ಡಿವೈಎಸ್ಪಿಯಾಗಿ ಎಚ್ ಜಯರಾಜ್ ಪದೋನ್ನತಿ

ಡಿವೈಎಸ್ಪಿಯಾಗಿ ಎಚ್ ಜಯರಾಜ್ ಪದೋನ್ನತಿ
ರಾಘು ಕಾಕರಮಠ.
ಅಂಕೋಲಾ ; ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಡೈನಾಮಿಕ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಹೆಚ್ ಅವರು ಡಿವೈಎಸ್ಪಿಯಾಗಿ ಪದೋನ್ನತರಾಗಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ರಾಜ್ಯ ಸರಕಾರ ಡಿವೈಎಸ್ಪಿಯಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ. ಇದರಲ್ಲಿ ಬೆಂಗಳೂರು ಸಿಟಿ ಗೋವಿಂದಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಲ್ಲಿರುವ ಜಯರಾಜ್ ಹೆಚ್ ಅವರು ಪದೋನ್ನತರಾಗಿ ಹೆಮ್ಮೆ ಮೂಡಿಸಿದ್ದಾರೆ.
2002 ನೇ ಬ್ಯಾಚಿನಲ್ಲಿ ಪಿಎಸೈ ಆಗಿ ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿದ ಜಯರಾಜ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿವಮೊಗ್ಗ ರೌಡಿ ನಿಗ್ರಹ ದಳ, ಹೊಳೆನರಸಿಪುರ, ಬೆಂಗಳೂರಿನ ಕೆ.ಆರ್.ಪುರಂ ಮತ್ತು ಸಿಐಡಿ ಘಟಕ ಮತ್ತು ಬಾಣಸವಾಡಿ, ಗೋವಿಂದಪುರ ಠಾಣೆಗಳಲ್ಲಿ ಜನಸ್ನೇಹಿ ಅಧಿಕಾರಿ ಕರ್ತವ್ಯ ನಿರ್ವಹಿಸಿ, ಅನೇಕ ಕ್ಲೀಷ್ಠಕರ ಅಫರಾಧ ಪ್ರಕರಣಗಳನ್ನು ಭೇಧಿಸಿದ ಕಿರ್ತಿ ಜಯರಾಜ್ ಅವರಿಗೆ ಸಲ್ಲುತ್ತದೆ.
ಅಂಕೋಲಾದ ಹೆಮ್ಮೆಯಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಎಚ್ ಅವರ ವಿಶೇಷ ಕರ್ತವ್ಯ ಪ್ರಜ್ಞೆಗೆ ರಾಷ್ಟçಪತಿ ಪದಕವು ಸಹ ಕಳೆದ ಒಂದು ತಿಂದಷ್ಟೇ ಬಾಜನವಾಗಿರುವದು ವಿಶೇಷವಾಗಿದೆ. ಜನಪರ ಕಾರ್ಯ, ದಕ್ಷತೆ, ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಜಯರಾಜ್ ಅವರಿಗೆ ಶಿವಮೊಗ್ಗ ನಗರದಲ್ಲಿ ರೌಢಿಸಂ ವಿರುದ್ಧ ಕೈಗೊಂಡ ದಿಟ್ಟ ಕಾನೂನು ಕ್ರಮಗಳನ್ನು ಗುರುತಿಸಿ ರಾಜ್ಯ ಸರ್ಕಾರ 2015 ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದ್ದು ಕೂಡ ಸ್ಮರಣೀಯವಾಗಿದೆ.
ಸಾಂಸ್ಕೃತಿಕ ರಾಯಭಾರಿಯಾಗಿರುವ ಜಯರಾಜ್ ಎಚ್. ಅವರು ಡಿವೈಎಸ್ಪಿ ಪದೋನ್ನತಗೊಂಡಿರುವದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.
