ಕ್ಯಾಷಿಯರ್ ಮೇಲೆ ಅತ್ಯಾಚಾರಕ್ಕೆ ಯತ್ನ ;
ವರದರಾಜ್ ನಾಯ್ಕ ಅರೆಸ್ಟ್

ಕ್ಯಾಷಿಯರ್ ಮೇಲೆ ಅತ್ಯಾಚಾರಕ್ಕೆ ಯತ್ನ ;
ವರದರಾಜ್ ನಾಯ್ಕ ಅರೆಸ್ಟ್
ರಾಘು ಕಾಕರಮಠ.
ಅಂಕೋಲಾ : ತನ್ನ ಹೊಟೇಲನಲ್ಲಿ ಕೆಲಸಕ್ಕಿದ್ದ ಕ್ಯಾಶಿಯರ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ತೀವ್ರ ತರಹದ ಹಲ್ಲೆ ನಡೆಸಿದ ಘಟನೆ ಅಂಕೋಲಾದ ಬಾಳೆಗುಳಿಯ ವರದರಾಜ್ ಹೊಟೇಲನಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬ0ದಿಸಿದ0ತೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪದ ಮೇಲೆ ವರದರಾಜ್ ಹೋಟೇಲ ಮಾಲಕ ವರದರಾಜ್ ಗಜಾನನ ನಾಯ್ಕ ಹಾಗೂ ಪ್ರಕರಣವನ್ನು ಮುಚ್ಚಿ ಹಾಕಲು ಆಮಿಷ ಒಡ್ಡಿದ, ಆರೋಪಿಯ ತಂದೆ ಗಜಾನನ ನಾಯ್ಕ ಅವರ ಮೇಲೂ ಪ್ರಕರಣ ದಾಖಲಾಗಿದೆ.
ಪೊಲೀಸರು ವರದರಾಜ್ ಗಜಾನನ ನಾಯ್ಕ ಅವರನ್ನು ಬಂಧಿಸಿ ಕಾರವಾರದ ಜೈಲಿಗೆ ಕಳುಹಿಸಿದ್ದಾರೆ. ಗಜಾನನ ನಾಯ್ಕ ತಲೆ ಮರೆಸಿಕೊಂಡಿದ್ದಾರೆ.
ಪ್ರಕರಣವೇನು..?
ದಕ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಯುವತಿಯೊಬ್ಬಳು ಕಳೆದ 8 ತಿಂಗಳಿ0ದ ಬಾಳೆಗುಳಿಯ ವರದರಾಜ್ ಹೊಟೇಲನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದಳು. ಈ ಯುವತಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಪೊಲೀಸ್ ದೂರು ನೀಡಿದ್ದು ದೂರಿನ ಸಾರಾಂಶದಲ್ಲಿ ಹೀಗೆ ವಿವರಿಸಿದ್ದಾಳೆ.
ನನಗೆ ಹೊಟೇಲನಲ್ಲಿ ಉಳಿದು ಕೆಲಸ ಮಾಡಲು ವಸತಿಗ್ರಹದಲ್ಲಿದ್ದ ರೂಮ್ ನಂ: 210 ನೇ ನೀಡಲಾಗಿತ್ತು.
ದಿನಾಂಕ 3 ಜುಲೈ ರಂದು ರಾತ್ರಿ ತನ್ನ ಹೊಟೇಲ್ ಕೆಲಸ ಮುಗಿಸಿಕೊಂಡು ವಿಶ್ರಾಂತಿಗಾಗಿ ನನ್ನ ರೂಂಗೆ ಹೋಗಿ ಮಲಗಿಕೊಂಡಿದೆ. 4-07-2025 ರಂದು ಬೆಳಗ್ಗಿನ ಜಾವ 2-30 ಗಂಟೆ ಸುಮಾರಿಗೆ ವರದರಾಜ್ ಗಜಾನನ ನಾಯ್ಕ ಈತನು ನನ್ನ ಮೋಬೈಲಗೆ ಹಲವು ಬಾರಿ ಕರೆ ಮಾಡಿ ತಾನು ನಿನ್ನ ರೂಮಿಗೆ ಬರುತ್ತೇನೆ ಬಾಗಿಲು ತೆಗಿ ಅಂತಾ ಹೇಳಿದ್ದನು. ಆದರೆ ನಾನು ವರದರಾಜ್ನಿಗೆ ಬೆಳಿಗ್ಗೆ ಮಾತನಾಡುವಾ ಅಂತಾ ಹೇಳಿದ್ದೇನು.
ಆಗ ವರದರಾಜ್ ನಾಯ್ಕ ನಿನ್ನ ಹತ್ತಿರ ನನ್ನ ತಂದೆ ಗಜಾನನ ನಾಯ್ಕ ಬಗ್ಗೆ ಮಾತನಾಡುವದಿದೆ ಎಂದು ಹೇಳಿದ್ದಾನೆ. ಆಗ ನಾನು ಬೇಡಾ ಎಂದು ಹೇಳಿದ್ರೂ ನಾನು ಯುವತಿ ತಂಗಿದ್ದ ರೂಂನ ಬಾಗಿಲನ್ನು 2-3 ಭಾರಿ ತಟ್ಟಿದ್ದಾನೆ. ಆಗ ನಾನು ಭಯಗೊಂಡು ಬಾಗಿಲನ್ನು ತೆರೆದಿರಲಿಲ್ಲ.
ಆಗ ಆರೋಪಿ ವರದರಾಜ್ ನಾಯ್ಕ ರೂಮಿನ ಒಳಗೆ ಹೋಗಿ ಬಾಗಿಲನ್ನು ಹಾಕಿ ಲಾಕ್ ಮಾಡದೇ ನನ್ನ ಬಳಿ ಬಂದು ನಿನಗೆ ಎನೂ ಆಗದೇ ಇರುವ ತರ ಕೆಲಸ ಮಾಡುತ್ತೇನೆ ಸಹಕರಿಸು ಅಂತಾ ಹೇಳಿದ್ದಾನೆ.
ಆಗ ನಾನು ಆ ರೀತಿಯ ಹುಡುಗಿ ನಾನಲ್ಲ ಸರ್.. ಇದೆಲ್ಲಾ ಬೇಡಾ ಸರ್. ಕಳೆದ 8 ತಿಂಗಳಿAದ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ ಇನ್ನು ಮುಂದೆಯೂ ಹಾಗೆಯೇ ಕೆಲಸ ಮಾಡುತ್ತೇನೆ ಅಂತಾ ಹೇಳಿ ಅಂಗಲಾಚಿಕೊAಡಿದ್ದೆ.
ಆಗ ಆರೋಪಿ ವರದರಾಜ್ ನಾಯ್ಕ ನನ್ನ ಸಮೀಪ ಬಂದು ಭುಜದ ಮೇಲೆ ಕೈ ಹಾಕಿದಾಗ ನಾನು ಜೋರಾಗಿ ಕಿರಿಚಿಕೊಂಡೆ. ಆಗ ವರದರಾಜ್ ನಾಯ್ಕ ಕೈಯಿಂದ ಬಾಯನ್ನು ಬಿಗಿಯಾಗಿ ಹಿಡಿದುಕೊಂಡು, ಇನ್ನೊಂದು ಕೈಯಿಂದ ನನಗೆ ಹೊಡೆದು ಹೇಗೆ ನೀನು ತಪ್ಪಿಸಿಕೊಳ್ಳುತ್ತೀಯಾ ನೋಡುತ್ತೇನೆ.
ಇವತ್ತು ತಾನು ಬಲತ್ಕಾರ ಮಾಡಿಯೇ ಬಿಡುತ್ತೇನೆ ಅಂತಾ ನನ್ನನ್ನು ನೆಲಕ್ಕೆ ದೂಡಿ ಕಾಲಿನಿಂದ ಹೊಟ್ಟೆಗೆ ಒದ್ದು, ಬಲಗಾಲನ್ನು ತುಳಿದು ನನ್ನ ಮೈ ಮೇಲೆ ಬಿದ್ದು ಬಟ್ಟೆಗಳನ್ನೆಲ್ಲಾ ಎಳೆದಾಡುತ್ತಿರುವಾಗ, ನಾನು ಜೋರಾಗಿ ಕಿರುಚಾಡುತ್ತಿರುವ ಶಬ್ದ ಕೇಳಿ ಪಕ್ಕದ ರೂಮಿನಲಿದ್ದ ಗಜಾನನ ನಾಯ್ಕ ಬಂದು ತಪ್ಪಿಸಲು ಪ್ರಯತ್ನಿಸಿದ್ದಾರೆ.
ಆಗ ಗಜಾನನ ನಾಯ್ಕ ಅವರು ನಾನು ತೀವ್ರ ರಸಕ್ತಸ್ರಾವದಿಂದ ಬಳಲುತ್ತಿರುವದನ್ನು ನೋಡಿ ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ಕೊಡತೆವೆ. ಆದರೆ ಇಲ್ಲಿ ನಡೆದ ವಿಷಯ ಹೇಳಬೇಡ. ನೀನಾಗಿಯೇ ಕಾಲು ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾಗಿ ಹೇಳು. ಒಂದಾನುವೇಳೆ ನೀನು ತನ್ನ ಮಗ ವರದರಾಜ್ನ ಬಗ್ಗೆ ಆಸ್ಪತ್ರೆ ಅಥವಾ ಪೊಲೀಸರಲ್ಲಿ ಹೇಳಿದ್ದರೆ ನಿನ್ನನ್ನು ಕೊಂದು ಹೂತು ಹಾಕಿ ಹೆಣ ಸಿಗದಂತೆ ಮಾಡುತ್ತೇವೆ.
ನಾವು ಹೇಳಿದ ಹಾಗೆ ನೀನು ಕೇಳಬೇಕು ಅಂತಾ ಹೇಳಿ ಹೊಟೇಲ್ನ ಪಕ್ಕದಲ್ಲಿ ಇರುವ ಗ್ಯಾರೇಜನ ರಾಜು ಶೆಟ್ಟಿ ಈತನಿಗೆ ಕರೆದು ಆಸ್ಪತ್ರೆಗೆ ಹೋಗುವುದಿದೆ ಅಂತಾ ಹೇಳಿ ಗಜಾನನ ನಾಯ್ಕ ಅವರ ಕಾರಿನಲ್ಲಿಯೆ ಗಜಾನನ ಹಾಗೂ ರಾಜು ಶೆಟ್ಟಿ ಇಬ್ಬರೂ ಸೇರಿ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ವೈದ್ಯರು ವಿಚಾರಿಸಿದಾಗ ನಾನು ಹೆದರಿ ಗಜಾನನ ನಾಯ್ಕ ಅವರು ಹೇಳಿಕೊಟ್ಟಂತೆ ನಾನು ತಲೆ ತಿರುಗಿ ಬಿದ್ದು ಗಾಯ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಹೇಳಿದ್ದೇನು. ಚಿಕಿತ್ಸೆಯ ನಂತರ ವಾಪಸ್ ಹೊಟೇಲ್ ರೂಮಿಗೆ ಕರೆದುಕೊಂಡು ಹೋಗಿದ್ದು ಅಲಿ. ರೂಮಿನಲ್ಲಿ ಬಿದ್ದಿದ್ದ ರಕ್ತವನ್ನೆಲ್ಲಾ ಒರೆಸಿ ರೂಮ್ ಕ್ಲೀನ್ ಮಾಡಿದ್ದರು,
ನನ್ನ ಮೋಬೈಲನನ್ನು ರೂಮಿನಲಿ ಹುಡುಕಾಡಿದಾಗ ಬ್ಯಾಗನಲ್ಲಿದ್ದ ಮೊಬೈಲ್ ಹಾಗೂ 10 ಸಾವಿರ ರೂಪಾಯಿ ಹಣ ಕೂಡ ಇರಲಿಲ್ಲ. ನಂತರ ನಾನು ಊರಿಗೆ ಹೋಗಿ ತಾಯಿಯ ಬಳಿ ನಡೆದ ವಿಷಯ ತಿಳಿಸಿದ್ದೆ. ನನಗೆ ಮನೆಯಲ್ಲಿ ದೈರ್ಯ ತುಂಬಿದ್ದರಿAದ ನಾನು ಅಂಕೋಲಾಕ್ಕೆ ಪೊಲೀಸ್ ದೂರು ನೀಡುತ್ತಿದ್ದೇನೆ. ನನ್ನ ಮೇಲೆ ದೌರ್ಜನ್ಯ ಎಸೆಗಿದ ಆರೋಪಿಗಳಾದ ವರದರಾಜ್ ನಾಯ್ಕ ಹಾಗೂ ಗಜಾನನ ನಾಯ್ಕ ಮೇಲೆ ಕ್ರಮ ಕೈಗೊಳ್ಳುವಂತೆ ಲಿಖಿತ ದೂರಿನಲ್ಲಿ ಸಂತ್ರಸ್ತ ಯುವತಿ ಉಲ್ಲೇಖಿಸಿದ್ದಾಳೆ.
ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸಿ ಗಿರೀಶ ಅವರ ತನಿಖೆಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಸಂತ್ರಸ್ತ ಯುವತಿ ಪರಿಶಿಷ್ಠ ಪಂಗಡದ ಯುವತಿಯಾಗಿದ್ದು, ಆರೋಪಿಗಳ ಮೇಲೆ ಅತ್ಯಾಚಾರ ಯತ್ನ, ದಲಿತ ದೌರ್ಜನ್ಯ, ಹಲ್ಲೆ, ಸಾಕ್ಷಿ ನಾಶ ಸೇರಿದಂತೆ ವಿವಿಧ ಕಲಂ ಅಡಿ ಭಾರತೀಯ ನ್ಯಾಯ ಸಂಹಿತೆಯ ಕಾನೂನಿನ ಅಡಿ ಪ್ರಕರಣ ದಾಖಲಾಗಿದೆ.
ಸಾಂತ್ವನ ಹೇಳಿದ ಎಸ್ಪಿ :
ಸಂತ್ರಸ್ತ ಯುವತಿಯ ದೂರು ಆಲಿಸಿದ ಎಸ್ಪಿ ನಾರಾಯಣ ದೈರ್ಯ ತುಂಬಿ ನಿನ್ನ ಜೊತೆ ನಮ್ಮ ಇಲಾಖೆಯಿದೆ ಎಂದು ಸಾಂತ್ವನ ಹೇಳಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಗಿರೀಶ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸೈ ಜಯಶ್ರೀ ಪ್ರಭಾಕರ ಹಾಗೂ ಸಿಬ್ಬಂದಿಗಳು ಅತ್ಯುಮವಾಗಿ ಕಾರ್ಯ ನಿರ್ವಹಿಸಿ ಮಾದರಿಯಾಗಿದ್ದಾರೆ.
