ಅಂಕೋಲಾಕ್ಕೆ ಗ್ರಹ ಸಚಿವರು ಬಂದ ಹಿನ್ನಲೆಯಲ್ಲಿ ಬ್ಯೂಸಿ ಆದ ಪೊಲೀಸರು.
ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

ಅಂಕೋಲಾಕ್ಕೆ ಗ್ರಹ ಸಚಿವರು ಬಂದ ಹಿನ್ನಲೆಯಲ್ಲಿ ಬ್ಯೂಸಿ ಆದ ಪೊಲೀಸರು.
ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು
ಅಂಕೋಲಾ : ತಾಲೂಕಿನ ಅಂಗಡಿಬೈಲನ ಕಪ್ಪನಗದ್ದೆಯಲ್ಲಿ ಕೋಳಿ ಅಂಕದ ಜೂಜಾಟವು ಬುಧವಾರ ರಂಗೇರಿತ್ತು. ಇತ್ತ ಅಂಕೋಲಾದಲ್ಲಿ ಗ್ರಹ ಸಚಿವ ಜಿ. ಪರಮೇಶ್ವರ ಅವರು ಕಾರ್ಯಕ್ರಮದ ನಿಮಿತ್ತ ಪೊಲೀಸರು ಬ್ಯೂಸಿಯಾಗಿದ್ದಾರೆ ಎಂದು ಅರಿತ ಕೋಳಿ ಅಂಕದ ಜೂಜುಗಾರರು ತಮ್ಮದೆ ಆದ ಕೂಟ ರಚಿಸಿಕೊಂಡು ಬಿಂದಾಸ ಆಗಿ ಅರಣ್ಯ ಪ್ರದೇಶದಲ್ಲಿ ಕೋಳಿ ಜೂಜು ನಡೆಸಿ ಪಾರುಪತ್ಯ ಮರೆದ ಘಟನೆ ವರದಿಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಅಂಕೋಲಾದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಅಂಕುಶ ಹಾಕಿ ಜೂಜುಕೋರರು ಹುಟ್ಟಡಗಿಸಿದ್ದರು. ಆದರೆ ಬುಧವಾರ ಮಾತ್ರ ಅಂಕೋಲಾದ ಪೊಲೀಸರಿಗೆ ಕರೆದುಕೊಳ್ಳಲಿಕ್ಕೂ ಪುರುಸೋತ್ತು ಇರಲಿಲ್ಲ. ತಮ್ಮ ಇಲಾಖೆಯ ಸಚಿವರು ಅಂಕೋಲಾಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಂದೋಬಸ್ತನಲ್ಲಿ ಅಲರ್ಟ್ ಆಗಿದ್ದರು.
ಈ ಸಂದರ್ಭವನ್ನೆ ಬಳಸಿಕೊಂಡ ಕಿಲಾಡಿ ಕೋಳಿ ಅಂಕ ಜೂಜಾಟಗಾರರು ಅಂಗಡಿಬೈಲನ ಕಪ್ಪನಗದ್ದೆಯಲ್ಲಿ 18 ಕೋಳಿಗಳನ್ನು ಅಂಕಕ್ಕೆ ಒಡ್ಡಿ, ತಮಗಾವ ಖಾಕಿಯ ಅಡ್ಡಿ ಇಲ್ಲ ಎಂದು ನಸುನಗುತ್ತಲೆ ಕೋಳಿ ಅಂಕದಲ್ಲಿ ಮೈಮರೆತಿದ್ದರು. ಅಂಕೋಲಾ ಮಾದನಗೇರಿ ಗೋಕರ್ಣ ಹಾಗೂ ಕುಮಟಾ ಭಾಗದಿಂದ ಕೋಳಿಗಳನ್ನು ತಂದ ಜೂಜಾಟಗಾರರು, ಕೋಳಿ ಕಾದಾಟ ನೋಡುತ್ತಲೆ ಜೂಜಿನ ಅಮಲಿನೊಂದಿಗೆ ತೇಲಿ ಹೋಗಿದ್ದರು.
ಬೋರಳ್ಳಿಯ ಕೋಳಿ ಬಿಡುವ ಪಾಪು ಎಂದೇ ನಾಮಾಂಕಿತನಾದ ಈತ ಕೋಳಿ ಅಂಕದ ನೇತ್ರತ್ವವಹಿಸಿದ್ದ. ವಾರದಲ್ಲಿ ಒಂದು ಅಥವಾ ಎರಡು ಭಾರಿ ರಾತ್ರಿ ವೇಳೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬೋರಳ್ಳಿಯ ತನ್ನ ಮನೆಯ ಬಳಿಯೆ ಕೋಳಿ ಅಂಕ ನಡೆಸುತ್ತಿರುವದು ಕೂಡ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತಾಲೂಕಿನ ಅಂಗಡಿಬೈಲನ ಕಪ್ಪನಗದ್ದೆಯ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಪೊಲೀಸ್ ಸಹಾಯವಾಣಿ 112 ಗೆ ಕೂಡ ನಾಗರಿಕರು ಪೋನ್ ಮಾಡಿ ದೂರು ನೀಡಿದ್ದರು. 112 ಪೊಲೀಸರು ಸ್ಥಳಕ್ಕೆ ಹೋಗಿ ಖಾಲಿ ಕೈಯಲ್ಲಿ ಮರಳಿದ್ದರು. ಪೊಲೀಸರು ಬಂದ ದಾರಿಗೆ ಸುಂಕ ಇಲ್ಲಾ ಎಂದು ತೆರಳಿದ ಬೆನ್ನಲ್ಲೆ ಮತ್ತೆ ಕೋಳಿ ಅಂಕ ನಡೆಸಿ ಪೊಲೀಸರು ಮಂಕುಬೂದಿ ಎರಚಿದ್ದಾರೆ ಎಂದು ಗೊತ್ತಾಗಿದೆ.
ಇನ್ನು ಈ ಜೂಜಾಟದಲ್ಲಿ ನೇತ್ರತ್ವಹಿಸಿದ್ದ ಪಾಪು 948241—- ಹಾಗೂ ಲಕ್ಷ್ಮಣನ ತಮ್ಮನಂತಿರುವ 944842—- ಇವರು ಕೋಳಿ ಅಂಕದ ಜೂಜಾಜದ ವೇದಿಕೆ ಸಿದ್ದಪಡಿಸಿದ್ದರು ಎಂದು ಗೊತ್ತಾಗಿದೆ. ಅಂತೂ ಗ್ರಹ ಸಚಿವ ಪರಮೇಶ್ವರ ಅಂಕೋಲಾಕ್ಕೆ ಭೇಟಿಯು ಜೂಜುಕೋರರಿಗೆ ಹಬ್ಬವಾಗಿ ಪರಿಗಣಿಸಿತ್ತು ಮಾತ್ರ ಸುಳ್ಳಲ್ಲ.