ಶಿರಸಿ: ದಿನೇ ದಿನೇ ಸುರಿಯುತ್ತಿರುವ ಮಳೆ ಗಾಳಿಗೆ ಸೋಮವಾರದಂದು ಮಳಲಗಾಂವದಿಂದ ಉಂಡಾಡಿಕಟ್ಟೆ ಮಾರ್ಗ ಕುಪ್ಪಳ್ಳಿಗೆ ಹೋಗುವ ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಯಲ್ಲಿ ಉರುಳಿ ಬಿದ್ದಿತ್ತು.
ಅದನ್ನು ನೋಡಿ ಮಳಲಗಾಂವದ 7 ರಿಂದ 8 ಯುವಕರು ತೆರವುಗೊಳಿಸಿ ಜನರಿಗೆ ದಾರಿಯಲ್ಲಿ ಚಲಿಸಲು ಅನುಕೂಲಿಸಿದಕ್ಕಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಘಟನೆ ಶಿರಸಿ ತಾಲೂಕಿನ ಬಿಸಲಕೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
