ಅಂಕೋಲಾ : ತಾಲೂಕಿನ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಅನುಭವಿ ನ್ಯಾಯವಾದಿ ವಿನೋದ ವಿ. ಶಾನಭಾಗ,ಕಾರ್ಯದರ್ಶಿಯಾಗಿ ಸರಳ, ಸಜ್ಜನ ನ್ಯಾಯವಾದಿ ಲಕ್ಷ್ಮೀದಾಸ ನಾಯ್ಕ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನ್ಯಾಯವಾದಿ ನಿತ್ಯಾನಂದ ಕವರಿ, ಖಜಾಂಚಿಯಾಗಿ ನ್ಯಾಯವಾದಿ ರಾಮಚಂದ್ರ ಗೌಡ, ಸಹಕಾರ್ಯದರ್ಶಿಯಾಗಿ ನ್ಯಾಯವಾದಿ ಮಮತಾ ಕೆರೆಮನೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೀರಣ್ಣ ನಾಯಕ, ನಾಗಾನಂದ ಬಂಟ, ಉಮೇಶ ನಾಯ್ಕ, ಸಂತೋಷ ನಾಯ್ಕ, ಗುರು ನಾಯ್ಕ, ಎಂ.ಪಿ,ಭಟ್ಟ, ಸುಭಾಷ ನಾರ್ವೇಕರ, ಸುರೇಶ ಬಾನಾವಳಿಕರ ಆಯ್ಕೆಗೊಂಡರು.

ಪ್ರಸಕ್ತ ಸಾಲಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ವಿನೋದ ಶಾನಭಾಗ ಹಾಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಹಲವಾರು ವಿಧಾಯಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಕೋಲಾದ ಭೂನ್ಯಾಯಮಂಡಳಿಯ ಸದಸ್ಯರಾಗಿ, ಗೃಹರಕ್ಷಕ ದಳದ ಅಂಕೋಲಾದ ಘಟಕಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಾ ಉತ್ಸಾಹಿ ತರುಣರಾಗಿದ್ದು, ಇವರ ಅವಧಿಯಲ್ಲಿ ವಕೀಲರ ಸಂಘ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿರೀಕ್ಷೆ ನ್ಯಾಯವಾದಿಗಳದ್ದಾಗಿದೆ.

ಇವರು ವಕೀಲ ವೃತ್ತಿಯಲ್ಲಿ 17 ವರ್ಷ ಅನುಭವವನ್ನು ಪಡೆದು, 4 ವರ್ಷ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ, ಈಗ ಅಂಕೋಲಾದಲ್ಲಿ ಕಳೆದ 11 ವರ್ಷದಿಂದ ಅತ್ಯುತ್ತಮ ನ್ಯಾಯವಾದಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ತಮ್ಮ ಕರ್ತವ್ಯದಲ್ಲಿ ಎಲ್ಲಿಯೂ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ.

ತಮ್ಮ ವಕೀಲ ವೃತ್ತಿಯ ಜೊತೆಗೆ ಸಾಮಾಜಿಕ ಚಟುವಟಿಕೆಯೊಂದಿಗೆ, ಸಕ್ರೀಯವಾಗಿ ಗುರುತಿಸಿಕೊಂಡಿರುವ ವಿನೋದ ಶಾನಭಾಗ ಅವರು ಪೂಜಗೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ವಿನೋದ ಶಾನಭಾಗ ಅವರ ಕ್ರಿಯಾಶೀಲತೆಯ ಹಿಂದಿನ ಪ್ರೋತಾಹವಾಗಿ ಪತ್ನಿ ವಿನಯಾ, ಮಕ್ಕಳಾದ ವಿನೀತ್, ವಿನುತಾ ಜೊತೆಯಾಗಿದ್ದಾರೆ.