ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
: ಎಸ್ಪಿ ನಾರಾಯಣ ಅವರ ದಾಳಿಗೆ ಬೆದರಿ ಪಲಾಯನ !

ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
: ಎಸ್ಪಿ ನಾರಾಯಣ ಅವರ ದಾಳಿಗೆ ಬೆದರಿ ಪಲಾಯನ !
ಅಂಕೋಲಾ : ಅಕ್ರಮ ಇಸ್ಪೀಟ್ ಜೂಜಾಟಕ್ಕೆ ಉಕ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರ ನೇತೃತ್ವದ ಖಾಕಿ ಪಡೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜೂಜುಕೋರರು ನೆಲೆ ಕಳೆದುಕೊಳ್ಳುವಂತಾಗಿದೆ. ಇದರಿಂದಾಗಿ ಅಂಕೋಲಾ, ಕುಮಟಾ ಹಾಗೂ ಭಟ್ಕಳ ಪ್ರದೇಶಗಳಲ್ಲಿ ಜೂಜಾಟ ನಡೆಸುತ್ತಿದ್ದ ಜೂಜುಕೋರರು ಇದೀಗ ಕರ್ನಾಟಕದ ಗಡಿ ಪ್ರದೇಶವಾದ ನೆರೆಯ ಗೋವಾದ ರಾಜ್ಯದ ಪೊಳೆಂ ಭಾಗಕ್ಕೆ ವಲಸೆ ಹೋಗಿ ಅಡ್ಧೆ ಸ್ಥಾಪಿಸಿದ್ದು, ಎಸ್ಪಿ ನಾರಾಯಣ ದಕ್ಷತೆಗೆ ಹಿಡಿದ ಕನ್ನಡಿಯಂತಿದೆ.
ಈ ಮೊದಲು ಗೋಕರ್ಣದ ದೇವರಬಾವಿ, ಅಂಕೋಲಾದ ಬೆಳಸೆ, ಮಾರುಗದ್ದೆ, ಮಕ್ಕಿಗದ್ದೆ, ಹಾಗೂ ಹಿಚ್ಕಡ ಸೇರಿದಂತೆ ಹಲವಾರು ಕಡೆಗಳಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆಗಳು ಬಿಂದಾಸ್ ನಡೆಯುತ್ತಿದ್ದು, ನೂರಾರು ಜೂಜುಕೋರರು ಇವುಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಹಕಾರಕ್ಕೆ ಪ್ರತಿಫಲವಾಗಿ ಪೊಲೀಸರಿಗೂ ‘ಕಪ್ಪ ಕಾಣಿಕೆ‘ ರೂಪದಲ್ಲಿ ಪಾಲು ಸಂದಾಯವಾಗುತ್ತಿರುವದು ಕೂಡ ಸಾರ್ವಜನಿಕರಿಗೆ ಗುಟ್ಟಾಗಿ ಉಳಿದಿರುವ ಸಂಗತಿಯಾಗಿರಲಿಲ್ಲ.
ಆದರೆ ಎಮ್. ನಾರಾಯಣ ಅವರು ಉಕ ಜಿಲ್ಲಾ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಅವರ ನೇತೃತ್ವದಲ್ಲಿ ಖಾಕಿ ಪಡೆ ನಡೆಸಿದ ಆಪರೇಷನಗಳಿಂದಾಗಿ ಜೂಜುಕೋರರ ದಂಧೆಗೆ ತಡೆಬಿದ್ದಿದ್ದು, ಜೂಜುಕೋರರಿಗೆ ಅಂಕೋಲಾ ಹಾಗೂ ಕುಮಟಾ ಪ್ರದೇಶಗಳಲ್ಲಿ ಅಡ್ಡೆ ನೆಲೆಸಲು ಅವಕಾಶವೇ ಸಿಕ್ಕಿಲ್ಲ.
ಜೂಜಾಟದ ಮಾಸ್ಟರಮೈಂಡ್ ಪಾಪಣ್ಣ ಹಾಗೂ ಮಾದನಗೇರಿಯ ಸುಧಾಕರ ಈ ದಂಧೆಯ ಪ್ರಮುಖ ರೂವಾರಿಗಳಾಗಿದ್ದು, ಅಂಕೋಲಾದಿAದ ಭಟ್ಕಳದವರೆಗೆ ವಿವಿಧ ಜೂಜುಕೋರರನ್ನು ಸೇರಿಸಿ, ಗೋವಾದ ಪೊಳೆಂ ಪ್ರದೇಶದಲ್ಲಿ ಜೂಜಾಟಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಕ ಜಿಲ್ಲೆಯಿಂದ ಜೂಜುಕೋರರನ್ನು ಕರೆಯಿಸಿಕೊಳ್ಳುವ ಕಿರಾತಕರು :
ಗೋವಾದ ಪೊಳೆಂನಲ್ಲಿ ಸ್ಥಾಪಿತವಾಗಿರುವ ಈ ಜೀಜು ಅಡ್ಡೆಗೆ ಉಕ ಜಿಲ್ಲೆಯಿಂದ ಜೂಜುಕೋರರನ್ನು ಕರೆಯಿಸಿಕೊಂಡು ಎಲೆಯಾಟವನ್ನು ಕಳೆದ 1 ತಿಂಗಳಿAದ ನಡೆಸಲಾಗುತ್ತಿದೆ. ಬರುವ ಜೂಜುಕೋರರಿಗೆ ಕಾರಿನ ಬಾಡಿಗೆ ಹಣವನ್ನು ಸಂದಾಯ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಎಸ್ಪಿ ನಾರಾಯಣ ಅವರ ಸಾಮಾಜಿಕ ಕಳಕಳಿಯು ಕಾರ್ಯಾಚರಣೆಯಿಂದಾಗಿ ಉಕ ಜಿಲ್ಲೆಯಲ್ಲಿ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.