ಸಾಲ ಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

ಸಾಲ ಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು
ಅಂಕೋಲಾ : ಬ್ಯಾಂಕ್ ಸಾಲ ಕೊಡಿಸುವ ನೆಪದಲ್ಲಿ, ಯುವತಿ ಹಾಗೂ ಮಹಿಳೆಯರನ್ನು ಹಾಸಿಗೆಗೆ ಬಳಸಿಕೊಳ್ಳುತ್ತಿದ್ದ ಬ್ಯಾಂಕ್ ಸಹಾಯಕ ಗುಮಾಸ್ತನಿಗೆ ಚಪ್ಪಲಿ ಸೇವೆ ಮಾಡಿ ಚಳಿ ಬಿಡಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ವ್ಯವಸ್ಥಿತ ಬಲೆ ರೂಪಿಸುವ ನರ್ಸ್ ಹಾಗೂ ಬ್ಯಾಂಕ್ ಗುಮಾಸ್ತ :
ಕಾರವಾರದ ಪೈವ್ರೇಟ್ ಸೆಕ್ಟ್ರ ಬ್ಯಾಂಕ್‌ನಲ್ಲಿ ಸಹಾಯಕ ಗುಮಾಸ್ತನಾಗಿರುವ ಈತ ಬ್ಯಾಂಕಿಗೆ ಬರುವ ಯುವತಿ ಹಾಗೂ ಮಹಿಳೆಯರ ಮೇಲೆ ಕಣ್ಣಾಡಿಸುವ ಪ್ರವೀಣತೆ ಹೊಂದಿದ್ದ. ಈ ಹಿನ್ನಲೆಯಲ್ಲೆ ಗುಮಾಸ್ತ ನರ್ಸ್ ಕೆಲಸದಲ್ಲಿರುವ ಯುವತಿಯನ್ನ ಮೊದಲು ಪರಿಚಯಿಸಿಕೊಂಡಿದ್ದ. ನಂತರ ಇದೇ ನರ್ಸ್ನ ಸಹಾಯ ಪಡೆದು ಹಣದ ಅಡಚಣೆ ಇರುವ ಈಕೆಯ ಇತರೆ ಸಹದ್ಯೋಗಿಗಳನ್ನು ಈಕೆ ಇತನಿಗೆ ಪರಿಚಯ ಮಾಡಿಕೊಟ್ಟಿದ್ದಳು.
ಬ್ಯಾಂಕಿಗೆ ಕರೆದುಕೊಂಡು ಬಂದಳು :
ಸಾಲ ಮಾಡಿ ಕೊಡಿಸುವ ಭರವಸೆಯಲ್ಲಿ ಬ್ಯಾಂಕಿಗೆ ಯುವತಿ ಕರೆದುಕೊಂಡು ಹೋಗಿ ಈಕೆ ನನ್ನ ಸ್ನೇಹಿತೆ, ಈಕೆಗೆ ಸಾಲ ಬೇಕಾಗಿದೆ ಸಹಾಯ ಮಾಡಿ ಎಂದು ನರ್ಸ್ ಹೇಳುತ್ತಾಳೆ. ನಿಮಗೆ ಸಾಲ ಬೇಕಾದರೆ ಐಟಿಆರ್ ಪೈಲ ಮಾಡಿದ್ದೀರಾ, ಎಲ್‌ಐಸಿ ಇದೆಯಾ ಎಂದೆಲ್ಲಾ ಪ್ರಶ್ನಿಸುತ್ತಾನೆ. ನಂತರ ಇದ್ಯಾವದು ಇಲ್ಲಾ ಕಡಿಮೆ ಸಂಬಳಕ್ಕೆ ನರ್ಸ್ ಕೆಲಸ ಮಾಡುತ್ತಿರುವದಾಗಿ ಹೇಳಿದಾಗ. ಪರವಾಗಿಲ್ಲ ನಾನು ನಿಮಗೆ ಕೊಡಿಸುತ್ತೇನೆ ಎಂದು ಹೇಳಿ ಗುಮಾಸ್ತ ಮುಗುಳ ನಗುತ್ತಲೆ ಹಾಸಿಗೆ ಪುರಾಣಕ್ಕೆ ಸ್ಕೇಚ್ ಹಾಕುತ್ತಾನೆ.
ಮೈಂಡ್ ವಾಷ್ ಮಾಡುವ ನರ್ಸ್ ;
ಸಾಲ ಸಿಗುತ್ತದೆ ಎಂಬ ಖುಷಿಯಲ್ಲಿದ್ದ ಯುವತಿಗೆ ಈ ನರ್ಸ್ ಒಮ್ಮೆ ಕಾಣಕೋಣದ ಬೀಚ್‌ಗೆ ಹೋಗಿ ಬರೋಣ, ನಿನಗೆ ಸಹಾಯ ಮಾಡಿದ ಬ್ಯಾಂಕ್ ಗುಮಾಸ್ತನು ಬರುತ್ತಾನೆ ಎಂದು ಸಂಚು ರೂಪಿಸಲಾಗುತ್ತದೆ. ಈ ನರ್ಸ್ನ ನಡುವಳಿಕೆಯ ಬಗ್ಗೆ ಮೊದಲೆ ಗೊತ್ತಿದ್ದ ಕೆಲವು ಸಭ್ಯರ್ಥ ಯುವತಿ ಹಾಗೂ ಮಹಿಳೆಯರು ಈಕೆಯಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಕಾಣಕೋಣ, ಗೋಕರ್ಣದತ್ತ ಮುಖ ಮಾಡಿ ಗುಮಾಸ್ತನಿಗೆ ಸೇವೆ ನೀಡಿ ಬಂದಿರುವದು ಕೂಡ ನಿರಂತರವಾಗಿ ನಡೆದಿದೆ ಎನ್ನಲಾಗಿದೆ.

ಅಂಕೋಲಾದಲ್ಲಿ ಬಿತ್ತು ಧರ್ಮದೇಟು ;
ಇತ್ತೀಚಿಗಷ್ಟೇ ಒರ್ವ ಯುವತಿಗೆ ಈ ನರ್ಸ್ನ ಶಿಘಾರಸ್ಸಿನ ಮೇಲೆ ಸಾಲ ಮಾಡಿಕೊಟ್ಟಿದ್ದ. ಈ ಗುಮಾಸ್ತ ತನ್ನ ಚಟ ತೀರಿಸಿಕೊಳ್ಳಲು ಅಂಕೋಲಾಕ್ಕೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಇತನಿಗೆ ಸರಿಯಾಗಿ ಮಂಗಳಾರತಿ ಮಾಡಬೇಕೆನ್ನುವ ಉದ್ದೇಶದಿಂದ ಪ್ಲಾಸ್ ರೂಪಿಸಲಾಗಿತ್ತು. ಬಾ ನಲ್ಲೆ ಮಧು ಚಂದ್ರಿಕೆ ಎಂದು ತನ್ನ ಐಸ್ ಇಡುತ್ತಲೆ ಲ್ಯಾಂಡ್ ಆಗಲು ಬಂದ ಗುಮಾಸ್ತನಿಗೆ ಧರ್ಮದೇಟು ನೀಡಿ ಕಳುಹಿಸಿರುವದು ಹಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.