ಅಂಕೋಲಾ ಬಸ್ ನಿಲ್ದಾಣದಲ್ಲಿ ಯುವತಿ ನಾಪತ್ತೆ
ತಂಗಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟೆಲೆಲಿದ ಅಣ್ಣ

ರಾಘು ಕಾಕರಮಠ.
ಅಂಕೋಲಾ : ಇಲ್ಲಿಯ ಬಸ್ ನಿಲ್ದಾಣದಲ್ಲಿ ಈ ಮೊದಲು ಬೈಕ್ಗಳಷ್ಟೆ ನಾಪತ್ತೆಯಾಗುತ್ತಿದ್ದವು. ಆದರೆ ಈಗೀಗ ಬಸ್ ನಿಲ್ದಾಣಕ್ಕೆ ಬರುವ ಯುವತಿಯರು ಕೂಡ ನಾಪತ್ತೆಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಯುವತಿಯೊರ್ವಳು ಕಣ್ಮರೆಯಾದ ಘಟನೆ ನಡೆದಿದೆ.

ತನ್ನ ಗೆಳತಿಯನ್ನು ಭೇಟಿಯಾಗಲು ಬಂದ ಯುವತಿಯೊರ್ವಳು ನಾಪತ್ತೆಯಾದ ಘಟನೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಪತ್ತೆಯಾದ ತನ್ನ ತಂಗಿ ಸನಾ ಯುನಸ್ ಬಿರ್ಕುಡಿಕರ ಅವಳನ್ನು ಹುಡುಕಿಕೊಡುವಂತೆ ಎಂದು ಯುವತಿಯ ಅಣ್ಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೀಡಿದ್ದಾರೆ.
ಕುಮಟಾ ತಾಲೂಕಿನ ಬೆಟ್ಕುಳಿ ಸನಾ ಯುನಸ್ ಬಿರ್ಕುಡಿಕರ (ಪ್ರಾಯ 20 ವರ್ಷ) ನಾಪತ್ತೆಯಾದವಳಾಗಿದ್ದಾಳೆ.
ನಾಪತ್ತೆಯಾದ ಸನಾ ಯುನಸ್ ಬಿರ್ಕುಡಿಕರ ಅವರ ಅಣ್ಣ ಮಹಮ್ಮದ ಬಿರ್ಕುಡಿಕರ ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿ ತನ್ನ ತಂಗಿ ಸನಾ ಹಾಗೂ ನಾನು 07-10-2024 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಅಂಕೋಲಾ ಬಸ್ ನಿಲ್ದಾಣದಲ್ಲಿ ತನ್ನ ಸ್ನೇಹಿತೆಗೆ ಭೇÃಟಿಯಾಗಲು ಕುಮಟಾ ತಾಲೂಕಿನ ಬೆಟ್ಕುಳಿಯ ತನ್ನ ಮನೆಯಿಂದ ಅಂಕೋಲಾ ತಾಲೂಕಿನ ಬಸ್ ನಿಲ್ದಾಣಕ್ಕೆ ಬಂದು, ತನ್ನ ಸ್ನೇಹಿತೆಗೆ ಭೇಟಿಯಾಗಿ ಮಾತನಾಡಿಸುತ್ತಿರುವಾಗ, ನಾನು ಅಂಕೋಲಾ ಬಸ್ ನಿಲ್ದಾಣದಲ್ಲಿನ ಶೌಚಾಲಯಕ್ಕೆ ಹೋಗಿ ಬರುದಾಗಿ ತನ್ನ ತಂಗಿಗೆ ಹೇಳಿ ಹೋಗಿದ್ದೆ.
ನಾನು ಶೌಚಾಲಯದಿಂದ ಬಂದು ತನ್ನ ತಂಗಿಗೆ ಹುಡುಕಾಡಿದ್ದೆ. ಆಗ ತನ್ನ ತಂಗಿಯು ಸಿಗದೇ ಇದ್ದಾಗ, ತನ್ನ ತಂಗಿಯ ಜೊತೆಗೆ ಇದ್ದ ಸ್ನೇಹಿತೆಗೆ ಕರೆ ಮಾಡಿ ನನ್ನ ತಂಗಿ ಎಲ್ಲಿ ಎಂದು ಕೇಳಿದಾಗ, ನಾನು ಅವಳನ್ನು ಅಂಕೋಲಾ ಬಸ್ ನಿಲ್ದಾಣದ ಹೊರಗೆ ಬಿಟ್ಟು, ನನಗೆ ಅರ್ಜೆಂಟ ಕೆಲಸ ಇದ್ದ ಕಾರಣ, ತಾನು ಬಸ್ ಹತ್ತಿ ಹೋಗಿರುವದಾಗಿ ತಿಳಿಸಿದ್ದಾಳೆ.
ನಂತರ ತನ್ನ ತಂಗಿ ಸನಾಳನ್ನು ಅಂಕೋಲಾ ಬಸ್ ನಿಲ್ದಾಣ, ಅಂಕೋಲಾ ಶಹರದ ವಿವಿಧ ಅಂಗಡಿ ಮಳಿಗೆ, ಪ್ರಮುಖ ಪ್ರದೇಶಗಳಲ್ಲಿ ಹುಡುಕಾಡಿದಾಗ, ಅವಳು ಪತ್ತೆಯಾಗಿಲ್ಲ. ಸನಾ ಇಲ್ಲಿಯವರೆಗೆ ಇದೂವರೆಗೂ ವಾಪಸ್ ಮನೆಗೆ ಬಾರದೇ. ಪೋನ್ ಸಂಪರ್ಕಕ್ಕೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
5 ಸನಾ ಪುಟ್ 1 ಇಂಚ್ ಎತ್ತರವಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಹಾಗೂ ಮಲಬಾರಿ ಭಾಷೆ ಬಲ್ಲವಳಾಗಿದ್ದು, ಎಣ್ಣೆಗೆಂಪು ಮೈ ಬಣ್ಣ, ಗೋಲು ಮುಖ, ಸದೃಡ ಮೈ ಕಟ್ಟು, ಕಪ್ಪು ತಲೆ ಕೂದಲು ಹೊಂದಿದ್ದಾಳೆ. ನಾಪತ್ತೆಯಾಗುವ ವೇಳೆಯಲ್ಲಿ ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಲಗಿನ್ಸ್ ಪ್ಯಾಂಟ್, ಬಿಳಿ ಬಣ್ಣದ ಟೀ ಶರ್ಟ್, ಬ್ರೌನ್ ಕಲರ್ ಬ್ಯಾಗಿ ಪ್ಯಾಂಟ್, ಬಿಳಿ ಬಣ್ಣದ ಸಾರ್ಕಪ್ ಧರಿಸಿ, ಅದರ ಮೇಲೆ ಕಪ್ಪು ಬಣ್ಣದ ಬುರ್ಕಾ ಧರಿಸಿದ್ದಾಳೆ ಎಂದು ಯುವತಿಯ ಅಣ್ಣ ಮಹಮ್ಮದ ಬಿರ್ಕುಡಿಕರ ತನ್ನ ದೂರಿನಲ್ಲಿ ವಿವರಿಸಿದ್ದಾರೆ.
ಇವರ ಬಗ್ಗೆ ಎಲ್ಲಾದರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 _ಅಥವಾ 9480805268 ನಂಬರಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.