್ಭದಲ್ಲಿ ಸಹಕರಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಾನು ಸಹ ನನ್ನ ಅನುದಾನದಲ್ಲಿ ನನ್ನ ಕ್ಷೇತ್ರದ ವಿಶೇಷ ಚೇತನರಿಗೆ ಹಿಂದಿನ ಅವಧಿಯಲ್ಲಿಯೂ ಹಲವಾರು ಸವಲತ್ತುಗಳನ್ನು ನೀಡಿದ್ದೇನೆ ಎನ್ನುವ ಆತ್ಮ ತೃಪ್ತಿ ನನ್ನಲ್ಲಿದೆ ಮುಂದೆಯೂ ನನ್ನ ಅಧಿಕಾರ ಅವಧಿಯಲ್ಲಿ ಮತ್ತು ವೈಯಕ್ತಿಕವಾಗಿ ವಿಶೇಷ ಚೇತನಿಗೆ ಸಹಕರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದರು.
ಹಮದಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಶಾಸಕ ಸತೀಶ ಸೈಲ್ ಕರ್ತವ್ಯ ಮತ್ತು ಬದ್ಧತೆಗೆ ಶಿರೂರಿನ ಗುಡ್ಡ ಕುಸಿತದ ಸಂದರ್ಭದಲ್ಲಿ ಅವರು ತೋರಿಸಿದ ಕಳಕಳಿ ಸಾಕ್ಷಿಯಾಗಿದೆ. ಜನಪ್ರತಿನಿಧಿ ಅಂದಮೇಲೆ ಹೊಗಳಿಕೆ ತೆಗಳಿಕೆಗಳು ಸಾಮಾನ್ಯ. ನಮ್ಮ ಗ್ರಾಪಂ ವ್ಯಾಪ್ತಿಯಿಂದ ಹಿಡಿದು ಕಾರವಾರ ಅಂಕೋಲಾ ಕ್ಷೇತ್ರಕ್ಕೆ ತನಗೆ ಬಂದ ಅನುದಾನದಲ್ಲಿ 25 ಕೋಟಿ ರೂಪಾಯಿಗಳನ್ನು ದೇವಸ್ಥಾನಗಳ ಅಭಿವೃದ್ಧಿಗೆ ತೊಡಗಿಸಿ ವಿಶೇಷ ಕರ್ತವ್ಯ ಮೆರೆದಿದ್ದಾರೆ. ಅಭಿವೃದ್ಧಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ನಮ್ಮ ಶಾಸಕರು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಘು ಭಟ್ಟ, ಪಾಪಂ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ಗೌಡ
ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ವಿಶೇಷ ಚೇತನರು ಉಪಸ್ಥಿತರಿದ್ದರು
ನಮ್ಮ ಸಮಾಜದ ಓರ್ವ ಪ್ರಮುಖರಾದ ರಾಜು ತಾಂಡೆಲ್ ರವರನ್ನು ನಾವು ಅಗಲಿದ್ದೇವೆ. ಕೆಲವರು ತಮ್ಮ ಲಾಭಕ್ಕಾಗಿ ಶಾಸಕ ಸತೀಶ ಸೈಲ್ ರವರ ಹೆಸರನ್ನು ಈ ವಿಚಾರದಲ್ಲಿ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜು ತಾಂಡೇಲ್ ಮತ್ತು ಶಾಸಕ ಸತೀಶ ಸೈಲ್ ರವರ ಬಾಂಧವ್ಯ ಅತ್ಯುತ್ತಮವಾಗಿತ್ತು. ಇಂತಹ ಉತ್ತಮ ಜನಪ್ರತಿನಿಧಿಗಳಿಗೆ ರಾಜು ತಾಂಡೇಲ್ ವಿಚಾರದಲ್ಲಿ ಕೆಟ್ಟ ಹೆಸರನ್ನು ತರುವ ಪ್ರಯತ್ನವನ್ನು ಮಾಡಿದರೂ ಯಾರು ನಂಬುವುದಿಲ್ಲ.
ದೇವಾನಂದ ಚಂಡೇಕರ್
ಸದಸ್ಯರು ಗ್ರಾಪಂ ಅಮದಳ್ಳಿ