ಕಾರವಾರ : ಹಳೆಯ ಬಂಗಾರವನ್ನು ಪಡೆದುಕೊಂಡು ಡಿಸೈನ್ ಬದಲಾವಣೆ ಮಾಡಿ ನಕ್ಲೆಸ್ ಹಾಗೂ ಕಿವಿಯೊಲೆ ಮಾಡಿಕೊಡುತ್ತೇನೆ ಎಂದು ಹೇಳಿ, ಬಂಗಾರದ ಆಭರಣವನ್ನು ನೀಡದೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಾರವಾರದ ಗಾಂಧಿ ಮಾರ್ಕೆಟ್ನಲ್ಲಿರುವ ವೆಂಕಟೇಶ ಜ್ಯುವೇಲರ್ಸ್ ನ ಪ್ರವೀಣ ಸತೀಶ ಕುಡ್ತಲಕರ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಶಿರವಾಡದ ಬಂಗಾರಪ್ಪ ನಗರದ ರಜಿಯಾ ಮಹಮ್ಮದ ಶೇಖ ಈ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ನಡೆದದ್ದೇನು..? : ಪ್ರವೀಣ ಸತೀಶ ಕುಡ್ತಲಕರ ಈತನು 1-12-2022 ರಂದು 31.950 ಗ್ರಾಂ (ಗ್ರಾಸ್ ವೇಟ್) ನ 1 ಲಕ್ಷದ 80 ಸಾವಿರ ಮೌಲ್ಯದ ಬಂಗಾರವನ್ನು ಪಡೆದುಕೊಂಡು, ಡಿಸೈನ್ ಬದಲಾವಣೆ ಮಾಡಿ ನಕ್ಲೆಸ್ ಹಾಗೂ ಕಿವಿಯೊಲೆ ಮಾಡಿಕೊಡುತ್ತೇನೆ ಎಂದು ತಿಳಿಸಿದ್ದು ಇರುತ್ತದೆ. ಸದರಿ ಬಂಗಾರವನ್ನು ಪಡೆದುಕೊಂಡ ರಸೀದಿಯನ್ನು ನೀಡಿ 28-12-2022 ರಂದು ಆಭರಣವನ್ನು ನೀಡುತ್ತೇನೆ ಎಂದು ಹೇಳಿದ್ದರು.
ನಂತರ 28-02-2022 ರಂದು ಆಭರಣವನ್ನು ಕೇಳಲು ಹೋದಾಗ ಆಭರಣ ರೆಡಿ ಆಗಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ ಇನ್ನು ತನಕ ಬಂಗಾರವನ್ನು ಪಡೆದುಕೊಂಡು ಮರಳಿ ನೀಡದೆ ವಂಚಿಸಿದ್ದಾರೆ. ಬಂಗಾರ ಕೊಡಬಹುದು ಎಂಬ ನಂಬಿಕೆಯಿಂದ ಇಷ್ಟು ದಿನ ಪ್ರಕರಣ ದಾಖಲಿಸಲು ತಡವಾಗಿದೆ ಎಂದು ರಜಿಯಾ ಮಹಮ್ಮದ ಶೇಖ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾರವಾರ ನಗರ ಠಾಣೆಯ ಪಿಎಸೈ ಕುಮಾರ ಕಾಂಬ್ಳೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
