ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
ಅಂಕೋಲಾ : ಇಲ್ಲಿಯ ಪೊಲೀಸ್ ಠಾಣೆಯ ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ಧಿ ಅವರು ಮಂಗಳವಾರ ಕರ್ತವ್ಯ ಸ್ವೀಕರಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುನೀತ್ ನಾಯ್ಕ ಅವರನ್ನು ಕರ್ತವ್ಯ ಲೋಪದ ಅಡಿಯಲ್ಲಿ ಅಂಕೋಲಾ ಠಾಣೆಯಿಂದ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜಿಸಿದ್ದರಿಂದ ಮಂಗಳವಾರ ಸಂಜೆ ಪುನೀತ್ ನಾಯ್ಕ ಭಟ್ಕಳ ಠಾಣೆಗೆ ತೆರಳಿ ಹಾಜರಾಗಿದ್ದಾರೆ.
ಪುನೀತ್ ನಾಯ್ಕ ಅವರಿದ್ದ ಸ್ಥಾನವು ತೆರವಾಗಿದ್ದರಿಂದ ಗುಪ್ತಚರ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಸಲು ಹಲವು ಸಿಬ್ಬಂದಿಗಳು ಉತ್ಸುಕರಾಗಿದ್ದರು ಎನ್ನಲಾಗಿದೆ. ಅಂತಿಮವಾಗಿ ಸಿಪಿಐ ಚಂದ್ರಶೇಖರ ಮಠಪತಿ ಅವರು ಶೇಖರ ಸಿದ್ಧಿ ಅವರನ್ನು ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ನೇಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಗುಪ್ತಚರ ಇಲಾಖೆಯ ಸಿಬ್ಬಂದಿಗೆ ಪೊಲೀಸ್ ಇಲಾಖೆಯಲ್ಲಿ ತನ್ನದೆ ಆದ ಸ್ಥಾನಮಾನವಿದೆ. ಮುಖ್ಯವಾಗಿ ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಬೆರೆತು ಆಂತರಿಕ ಮಾಹಿತಿಗಗಳನ್ನು ಕಲೆ ಹಾಕುವ ನೈಪುಣ್ಯತೆ ಗುಪ್ತಚರ ಇಲಾಖೆಯ ಸಿಬ್ಬಂದಿಗೆ ಇರಬೇಕಾಗುತ್ತದೆ. ಜೊತೆಗೆ ಇಲಾಖೆಯ ಸಿಬ್ಬಂದಿಯವರೊAದಿಗೆ ಆತ್ಮೀಯತೆಯಿಂದ ಇರುವ ಕಲೆಗಾರಿಕೆಯು ಮಹತ್ವದ್ದಾಗಿದೆ.
ಅಧಿಕಾರಿಗಳನ್ನು ಸಹ ಎಲ್ಲ ರೀತಿಯಲ್ಲೂ ಸಮಾದಾನ ಪಡಿಸಿ, ಅವರನ್ನು ಅತಿ ಹತ್ತಿರದ ಆತ್ಮೀಯತೆ ಹೊಂದಿರುವ ಸಿಬ್ಬಂದಿ ಎಂದರೆ ಅದು ಗುಪ್ತಚರ ಇಲಾಖೆಯ ಸಿಬ್ಬಂದಿಯದ್ದಾಗಿದೆ. ಒಟ್ಟಾರೆ ಅಂಕೋಲೆ ತಾಲೂಕಿನಲ್ಲಿ ಗುಪ್ತಚರ ಇಲಾಖೆಯ ಸಿಬ್ಬಂದಿಯ ನಡೆ ಮಾತ್ರ ನಾಗರಿಕರ ಗಮನದಲ್ಲಿ ಅವಲೋಕನಕ್ಕೆ ತೆರೆದುಕೊಂಡಿದೆ.