ಅಫಘಾತದಲ್ಲಿ ತೀವ್ರ ಗಾಯಗೊಂಡಿದ್ದ ಡಿಶ್ ಕೃಷ್ಣ ಇನ್ನಿಲ್ಲ
ಅಂಕೋಲಾ : ತಾಲೂಕಿನಲ್ಲಿ ಡಿಶ್ ಕೃಷ್ಣ ಎಂದೇ ಚಿರಪರಿಚಿತನಾಗಿದ್ದ ಗುಡಿಗಾರಗಲ್ಲಿಯ ಕೃಷ್ಣಾ ನಾಯ್ಕ ಅವರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಜನವರಿ 7 ರಂದು ಅಜ್ಜಿಕಟ್ಟಾ ಕ್ರಾಸ್‌ನ ಬಳಿ ಕೃಷ್ಣಾ ನಾಯ್ಕ ಅವರು ತಮ್ಮ ಬೈಕ್‌ನಲ್ಲಿ ಸಾಗುತ್ತಿರುವಾಗ ಇನ್ನೊಂದು ವಾಹನ ಬಡಿದು ನಾಪತ್ತೆಯಾಗಿತ್ತು. ತಕ್ಷಣ ಅವರನ್ನು ಇಲ್ಲಿಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರಿಗೆ ಇನ್ನು ಹೆಚ್ಚಿನ ಚಿಕಿತ್ಸೆ ಅವಶ್ಯವಿದೆ ಎಂದು ವೈಧ್ಯರು ತಿಳಿಸಿದ್ದರಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.
ಮಣಿಪಾಲದ ಆಸ್ಪತ್ರೆಯಲ್ಲಿ ಅವರಿಗೆ ಶಸ್ತç ಚಿಕಿತ್ಸೆ ನಡೆಸಲಾಗಿತ್ತು. ಜ. 28 ರ ರಾತ್ರಿ ಅವರನ್ನು ಅಂಕೋಲಾಕ್ಕೆ ಕರೆ ತಂದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ, ರಾತ್ರಿ 11 ಗಂಟೆಯ ವೇಳೆ ಅವರು ಮೃತಪಟ್ಟಿದ್ದಾರೆ.
ಮೃತ ಕೃಷ್ಣಾ ನಾಯ್ಕ ಅವರು ಪತ್ನಿ– ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಜ. 29 ರ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಸಲಾಗುವದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.