ಅಂಕೋಲಾದ ಸ್ವ–ಸಹಾಯ ಸಂಘದ ಮಹಿಳೆಯರ ಹಣ ನುಂಗಿದ ವೆಂಕಟೇಶ ಮಜ್ಜಿಗುಡ್ಡಾ ಅರೆಸ್ಟ್ ..!
ಅಂಕೋಲಾ ಕೆನರಾ (ಸಿಂಡಿಕೇಟ್) ಬ್ಯಾಂಕಿನ ಮ್ಯಾನೇಜರ್ ಆಗಿದ್ದ ವೆಂಕಟೇಶ ಮಜ್ಜಿಗುಡ್ಡಾ

ಅಂಕೋಲಾದ ಸ್ವ–ಸಹಾಯ ಸಂಘದ ಮಹಿಳೆಯರ ಹಣ ನುಂಗಿದ ವೆಂಕಟೇಶ ಮಜ್ಜಿಗುಡ್ಡಾ ಅರೆಸ್ಟ್ ..!
ಅಂಕೋಲಾ ಕೆನರಾ (ಸಿಂಡಿಕೇಟ್) ಬ್ಯಾಂಕಿನ ಮ್ಯಾನೇಜರ್ ಆಗಿದ್ದ ವೆಂಕಟೇಶ ಮಜ್ಜಿಗುಡ್ಡಾ
ವರದಿ : ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಸ್ತಿçà ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ದಾಖಲೆಗಳಲ್ಲಿ ನಮೂದಿಸದೇ ಅಪರಾತಪರಾ ಮಾಡಿದ್ದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿದ್ದ ವೆಂಕಟೇಷ ಮಜ್ಜಿಗಡ್ಡಾ ಅವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬಂಧಿಸಿ ನ್ಯಾಯಾಲಯ ಮುಂದೆ ಹಾಜರ ಪಡಿಸಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ತಲೆ ಮರೆಸಿಕೊಂಡಿದ್ದ ವೆಂಕಟೇಷ ಮಜ್ಜಿಗಡ್ಡಾ ಅವರನ್ನು (ಸಿಡಿಆರ್) ತಾಂತ್ರಿಕ ಸಾಕ್ಷಿಯ ಮೇರೆಗೆ ಸಿಐಡಿ ಅಧಿಕಾರಿಗಳು ಬಾಗಲಕೋಟೆಯಲ್ಲಿ ವಶಕ್ಕೆ ಪಡೆದು ಅಂಕೋಲಾದ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ವೆಂಕಟೇಷ ಮಜ್ಜಿಗಡ್ಡಾ ಅವರು ನಮಗೆ ಬೇಕಾಗಿದೆ ಎಂದು ನ್ಯಾಯಾಧೀಶರ ಮುಂದೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವೆಂಕಟೇಷ ಮಜ್ಜಿಗಡ್ಡಾ ಅವರ ಮೇಲಿದ್ದ ಆರೋಪವೇನು..?
ಸ್ತಿçà ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ದಾಖಲೆಗಳಲ್ಲಿ ನಮೂದಿಸದೇ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿದ್ದ ವೆಂಕಟೇಷ ಮಜ್ಜಿಗಡ್ಡಾ ನಮಗೆ ಮೋಸ ಮಾಡಿದ್ದಾರೆ ಎಂದು ಸಂಘದ ಮಹಿಳೆಯರು ಇವರ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಹಾಗೆ ಬ್ಯಾಂಕಿನ ಇತರೆ ಸಿಬ್ಬಂದಿಗಳ ಐಡಿ ಬಳಸಿ ಬ್ಯಾಂಕ ಹಾಗೂ ಗ್ರಾಹಕರಿಗೆ ವಂಚಿಸಿರುವ ಬಗ್ಗೆ ದೂರು ಕೇಳಿ ಬಂದಿತ್ತು.
ಈ ವಿಚಾರಕ್ಕೆ ಸಂಬAದಿಸಿದAತೆ ಪರಿಶೀಲನೆ ನಡೆಸಿದ ಬ್ಯಾಂಕಿನ ಪ್ರಮುಖ ಅಧಿಕಾರಿಗಳ ತನಿಖಾ ತಂಡಕ್ಕೆ ತಪ್ಪು ಕಂಡು ಬಂದಿರುವ ಹಿನ್ನಲೆಯಲ್ಲಿ ಇವರನ್ನು ಸೇವೆಯಿಂದಲೆ ವಜಾಗೊಳಿಸಿ ಕೆನರಾ ಬ್ಯಾಂಕಿನ ರಾಜ್ಯ ಮುಖ್ಯ ಅಧಿಕಾರಿ ಆದೇಶ ಹೊರಡಿಸಿದ್ದರು.