ವರದಿ : ದಿನಕರ ನಾಯ್ಕ. ಅಲಗೇರಿ
ಅಂಕೋಲಾ : ಬೈಕ್ಗೆ ಹಿಂಬದಿಯಿಂದ ಕಾರ ಬಡಿದು ಅಫಘಾತಪಡಿಸಿದ ಪರಿಣಾಮ ತಾಯಿ – ಮಗ ಗಾಯಗೊಂಡಿರುವ ಘಟನೆ ಬಾಳೆಗುಳಿ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಕೋಲಾ ವಲಯದ ಸೇವಾ ಪ್ರತಿನಿಧಿ ವಿಶಾಲಾಕ್ಷಿ ದೇವಿದಾಸ ಹಳಕಾರ ಹಾಗೂ ಇವರ ಪುತ್ರ ನಿರಂಜನ ದೇವಿದಾಸ ಹಳಕಾರ ಗಾಯಗೊಂಡವರು.

ಅಂಕೋಲಾದಿಂದ ಕಾರವಾರದ ಕಡೆಗೆ ಸ್ಕೂಟಿಯಲ್ಲಿ ಸಾಗುತ್ತಿರುವಾಗ ಹಿಂಬದಿಯಿಂದ ಬಂದ ಕಾರ ಗುದ್ದಿ ಅಫಘಾತಪಡಿಸಿದೆ. ಕೂಡಲೆ ರಾಷ್ಟೀಯ ಹೆದ್ದಾರಿಯ ಅಂಬುಲೆನ್ಸ್ ಮೆಡಿಕಲ್ ಇಚಾರ್ಜ ಚೇತನ ಆಗೇರ ಹಾಗೂ ಚಾಲಕ ಶಿವಾ ನಾಯ್ಕ. ಅವರ್ಸಾ ಅವರು ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿ ಅಂಕೋಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಅಂಕೋಲಾ ಪೊಲೀಸ್ರು ಸ್ಥಳಕ್ಕಾಗಮಿಸಿ ಪ್ರಕರಣದ ಮಾಹಿತಿ ಪಡೆದು ಪ್ರಕರನ ದಾಖಸಿದ್ದಾರೆ.
