ಅಂಕೋಲಾದಲ್ಲಿ ಮಹಿಳೆಯರಲ್ಲಿ ಹೆಚ್ಚಿದ ಜಿಮ್ ಕ್ರೇಜ್ :
ರಾಘು ಕಾಕರಮಠ.
ತಾಲೂಕಿನಲ್ಲಿ ಮಹಿಳೆಯರ ಜಿಮ್ ಕ್ರೇಜ್ ಹವಾ ಜೋರಾಗಿದೆ. ಪುರುಷರಿಗಿಂತ ತಾವೇನು ಕಮ್ಮಿ ಇಲ್ಲಾ ಎಂಬ0ತೆ ತಮ್ಮ ದೇಹ ದಂಡನೆ ಹಾಗೂ ಸೌಂದರ್ಯ ವರ್ಧನೆಗಾಗಿ ವಕ್ವೌಟ್ನಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿದ್ದು ಕಂಡು ಬರುತ್ತಿದ್ದು, ಮಹಿಳಾಮಣಿಗಳ ಸಿಕ್ಸ್ ಪ್ಯಾಕ್ ಸದ್ದು ಜೋರಾಗಿದೆ.
ಹೌದು.. ಅಂಕೋಲಾದಲ್ಲಿ 4 ಜಿಮ್ಗಳಿವೆ. ತಾಲೂಕಿನ ಜಿಮ್ಗಳಲ್ಲಿ ಸುಮಾರು 350 ಯುವಕರು ಜಿಮ್ನಲ್ಲಿ ದೇಹ ದಂಡಿಸಿ ಬೆವರಿಳಿಸಿ ಪಿಟ್ ಆಗಿರಲು ಹವಣಿಸುತ್ತಾರೆ. ಅದೆ ರೀತಿ 60 ಕ್ಕೂ ಹೆಚ್ಚು ಯುವತಿ ಹಾಗೂ ಮಹಿಳೆಯರು ಜಿಮ್ನಲ್ಲಿ ತಮ್ಮ ಪ್ರವೇಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಗೌಪ್ಯತೆಯೊಂದಿಗೆ ಮಹಿಳೆಯರು ;
ಹೆಚ್ಚಿನ ಮಹಿಳೆಯರು ಹಾಗು ಯುವತಿಯರು ಬೆಳಿಗ್ಗೆ 5 ಗಂಟೆಯಿ0ದ 6-30 ರ ಒಳಗಾಗಿ ಜಿಮ್ಗೆ ಆಗಮಿಸಿ ವಕ್ವೌಟ್ನಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನ ಮಹಿಳೆಯರು ತಾವು ಜಿಮ್ಗೆ ಸೇರಿರುವದು ಗೊತ್ತಾಗದಿರಲಿ ಎಂಬ ಆಶಯದೊಂದಿಗೆ ಈ ಸಮಯ ಆಯ್ದುಕೊಂಡಿದ್ದಾರೆ ಎಂದು ಜಿಮ್ನ ಮಾಲಿಕರೆ ಹೇಳುತ್ತಾರೆ.
ಮಹಿಳೆಯರಲ್ಲೆ ಹೆಚ್ಚು ಶಿಸ್ತು ;
ಜಿಮ್ಗೆ ಪ್ರವೇಶ ಪಡೆದ ಹೆಚ್ಚಿನ ಯುವಕರು ಪ್ರಾರಂಭದಲ್ಲಿ ಜಿಮ್ ಆಗಮಿಸಿ ದೇಹ ದಂಡಿಸಿಕೊಳ್ಳಲು ಉತ್ಸಾಹ ತೋರುತ್ತಾರೆ. ಒಂದೆರಡು ತಿಂಗಳಲ್ಲಿ ನಿಧಾನವಾಗಿ ಇವರು ಕಾಲು ಕೀಳುತ್ತಾ ಇರುತ್ತಾರೆ. ಆದರೆ ಮಹಿಳೆಯರು ಮಾತ್ರ ಶಿಸ್ತಿನಂತೆ ಪ್ರತಿದಿನವು ತಪ್ಪಿಸದೇ, ಶಿಸ್ತಿನಲ್ಲಿ ಜಿಮ್ನಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿರುವದು ಅವರಲ್ಲಿ ಉತ್ಸಾಸವನ್ನು ತೋರಿಸುತ್ತದೆ.
ಆರೋಗ್ಯ ಅರಿವು ಮತ್ತು ಜೀವನಶೈಲಿಯ ಬದಲಾವಣೆ
ಮೊದಮೊದಲು ಮಹಾ ನಗರಗಳಲ್ಲಿ ಮಾತ್ರ ಮಹಿಳೆಯರು ಜಿಮ್ ಮಾಡುತ್ತಿರುವದು ಕಂಡು ಬರುತ್ತಿತ್ತು. ಗ್ರಾಮಾಂತರ ತಾಲೂಕುಗಳಲ್ಲೂ ಸಹ ಇದರ ಕ್ರೇಜ್ ಜೋರಾಗಿರುವದು ಕಂಡು ಬಂದಿದೆ. ಅನೇಕ ಮಹಿಳೆಯರು ಇಂದು ಬುದ್ಧಿವಂತಿಕೆಯಿ0ದ ಆಹಾರ ಪದ್ದತಿ, ದಿನನಿತ್ಯದ ವ್ಯಾಯಾಮ ಮತ್ತು ಸಮತೋಲನಗೊಂಡ ಜೀವನಶೈಲಿಯನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ.
ಮನೋರಂಜನೆ, ಆಹಾರ ಮತ್ತು ಫಿಟ್ನೆಸ್ ನಡುವಿನ ಸಮತೋಲನ ಸಾಧಿಸಲು ಜಿಮ್ ಚಟುವಟಿಕೆಗಳು ಪ್ರಮುಖವಾಗಿವೆ. ಸೀಮಿತ ಸಮಯದಲ್ಲಿ ಲವಲವಿಕೆಯಿಂದ ಇರಲು ಮತ್ತು ತಕ್ಷಣದ ಪರಿಣಾಮಗಳು ಮಹಿಳೆಯರನ್ನು ಜಿಮ್ ಕಡೆ ಆಕರ್ಷಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಸೋಶಿಯಲ್ ಮೀಡಿಯಾ ಪ್ರಭಾವ :
ಹೆಚ್ಚಿನದಾಗಿ ಸೋಶಿಯಲ್ ಮೀಡಿಯಾದ ಪ್ರಭಾವ ಮಹಿಳೆಯರನ್ನು ತಮ್ಮ ದೇಹದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಪ್ರೇರೇಪಿಸಿದೆ ಎಂದು ಹೇಳಬಹುದಾಗಿದೆ. ಸೌಂದರ್ಯ ಮತ್ತು ಆರೋಗ್ಯದ ವಿಷಯದಲ್ಲಿ ಸಾಮಾಜಿಕ ಮನೋಭಾವ ಬದಲಾಗಿದ್ದು, ಮಹಿಳೆಯರು ಜಿಮ್ಗೆ ಹೋಗುವುದನ್ನು ನವೀನ ಫ್ಯಾಷನ್ ಎಂದು ಪರಿಗಣಿಸುವಂತಾಗಿದೆ.
ಇನ್ನು ದಡುತಿ ದೇಹ ಕಡಿಮೆ ಮಾಡಿ ಕೊಳ್ಳಲು, ಬೆಲ್ಲಿ ಪ್ಯಾಟ್ ಕರಗಿಸಿಕೊಳ್ಳಲು ಹಾಗೂ ಆಕರ್ಷಕವಾಗಿ ಕಾಣಲು ಜಿಮ್ ಸಂಜೀವಿನಿ ಎಂಬ0ತೆ ತಮ್ಮ ದಿನನಿತ್ಯದ ಜಿಜ್ಞಾಸೆಯ ಭಾಗವನ್ನಾಗಿ ಜಿಮ್ ಕಾರ್ಯಗಳನ್ನು ಹೊಂದಿಸುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ.
ಜಿಮ್ ಕ್ರೇಜ್ ಕೇವಲ ದೇಹದ ಆರೋಗ್ಯಕ್ಕಾಗಿ ಮಾತ್ರವಲ್ಲ, ಇದು ಆತ್ಮವಿಶ್ವಾಸ, ತಾಜಾತನ ಮತ್ತು ಸಂತೋಷದ ಹೊಸ ಆಯಾಮವನ್ನು ನೀಡುತ್ತಿದೆ. ಮಹಿಳೆಯರಲ್ಲಿ ಈ ಕ್ರೇಜ್ನ ಬೆಳೆದ ಆಕರ್ಷಣೆ ಜೀವನಶೈಲಿಯ ಬದಲಾವಣೆಯ ಪ್ರತೀಕವಾಗಿದೆ. ಹೀಗಾಗಿ ಅಂಕೋಲಾದಲ್ಲಿ ಹೆಚ್ಚಿನ ಮಹಿಳೆಯರು ನಮ್ಮ ಜಿಮ್ಗೆ ಆಗಮಿಸುತ್ತಿದ್ದಾರೆ
ವಿಘ್ನೇಶ ನಾಯ್ಕ.
ಮಾಲಕರು ಕ್ಲಭ್ ವಿ ಪಿಟ್ನೆಸ್ ಅಂಕೋಲಾ
ನಾನು ತುಂಬಾ ದಪ್ಪಗಿದ್ದೆ. ಇದರಿಂದ ತುಂಬಾನೆ ತೊಂದರೆ ಅನುಭವಿಸುವಂತಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಜಿಮ್ದಿಂದ ಆಗುವ ಪ್ರಯೋಜನದ ಬಗ್ಗೆ ತಿಳಿದುಕೊಂಡೆ ಜಿಮ್ಗೆ ಸೇರಿಕೊಂಡೆ. ನಾನೀಗ 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಆರೋಗ್ಯ ಮತ್ತು ಆತ್ಮವಿಶ್ವಾಸದಿಂದ ನನ್ನಲ್ಲಿ ಹೊಸ ಯುಗ ಪ್ರಾರಂಭವಾಗಿದೆ.
ಕೆ. ಶೋಭಿತಾ.
ಎಸ್ಡಿಎಂಸಿ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಆಯ್ಕೆ

ಎಸ್ಡಿಎಂಸಿ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಆಯ್ಕೆ
ಅಂಕೋಲಾ ; ಕ್ರೀಯಾಶೀಲ ತರುಣ ಹಟ್ಟಿಕೇರಿಯ ಮಂಜುನಾಥ ಕೃಷ್ಣ ನಾಯ್ಕ ಅವರು ಅವರ್ಸಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತನ್ನದೇ ಆದ ಸ್ನೇಹಿತರ ಬಳಗ ಹಾಗೂ ಸಾಮಾಜಿಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವ ಉದ್ಯಮಿ ಮಂಜುನಾಥ ನಾಯ್ಕ ಅವರು ಸಾಕಷ್ಟು ಸ್ಥಿತಿವಂತರು ಆಗಿದ್ದರು ಸಹ ತನ್ನ ಮಗನನ್ನು ಕನ್ನಡ ಶಾಲೆಗೆ ಸೇರಿಸುವ ಮೂಲಕ ಕನ್ನಡತನ ಭಾಷಾಭಿಮಾನ ಮರೆದು ಮಾದರಿಯಾಗಿದ್ದಾರೆ.
ಮಂಜುನಾಥ ನಾಯ್ಕ ಅವರು ಅವರ್ಸಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ಶಾಲೆಯ ಅಭಿವೃದ್ಧಿಗೂ ಸಹ ಇನ್ನಷ್ಟು ವೇಗ ದೊರೆಯುವದು ಖಂಡಿತ ಎನ್ನುವದು ನಾಗರಿಕರ ಅಭಿಲಾಸೆಯು ಆಗಿದೆ.
ಮಂಜುನಾಥ ನಾಯ್ಕ ಅವರು ಶಾಲಾಬಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ಅವರ ಆಪ್ತ ಸ್ನೇಹಿತರ ಬಳಗದಲ್ಲಿ ಹರ್ಷಕ್ಕೆ ಕಾರಣವಾಗಿದೆ. ಶಾಸಕ ಸತೀಶ ಸೈಲ ಹಾಗೂ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಂಜುನಾಥ ಅವರಿಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.

