ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ವರ್ಗಾವಣೆಗೆ ಆಗ್ರಹ : ವರ್ಗಾವಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ತಾಲುಕಿನ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಾಲೂಕಾ ಮೀನುಗಾರರ ಒಕ್ಕೂಟ ಹೋರಾಟ ಸಮಿತಿಯು ಮೀನುಗಾರಿಕಾ ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈಧ್ಯ ಅವರಿಗೆ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ್ ಮೂಲಕ ಮನವಿ ನೀಡಿ ಎಚ್ಚರಿಸಿದರು.

ಮೀನುಗಾರಿಕಾ ಇಲಾಖೆ ಅಂಕೋಲಾ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಇವರ ಕಾರ್ಯವೈಕರಿಯನ್ನು ಖಂಡಿಸಿ ಇವರನ್ನು ಇಲ್ಲಿಂದ ವರ್ಗಾಯಿಸುವಂತೆ ತಮ್ಮ ಗಮನಕ್ಕೆ ತರಲಾಗಿತ್ತು ಆದರೂ ಸಹ ಈವರೆಗೆ ವರ್ಗಾವಣೆ ಗೊಂಡಿಲ್ಲ. ಇವರು ಮೀನುಗಾರರ ಆಶೋತ್ತರಗಳಿಗೆ ವಿರುದ್ಧವಾಗಿ, ಅಸಭ್ಯವಾಗಿ, ಸರಕಾರದ ಯಾವುದೇ ಯೋಜನೆಯ ಕುರಿತು ಮೀನುಗಾರರಿಗೆ ಸರಿಯಾದ ಮಾಹಿತಿ ನಿಡದೇ ತೊಂದರೆ ನೀಡುವುದು. ದೋಣಿ ಹಾಗೂ ಬೋಟ್ ಮಾಲಿಕರಿಗೆ ನೊಂದಣಿ ಮರುನೊಂದಣಿ ಡಿಸೈಲ್ ಬುಕ್ ಹೀಗೆ ಹಲವಾರು ಸೌಲತ್ತುಗಳಿಗೆ ಆನಾವಶ್ಯಕವಾಗಿ ಕಚೇರಿಗೆ ಅಲೆದಾಡುವಂತೆ ಮಾಡುವುದು. ಕೆಲವು ಏಜಂಟರ ಮೂಲಕ ಹಣಕ್ಕೆ ಬೇಡಿಕೆ ಇಡುವುದು ಮಾಡುತ್ತಿದ್ದಾರೆ. ಈ ದುರ್ನಡತೆಯನ್ನು ಖಂಡಿಸಿ ಕೂಡಲೇ ಅವರನ್ನು ವರ್ಗಾಯಿಸಬೇಕೆಂದು ಕಳೆದ 5 ತಿಂಗಳಿAದ ಒತ್ತಾಯಿಸಿದರು ವರ್ಗಾವಣೆ ಗೊಂಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮೀನುಗಾರಿಕಾ ಸೀಜನ್ ಪ್ರಾರಂಬವಾಗಲಿದ್ದು ದೋಣಿ ಹಾಗೂ ಬೋಟ್‌ಗಳ ನೊಂದಣಿ ಹಾಗೂ ಇನ್ನಿತರ ಚಟುವಟಿಕೆಗಳು ಪ್ರಾರಂಭವಾಗಬೇಕಾಗಿದೆ.

ಆದ್ದರಿ0ದ ಮೀನುಗಾರರ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ತಾವು ಮೀನುಗಾರಿಕಾ ಸಚಿವರಾಗಿರುವುದರಿಂದ ಅವರನ್ನು 7 ದಿನಗಳ ಒಳಗಾಗಿ ಇವರನ್ನು ಇಲ್ಲಿಂದ ವರ್ಗಾಯಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಿ ಮೀನುಗಾರಿಕಾ ಇಲಾಖೆಯ ಕಚೇರಿಗೆ ಬೀಗಹಾಕಿ ಇವರು ವರ್ಗಾವಣೆ ಆಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಅಂಕೋಲಾ ತಾಲೂಕಾ ಮೀನುಗಾರ ಒಕ್ಕೂಟ ಸಮಿತಿ ಅಧ್ಯಕ್ಷ ಸುಂದರ ಖಾರ್ವಿ, ಕಾರ್ಯದರ್ಶಿ ಅರವಿಂದ, ರಾಜು ಹರಿಕಂತ್ರ, ರವೀಶ್ ಖಾರ್ವಿ, ಗಣಪತಿ ಖಾರ್ವಿ, ಪ್ರವೀಣ್ ಖಾರ್ವಿ, ಶಿವರಾಯ ಖಾರ್ವಿ, ಮಾರುತಿ ಖಾರ್ವಿ, ಮಾರುತಿ ಬಾನಾವಳಿಕರ್, ವಿಠ್ಠಲ್ ಕುಡ್ತಲ್ಕರ್ ಮುಂತಾದವರು ಉಪಸ್ಥಿರಿದ್ದರು.