ರಾಷ್ಟ್ರಪತಿ ಪದಕಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಹೆಚ್ ಆಯ್ಕೆ

ರಾಘು ಕಾಕರಮಠ.
ಅಂಕೋಲಾದ ಹೆಮ್ಮೆಯಾಗಿರುವ ಬೆಂಗಳೂರು ಸಿಟಿ ಗೋವಿಂದಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಎಚ್ ಅವರು ತಮ್ಮ ಅಮೋಘ ಸೇವಾ ಹಾದಿಗೆ ಮತ್ತೊಂದು ಚಿಲುಮೆ ಸೇರಿಸಿದ್ದಾರೆ. ಜನಪರ ಕಾರ್ಯ, ದಕ್ಷತೆ, ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಜಯರಾಜ್ ಅವರನ್ನು ಅತ್ಯುತ್ತಮ ಸೇವೆಗೆ ಕೊಡ ಮಾಡುವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಿವಮೊಗ್ಗ ನಗರದಲ್ಲಿ ರೌಢಿಸಂ ವಿರುದ್ಧ ಕೈಗೊಂಡ ದಿಟ್ಟ ಕಾನೂನು ಕ್ರಮಗಳನ್ನು ಗುರುತಿಸಿ ರಾಜ್ಯ ಸರ್ಕಾರ 2015 ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು.
ತನ್ನ ವೃತ್ತಿಜೀವನದಲ್ಲಿ ನಿರಂತರ ಪರಿಶ್ರಮ, ಶಿಸ್ತಿನ ಕೆಲಸ, ಮತ್ತು ಜನಸಾಮಾನ್ಯರ ಆಶಯಗಳಿಗೆ ಸ್ಪಂದಿಸುತ್ತಾ, ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಜಯರಾಜ್ ಅವರಿಗೆ ರಾಷ್ಟ್ರ ಮಟ್ಟದ ಈ ಗೌರವ ಲಭಿಸಿರುವುದು ಅಂಕೋಲಾ ಸೇರಿದಂತೆ ಕನ್ನಡಿಗರ ಹೆಮ್ಮೆ ಹೆಚ್ಚಿಸಿದೆ. ಜಯರಾಜ್ ಅವರು ಕೇವಲ ಒಂದು ಪೊಲೀಸ್ ಅಧಿಕಾರಿ ಮಾತ್ರವಲ್ಲ, ಜನರ ನಂಬಿಕೆಗೆ ಪಾತ್ರರಾಗಿರುವ ಸಾಂಸ್ಕೃತಿಕ ರಾಯಭಾರಿಯಂತಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಜಯರಾಜ್ ಅವರು ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಢಿದ್ದಾರೆ. ಜನರು ಅನುಭವಿಸುವ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ದೌರ್ಜನ್ಯಗಳನ್ನು ಕಠಿಣವಾಗಿ ಎದುರಿಸುವ ಮತ್ತು ಜನಸಾಮಾನ್ಯರ ಹಿತಾಸಕ್ತಿಗೆ ಶ್ರಮಿಸುವ ಅಧಿಕಾರಿ ಎಂದು ಅವರು ಖ್ಯಾತಿ ಪಡೆದವದ್ದಾರೆ.
ಜಯರಾಜ್ ಅವರ ಅವರ ಈ ಸಾಧನೆಯು ವ್ಯಕ್ತಿಗತ ಕೀರ್ತಿಗೆ ಮಾತ್ರ ಸೀಮಿತವಾಗದೆ, ಕನ್ನಡದ ಪೊಲೀಸ್ ಇಲಾಖೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಎತ್ತಿದೆ. ಜಯರಾಜ್ ಅವರ ಅಪರೂಪದ ವ್ಯಕ್ತಿತ್ವಕ್ಕೆ ಸಂದ ರಾಷ್ಟçಪತಿ ಪದಕದ ಪ್ರಧಾನವು ದೆಹಲಿಯ ರಾಜಭವನದಲ್ಲಿ ನಡೆಯಲಿದೆ.