ಅಂಕೋಲಾ : ಮೂಲತ: ಅಂಕೋಲಾದವರಾದ, ವಿಜಯಪುರ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ ಬಿ. ನಾಯಕ (58) ಅವರು ಬುಧವಾರ ತಮ್ಮ ಸೇವೆಯ ಅವಧಿಯಲ್ಲಿಯೆ ಹೃದಯಾಘಾತದಿಂದ ನಿಧನರಾದರು.

 ಮೃತರ ಪಾರ್ಥಿವ ಶರೀರವನ್ನು ವಂದಿಗೆಯಲ್ಲಿರುವ ಅವರ ಸ್ವಗ್ರಹಕ್ಕೆ ಗುರುವಾರ ತಂದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸರಕಾರಿ ಪೊಲೀಸ್ ಗೌರವವನ್ನು ಸೂಚಿಸಿದ ಪೊಲೀಸ್ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ವಿಜಯಪುರದ ಲೊಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ, ಕಾರವಾರದ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, ಕಾರವಾರ ವಲಯದ ಡಿವೈಎಸ್ಪಿ ವಾಲೆಂಟೈನ್ ಡಿಸೋಜಾ, ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಸಂತೋಷ ಶೆಟ್ಟಿ, ಪಿಸೈ ಉದ್ದಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದು ಸರಕಾರಿ ಗೌರವ ಸಲ್ಲಿಸಿದರು.

 ವಿಜಯಪುರದ ಜಿಲ್ಲೆಯ ಲೋಕಾಯುಕ್ತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅರುಣಕುಮಾರ ನಾಯಕ ಅವರು ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಂಡ್ಮಿಡನ್ ಆಡುವಾಗ ಕುಸಿದು ಬಿದ್ದು ಅಸ್ವಸ್ವರಾಗಿದ್ದರು. ಅವರನ್ನು ಕೂಡಲೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಅರುಣ ನಾಯಕ ಅವರ ಪುತ್ರ ವೈಧ್ಯರಾಗಿದ್ದು, ಪತ್ನಿ ಮಗನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು

ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಜನಪ್ರೀಯತೆಗಳಿಸಿದ್ದ ಅರುಣ ಬಿ. ನಾಯಕ ಅವರು ಅನೇಕ ಪ್ರಕರಣ ಬೇಧಿಸಿ ಇಲಾಖೆಗೆ ವಿಶೇಷವಾಗಿ ಕರ್ತವ್ಯ ಸಲ್ಲಿಸಿದ್ದರು. ಸಾವಿರಾರು ಜನರು ಮೃತರ ಅಂತಿಮ ದರ್ಶನವನ್ನು ಪಡೆದು ಕಂಬನಿ ಮಿಡಿದರು. ಮೃತರು ಪತ್ನಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.