ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ
ಕೋಳಿ ಆಸಿಯಂತೆ ಘಮಘಮಿಸುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವರ‍್ಯಾರು..?

ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ
ಕೋಳಿ ಆಸಿಯಂತೆ ಘಮಘಮಿಸುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವರ‍್ಯಾರು..?
ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ತಾಲೂಕಿನ ಅವರ್ಸಾದಲ್ಲಿ ಮಟ್ಕಾ ದಂಧೆ ಎನ್ನುವದು ಕೋಳಿ ಆಸಿಯಂತೆ ಘಮಘಮಿಸುತ್ತಿದೆ. ಆಟೋ ರಾಜಾನ ಸುಪರ್ದಿಯಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ಸಾಗಿದ್ದು ವ್ಯವಸ್ಥೆಯನ್ನೆ ಅಣುಕಿಸುವಂತಿದೆ.
ಅವರ್ಸಾ, ದಂಡೇಭಾಗ ಹಾಗೂ ಸಕಲಬೇಣದಲ್ಲಿ ಮಟ್ಕಾ ಎನ್ನುವದು ಬಿಂದಾಸ್ ಆಗಿ ತೆರೆದುಕೊಂಡಿದೆ. ವಿಪರ್ಯಾಸವೆಂದರೆ ಇಲ್ಲಿ ಜಪ್ರತಿನಿಧಿಗಳು ಮಟ್ಕಾ ದಂಧೆಯ ಕಿರೀಟ ತೊಟ್ಟು, ಬುಕ್ಕಿಯಾಗಿ ಮರೆಯುತ್ತಿರುವದು ಚರ್ಚೆಗೀಡುಮಾಡಿದೆ.
ಅವರ್ಸಾ ಎಂದರೆ ಅದೊಂದು ಪ್ರಜ್ಞಾವಂತರ ಹಾಗು ಧಾರ್ಮಿಕತೆಯ ಸೊಗಡನ್ನು ಹೊತ್ತ ನೆಲವದು. ಆದರೆ ಇಲ್ಲಿ ಮಟ್ಕಾ ತಲುಬಿಗೆ ಇಲ್ಲಿನ ಜನರನ್ನು ತಳ್ಳುತ್ತಿರುವದು ಕೂಡ ಕಪ್ಪು ಚುಕ್ಕೆಯಾಗಿ ಗಮನ ಸೆಳೆಯುತ್ತಿದೆ. ಕೆಲವೊಬ್ಬರು ಇಲ್ಲಿ ಹೇಳಿಕೊಳ್ಳೋಕೆ ಗ್ರಾಮ ಪಂಚಾಯತ ಸದಸ್ಯರು. ಆದರೆ ಮಾಡುವ ದಂಧೆ ಮಾತ್ರ ಮಟ್ಕಾ ಬುಕ್ಕಿಯ ದಂಧೆಕೋರರು.
ಸಮಾಜ ಸೇವೆಯ ಪೋಸು ಕೊಡುತ್ತ, ಮುಂದಿನ ಚುನಾವಣೆಗೆ ತಯಾರಿ ನಡೆಸಿರುವ ಈ ಕಿರಾತಕ ಬುಕ್ಕಿಗಳು, ರಾಜಕೀಯ ಎನ್ನುವದು ಇವರಿಗೆ ತೆವಲಿಗಾದರೆ, ಮಟ್ಕಾ ಎನ್ನುವದು ಚುನಾವಣೆಗೆ ಖರ್ಚು ಹೊಂದಿಸುವ ವೇದಿಕೆಯು ಆಗಿದೆ ಎನ್ನುತ್ತಾರೆ ಕಾತ್ಯಾಯನಿ ಗ್ರೌಂಡನಲ್ಲಿ ರಾತ್ರಿ ಸೇರುವ ಗೆಳೆಯರ ಬಳಗದವರು.
ಇನ್ನು ಸಕಲಬೇಣದಲ್ಲಂತೂ ಮಟ್ಕಾ ಎಂದರೆ ಸಕ್ಕರೆ ತಿಂದಷ್ಟೆ ಸಲೀಸು. ಇಲ್ಲಿಯ ಬುಕ್ಕಿ ಮಾತ್ರ ಬಾರಿ ಚಾಲಾಕು. ಟೆನಷನ್ ಟ್ಲಾಬ್ಲೆಟೂ ಇತನ ಪ್ರೆಂಡೂ. ಹಾಗೆ ಅವರ್ಸಾ ದಂಢೇಭಾಗದಲ್ಲ0ತೂ ಇತನೆ ಜಗದೊಡೆಯ. ಒಟ್ಟಾರೆ ಅವರ್ಸಾದಲ್ಲಿ ಮಟ್ಕಾ ದಂಧೆ ಬೊಂಬೆಯ ಮಿಠಾಯಿಯಂತೆ ಚಪ್ಪರಿಕೆಗೆ ಒಳಗಾಗಿದೆ. ಆಟೋ ರಾಜಾ ಮಾತ್ರ ಬಿಂದಾಸ್ ಆಗಿದ್ದಾನೆ. ಅಂಕೋಲಾ ಠಾಣೆಯ ಪೊಲಿಸ್ ಇನ್‌ಪೆಕ್ಟರ ಚಂದ್ರಶೇಖರ ಮಠಪತಿ ಅವರು ವಿಶೇಷ ತಂಡ ರಚಿಸಿ ನಿಗ್ರಹಿಸುವಂತೆ ಆಗ್ರಹದ ಮಾತುಗಳು ಕೂಡ ಬಲವಾಗಿ ಕೇಳಿ ಬಂದಿದೆ.
