ಶಿರಸಿ: ತಾಲೂಕಿನ ಆರ್ಯ ಈಡಿಗ ನಾಮದಾರಿ ಬಿಲ್ಲವ ಸಮಾಜದವರು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ದಿನದಂದು ಒಗ್ಗಟ್ಟು ಪ್ರದರ್ಶನ ಮಾಡಿದರು.

ಈ ಕ್ಷೇತ್ರದಲ್ಲಿ ರಾಜಕೀಯವಾಗಿ ವಿಂಗಡನೆಯಾಗಿದ್ದ ಹಿಂದೂಳಿದ   ವರ್ಗದ ಆರ್ಯ ಈಡಿಗ ನಾಮದಾರಿ ಬಿಲ್ಲವ ಸಮಾಜದವರು ಇಂದು ಪ್ರಥಮ ಬಾರಿಗೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಈ ಒಗ್ಗಟ್ಟು ನೋಡುಗರಿಗೆ ಮುಂಬರುವ ಚುನಾವಣೆಗಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಿದಂತ್ತಿತ್ತು. 

ಮಾರಿಗುಡಿಯಿಂದ ಚಾಲನೆ ಪಡೆದುಕೊಂಡ ನಾರಾಯಣ ಗುರುಗಳ ಜಯಂತಿ ಮೆರವಣಿಗೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಆರ್ಯ ಈಡಿಗ ನಾಮಧಾರಿ ಬಿಲ್ಲವ ಸಮಾಜದವರು ಬಿಳಿ ಬಣ್ಣದ ಸಮವಸ್ತ್ರ ಹಾಗು ಕೊರಳಿಗೆ ಹಳದಿ  ಬಣ್ಣದ ಶಾಲು ಹೊದ್ದು  ಶಿಸ್ತಿನಿಂದ ಪಾಲ್ಗೊಂಡಿದ್ದರು.ಕಾಂಗ್ರೆಸ್ ಬಿಜೆಪಿ ಹಾಗು ಜೆಡಿಎಸ್ ನಲ್ಲಿರುವ ಪ್ರಮುಖ ನಾಯಕರು ತಮ್ಮ ಪಕ್ಷಭೇದ ಮರೆತು ನಾವು ನಮ್ಮ ಸಮಾಜದವರು ಎಂದೆಂದಿಗೂ ಒಂದೇ ಎನ್ನುವ ಭಾವನೆಯಲ್ಲಿ  ಇಂದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಷೇಶವಾಗಿತ್ತು