ಕಬ್ಬಡ್ಡಿ ಆಡುತ್ತಲೆ ಹೃದಯಾಘಾತಕ್ಕೆ ಒಳಗಾಗಿ ಯುವಕ ಸಾವು

ಅಂಕೋಲಾ : ಕಬ್ಬಡಿ ಆಟ ಆಡುತ್ತಿರುವಾಗಲೇ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟ ಘಟನೆ ಅವರ್ಸಾದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಬಾಸ್ಗೋಡದ ಸುದರ್ಶನ ವಿನಾಯಕ ಆಗೇರ 22 ವರ್ಷ ಮೃತ ಪಟ್ಟ ಯುವಕನಾಗಿದ್ದಾನೆ.
ಏನಾಗಿತ್ತು…?
ಅವರ್ಸಾದ ಶ್ರೀ ಕಾತ್ಯಾಯನಿ ಯುವಕ ಸಂಘದಿಂದ ಆಗೇರ ಸಮಾಜದ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಪಂದ್ಯಾವಳಿಯು ಶನಿವಾರ ರಾತ್ರಿ ಚಾಲನೆ ಪಡೆದುಕೊಂಡಿತ್ತು. ಭಾನುವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಪಂದ್ಯಾವಳಿಯ ಸೆಮಿ ಪೈನಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕೊಗ್ರೆಯ ಶ್ರೀ ಮಹಾಸತಿ ತಂಡದಿಂದ ಸುದರ್ಶನ್ ಆಟ ಆಡಿ ಸೆಮಿ ಪೈನಲ ಪಂದ್ಯ ವಿಜೇತರಾಗಿದ್ದರು.
ಪಂದ್ಯ ಮುಗಿದ ತಕ್ಷಣ ದಣಿವಾರಿಸಿಕೊಳ್ಳಲು ಸುದರ್ಶನ ತನ್ನ ಗೆಳೆಯರೊಂದಿಗೆ ಮಾತನಾಡುತ್ತ ಕುಳಿತುಕೊಂಡಿದ್ದನು. ಏಕಾಏಕಿ ಕುಳಿತಲ್ಲಿಯೆ ಸುದರ್ಶನ ಅಸ್ವಸ್ಥನಾಗಿ ನೆಲಕ್ಕೆ ತಲೆ ಮಾಡಿದ್ದ. ಕೂಡಲೇ ಇತನನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದರು. ಸುದರ್ಶನನನ್ನು ತಪಾಸಣೆ ನಡೆಸಿದ ವೈದ್ಯರಿಗೆ ಈತ ಮೊದಲೆ ಪಟ್ಟಿರುವನ್ನು ದೃಡಪಡಿಸಿದರು.
ಉತ್ತಮ ಕ್ರೀಡಾ ಪಟುವಾಗಿದ್ದ ಸುದರ್ಶನ್ ಅನೇಕ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹತ್ತಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಹಿರಿಮೆಯನ್ಬು ಕೂಡ ದಾಖಲಿಸಿದ್ದ. ಬಾಸ್ಗೋಡದನಾದ ಸುದರ್ಶನ ತಂದೆ, ತಾಯಿ, ಒರ್ವ ಹಿರಿಯ ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾನೆ.