ಹೊಸಕಂಬಿ ಬಳಿ ಅಕ್ರಮವಾಗಿ ಡಿಸೈಲ ಇಳಿಸುವ ವಿಚಾರದಲ್ಲಿ ದಿನಕ್ಕೊಂದು ಗಲಾಟೆ

ಅ0ಕೋಲಾ : ಹೊಸಕಂಬಿಯ ಬಳಿ ಅಕ್ರಮ ಡಿಸೈಲ ಹಾಗೂ ಪೆಟ್ರೋಲ ದಂಧೆಯ ಜಾಲ ಮುಕ್ತವಾಗಿ ತೆರೆದುಕೊಂಡಿದೆ. ಖಾಕಿಯ ಅಣತಿಯಂತೆ ಈ ದಂಧೆ ನಡೆಯುತ್ತಿದೆ ಎಂಬ0ತೆ ಬಿಂಬಿಸಿ ರಾಜಾರೋಷದಿಂದ ಈ ದಂಧೆ ನಡೆಸುತ್ತಿರುವದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಅಂಕೋಲಾ ತಾಲೂಕು ಕೇಂದ್ರದಿ0ದ 32 ಕೀಮಿ ಅಂತರದಲ್ಲಿರುವ ಹೊಸಕಂಬಿಯ ಬಳಿಯ ಬಲಭಾಗದಲ್ಲಿ ದೊಡ್ಡ ದೊಡ್ಡ ಪರದೆಗಳನ್ನು ಅಳವಡಿಸಿಕೊಂಡು ಡಿಸೈಲ- ಪೆಟ್ರೋಲಗಳನ್ನು ಲಾರಿಗಳಿಂದ ಅಕ್ರಮವಾಗಿ ಇಳಿಸಿಕೊಳ್ಳಲಾಗುತ್ತದೆ.
ಹೊಸಕ0ಬಿಯಲ್ಲಿ ಪ್ರತಿ ದಿನ 70 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಈ ದಂಧೆ ಹಲಿನಲ್ಲಿಯು ನಡೆಯುತ್ತಿರುವದು ಕೂಡ ಕಂಡು ಬಂದಿದೆ. ಲಾರಿಯವರು ಡಿಸೈಲ ನೀಡದಿದ್ದಾಗ ದಾದಾಗಿರಿಯಿಂದಲೆ ಈ ಅಕ್ರಮ ದಂಧೆ ನಡೆಯುತ್ತಿದೆ. ಈ ವಿಚಾರವಾಗಿ ದಿನಕ್ಕೊಂದು ಗಲಾಟೆ ನಡೆಯುತ್ತಿದೆ ಎಂಬು ಮಾಹಿತಿ ಲಭ್ಯವಾಗಿದೆ.
ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರುವದರಿಂದ ಏನಾದರೂ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ. ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 11 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ.