ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ವಾಗೇಲಿ ಗ್ರಾಮಕ್ಕೆ ನೂತನ ಬಸ್ಸ ಆರಂಭವಾಗಿದ್ದು ಗ್ರಾಮಸ್ಥರು ಶನಿವಾರ ಬಸ್ಸಗೆ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಬಸ್ಸ ಬಂದ ಸಂತಸದಲ್ಲಿ ಸಿಹಿ ಹಂಚಿದರು.
ಕಳೆದ ನಾಲ್ಕೂ ದಿನಗಳ ಹಿಂದೆ ಜೋಯಿಡಾ ಶಾಸಕ ಆರ್.ವಿ.ದೇಶಪಾಂಡೆ ನಾಗೋಡಾ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿಗಳ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ವಾಗೇಲಿ ಗ್ರಾಮಸ್ಥರು ನಮಗೆ ಸಾರಿಗೆ ಬಸ್ಸನ ವ್ಯವಸ್ಥೆ ಇಲ್ಲ . ಶಾಲಾ ಮಕ್ಕಳಿಗೆ ಮತ್ತು ಊರಿನ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿದೆ ಕೂಡಲೇ ನಮಗೆ ಬಸ್ಸನ ವ್ಯವಸ್ಥೆ ಮಾಡಿ ಕೊಡಿ ಎಂದು ಮನವಿ ಮಾಡಿದ್ದರು. ಈ ಬಗ್ಗೆ ಭರವಸೆ ನೀಡಿದ್ದ ಶಾಸಕ ಆರ್.ವಿ.ದೇಶಪಾಂಡೆ ನಾಲ್ಕು ದಿನಗಳ ಒಳಗಾಗಿ ಸಾರಿಗೆ ಬಸ್ಸನ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿನ ಜನರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಾಗೇಲಿ ಗ್ರಾಮಕ್ಕೆ ಸಾರಿಗೆ ಬಸ್ಸ ಇಲ್ಲ ಎಂದು ಇಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದರು. ನಮ್ಮ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಕೂಡಲೇ ಸಮಸ್ಯೆಗೆ ಸ್ಪಂದಿಸಿ ಬಸ್ಸ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರಿಗೆ ನಮ್ಮ ಗ್ರಾಮ ಪಂಚಾಯತನಿಂದ ಅಭಿನಂದನೆ ಸಲ್ಲಿಸುತ್ತೇವೆ.
ದಿಗಂಬರ ದೇಸಾಯಿ
ಅಧ್ಯಕ್ಷರು ಗ್ರಾಮ ಪಂಚಾಯತಿ ನಾಗೋಡಾ
Attachments area
