ಅಂಕೋಲಾ. : ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕರು ದ್ವಿ-ಚಕ್ರ ವಾಹನಗಳನ್ನು ಅನಿರ್ಬಂಧಿತ ವೇಗದಲ್ಲಿ ಚಲಾಯಿಸುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪಡ್ಡೆ ಹೈಕಳ ಹೈಟೆಕ್ ಮೋಜಿಗೆ ಭಗ್ನ ಎದುರಾದಂತಾಗಿದೆ.
ತಾಲೂಕು ಕೇಂದ್ರದಿAದ 8 ಕೀಮೀ ಅಂತರದಲ್ಲಿರುವ ಬೇಲೆಕೇರಿ ರಸ್ತೆಯಲ್ಲಿ ನೀವು ಓಡಾಡಬೇಕೆಂದರೆ ನಿಮಗೆ ಡಬಲ್ ಗುಂಡಿಗೆ ಇರಬೇಕು. ಏಕೆಂದರೆ ದೂಮ್ ಚಲನಚಿತ್ರದ ಶೈಲಿಯಲ್ಲಿ ವಿಕೃತ ಕೇಶ ವಿನ್ಯಾಸ್, ಉಡುಗೆ ತೊಡುಗೆಗಳೊಂದಿಗೆ ಇಲ್ಲಿನ ಪಡ್ಡೆ ಹೈಕಳು ಅಸಂಬದ್ಧವಾಗಿ ಕೇಕೆ ಹಾಕುತ್ತ, ಕರ್ಕಸ್ ಸೈಲೆನ್ಸರ್ ಅಳವಡಿಸಿಕೊಂಡು ಅತಿ ವೇಗ್ದಲ್ಲಿ ಬೈಕ್ ಚಲಾಯಿತ್ತ ಎದುರಿಗೆ ಬರುವ ಸವಾರರ ಎದೆಯನ್ನೆ ನಡುಗಿಸುವಂತೆ ಬೈಕ್ ಚಲಾಯಿಸುತ್ತಿರುವದು ಪೊಲೀಸ್ ಇಲಾಖೆಗೂ ತಲೆ ನೋವಾಗಿ ಪರಿಗಣಿಸಿದೆ.
ಅಷ್ಟೇಅಲ್ಲದೆವಾಟ್ಸಪ್ಗ್ರೂಪ್ಗಳಿಗೆಸಂದೇಶರವಾನಿಸಿಬೇಲೇಕೇರಿವ್ಯಾಪ್ತಿಯಲ್ಲಿಅಪ್ರಾಪ್ತವಯಸ್ಕಬಾಲಕರುದ್ವಿಚಕ್ರವಾಹನಗಳಚಾಲನೆಮಾಡುತ್ತಿರುವದುಹೆಚ್ಚಾಗಿಕಂಡುಬರುತ್ತಿರುವಹಿನ್ನಲೆಯಲ್ಲಿಆಮಕ್ಕಳಿಗೆತಮ್ಮವಾಹನಗಳನ್ನುಚಾಲನೆಮಾಡಲುಕೊಡುತ್ತಿರುವವಾಹನಮಾಲಕರಮೇಲೆಸೂಕ್ತಕಾನೂನುಕ್ರಮಕೈಗೊಳ್ಳಲು, ಪ್ರಜ್ಞಾವಂತನಾಗರಿಕರುವಾಹನಚಾಲನೆಮಾಡುವಮಕ್ಕಳ, ವಾಹನಸಹಿತನಂಬರ್ಕಾಣುವರೀತಿಯಲ್ಲಿಫೋಟೋಅಥವಾವಿಡಿಯೋಮಾಡಿ 7259831070 ಅಥವಾ 8277988366 ನಂಬರಿಗೆಕಳಿಸುವಂತೆವಿನಂತಿಸಲಾಗಿದೆ. ಮಾಹಿತಿನೀಡಿದವರಕುರಿತುಯಾವುದೇವಿಷಯವನ್ನುಅತ್ಯಂತರಹಸ್ಯವಾಗಿಡಲಾಗುವುದುಎಂದುಪೊಲೀಸ್ಇಲಾಖೆಪ್ರಕಟಣೆಹೊರಡಿಸಿದೆ.
ಅಪ್ರಾಪ್ತರ ಅಪಾಯಕಾರಿ ಬೈಕ್ ರೈಡಿಂಗ್ನಿAದ ಪಾದಾಚಾರಿಗಳಿಗೆ ಮತ್ತು ಸಾರ್ವಜನಿಕರ ಸುರಕ್ಷತೆಗೂ ಆತಂಕ ಎದುರಾಗಿದೆ. ಕಳೆದ ವರ್ಷ ನಡೆದ ಬೈಕ್ ಅಫಘಾತದಲ್ಲಿ ಈ ಭಾಗದ ಅಪ್ರಾಪ್ತ ಬಾಲಕನೆ ಬೈಕ್ ಚಲಾಯಿಸಿ ಒಬ್ಬರ ಜೀವಕ್ಕೆ ಸಂಚಕಾರ ತಂದಿರುವ ಘಟನೆಯು ಪೊಲೀಸ್ ಪ್ರಕರಣದಲ್ಲಿ ಇದೆ.
ಬೇಲೆಕೇರಿಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಯುವಕರು ಬೈಕ್ ಅತಿ ವೇಗದಲ್ಲಿ ಬೈಕ್ ಚಲಾಯಿಸುತ್ತಿರುವ ಸಾಕಷ್ಟು ದೂರುಗಳು ಬಂದಿದೆ. ಯಾವುದೇ ಕಾರಣಕ್ಕೂ ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ಬೈಕ್ನನ್ನು ಪಾಲಕರು ನೀಡಬಾರದು. ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿಕೊಂಡು ಬೈಕ್ ಚಾಲನೆ ಮಾಡುತ್ತಿರುವದು ಕೂಡ ಗಮನಕ್ಕೆ ಇದೆ. ಈ ಬಗ್ಗೆ ನಾಗರಿಕರು ಸಹಕರಿಸಿ ಅವರ ಬೈಕ್ ನಂಬರ ಕಾಣುವಂತೆ ಪೋಟೊ ಅಥವಾ ವಿಡಿಯೋ ಮಾಡಿ ಕಳುಹಿಸಿ ಇಲಾಖೆಯ ಕರ್ತವ್ಯಕ್ಕೆ ಕೈಜೋಡಿಸಬೇಕು.