ಅಂಕೋಲಾ : ತಾಲೂಕಿನಲ್ಲಿ ಕುಟಕುಟಿ ಮಂಡ ಹಾಗೂ ಅಂದರ ಬಾಹರ್ ಜೂಜಿನ ಸದ್ದು ಜೋರಾಗಿದೆ. ಇದನ್ನ ನಿಯಂತ್ರಿಸಬೇಕಾದ ಅಂಕೋಲಾ ಪೊಲೀಸರೇ ಮೌನಕ್ಕೆ ಶರಣಾಗಿದ್ದಾರೆ. ಅಕ್ರಮ ಚಟುವಟಿಕೆಯನ್ನು ಕಂಡು ಕಾಣದಂತೆ ಇರುವ ಅಂಕೋಲಾ ಪೊಲೀಸರ ನಡೆಗೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನು ಅಂಕೋಲಾ ಪೊಲೀಸರಿಂದ ನಿಯಂತ್ರಣ ಸಾಧ್ಯವಿಲ್ಲ ಉಕ ಜಿಲ್ಲೆಯ ಸುಪರ್ ಕಾಪ್ ಎನಿಸಿಕೊಂಡ, ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರು ಬಗ್ಗೆ ಕ್ರಮವಹಿಸಿ ಜೂಜಿಗೆ ಕಡಿವಾಣ ಹಾಕಬೇಕಿದೆ ಎಂಬ ಆಗ್ರಹದ ಮಾತು ಕೇಳಿ ಬಂದಿದೆ.

       ಮೊದಲು ಜೂಜುಕೋರರು ಪೋಲಿಸರಿಗೆ ಹೆದರುತ್ತಲೆ ಅರಣ್ಯ ಪ್ರದೇಶದಲ್ಲೋ ಅಥವಾ ನಿರ್ಜನ ಪ್ರದೇಶದಲ್ಲೊ ಆಟ ಆಡುತ್ತಿರುವದು ಕಂಡು ಬರುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಅಂಕೋಲಾದ ಖಾಕಿಗಳೆ ಹಸಿರು ನಿಶಾನೆ ತೋರಿಸಿದಂತೆ ಬಿಂದಾಸ ಆಗಿ ಕುಟಕುಟಿ ಮಂಡ ಹಾಗೂ ಅಂದರ ಬಾಹರ್ ಜೂಜಾಟ ಮುಕ್ತವಾಗಿ ತೆರೆದುಕೊಂಡಿದೆ.

       ಪ್ರತಿ ಕುಟುಕುಟಿ ಮಂಡದಿAದ 15 ಸಾವಿರ ರೂಪಾಯಿಯನ್ನು ಪೊಲೀಸರ ಹೆಸರನ್ನು ಹೇಳಿಕೊಂಡ ವಸೂಲಿ ಮಾಡಲಾಗುತ್ತಿದೆ. ಪ್ರತಿ ರಾತ್ರಿಯು ಸಂಗ್ರಹವಾದ ಸಾವಿರಾರು ರೂಪಾಯಿ ಸಂಗ್ರಹವಾದ ಹಣವು ಪೊಲೀಸ್‌ಯ ಬಕೆಟ್ ರಾಜಾನ ಬಳಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

       ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರು ಜಿಲ್ಲೆಯಲ್ಲಿ ಎಲ್ಲಿಯೂ ಕೂಡ ಅಕ್ರಮ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ತಾಲೂಕಿನ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದಕ್ಕೆ ಇಲ್ಲಿಯ ಖಾಕಿಗಳಿಂದ ಕಡಿವಾಣ ಅಸಾಧ್ಯವೆಂದ ಗೊತ್ತಾದ ಹಿನ್ನಲೆಯಲ್ಲಿ ಜಿÀಪಿಎಸ್ ಆಧಾರಿತ ಸಚಿತ್ರ ದಾಖಲೆಗಳೊಂದಿಗೆ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಬೆಳಂಬಾರದ ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.