ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿನೋದ್ ಶಾನಬಾಗ ಹಾಗೂ ಕಾರ್ಯದರ್ಶಿಯಾಗಿ ವಸಂತ ನಾಯ್ಕ ಅಧಿಕಾರ ಸ್ವೀಕಾರ

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ: ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ, ಕ್ರೀಯಾಶೀಲ ವ್ಯಕ್ತಿತ್ವದ ನ್ಯಾಯವಾದಿ ವಿನೋದ ಶಾನಬಾಗ ಹಾಗೂ ಕಾರ್ಯದರ್ಶಿಯಾಗಿ ವಸಂತ ನಾಯ್ಕ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ನೇರವೇರಿಸಿದ ರೋಟರಿ ಕ್ಲಬ್‌ನ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ತನ್ನಾ ಮಾತನಾಡಿ ರಾಜ್ಯದಲ್ಲಿಯೆ ಅತ್ಯಂತ ಕ್ರಿಯಾಶೀಲ ರೋಟರಿ ಕ್ಲಭಗಳಲ್ಲಿ ಅಂಕೋಲಾದ ಕ್ಲಭ್ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಈ ನೂತನ ಪದಾಧಿಕಾರಿಗಳಿಂದ ರೋಟರಿ ಕ್ಲಭ್ ಇನ್ನಷ್ಟು ಹೆಮ್ಮೆರವಾಗಿ ಸೇವೆ ನೀಡುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಡಾ. ಅಮಿತ ಕಾಮತ್ ಮಾತನಾಡಿ ಮುಂಬರುವ ದಿನಗಳಲ್ಲಿ ಸರಕಾರ ಹಾಗೂ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪನೆ ಮಾಡಬೇಕು ಹಾಗೂ ಅಗತ್ಯವಿರುವ ರೋಗಿಗಳಿಗೆ ಆರೋಗ್ಯ ವಿಮೆ ನೀಡಬೇಕು ಎಂಬ ಸಲಹೆ ನೀಡಿದರು.

ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ವಿನೋದ ಶ್ಯಾನಬಾಗ್ ಮಾತನಾಡಿ ಹಿಂದೆ ರೋಟರಿ ಕ್ಲಬ್‌ನಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸುತ್ತಾ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಶ್ರಮಿಸಿ ಸಂಸ್ಥೆಯ ಏಳ್ಗೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ನ್ಯಾಯವಾದಿ ಉಮೇಶ್ ನಾಯ್ಕ ಮಾತನಾಡಿ ವಿನೋದ ಶ್ಯಾನಬಾಗ ಅವರು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ನಹಿಸುತ್ತಿದ್ದಾರೆ. ಸೃಜನಶೀಲತೆಯ ಪ್ರತಿಬಿಂಬದAತಿರುವ ವಿನೋದ ಶಾನಭಾಗ ರೋಟರಿ ಸಂಸ್ಥೆಯ ಮೂಲಕ ಸಾಮಾಜಿಕ ಅಭಿವೃಧ್ಧಿಯ ಪ್ರೇಮ ಮೆರೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ವಸಂತರಾವ್ ಮಾತನಾಡಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜ್ಯ ಸರಕಾರದ ಪ್ರಶಸ್ತಿ ಸ್ವೀಕರಿಸಿದ ನಾರಾಯಣ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

 ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಗೀತಾ ನಾಯಕ ಸ್ವಾಗತಿಸಿದರು. ನ್ಯಾಯವಾದಿ ನಾಗಾನಂದ ಬಂಟ ಪ್ರಾರ್ಥಿಸಿದರು. ರೋಟರಿ ಕ್ಲಬ್‌ನ ನಿಕಟಪೂರ್ವ ಕಾರ್ಯದರ್ಶಿ ಸತೀಶ್ ಕುಮಾರ್ ಮಹಾಲೆ ಪ್ರಸಕ್ತ ವರ್ಷದ ಸಾಧನೆಯ ಕುರಿತು ವರದಿ ವಾಚಿಸಿದರು. ಸಂಜಯ್ ಲೋಕಪಾಲ್ ನಿರೂಪಿಸಿದರು. ಕಾರ್ಯದರ್ಶಿ ವಸಂತ ನಾಯಕ ವಂದಿಸಿದರು.

ಡಾ. ಸಂಜು ನಾಯಕ, ಚೇತನ ಶೇಟ್, ಪಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಸುಭಾಷ ನಾರ್ವೇಕರ, ಪದ್ಮನಾಭ ಪ್ರಭು, ಮಂಗಲದಾಸ ಕಾಮತ, ಸಂಜೀವ ನಾಯಕ, ವಿಜಯದೀಪ್ ಪಂಡಿತ್, ಕಾರವಾರ ರೋಟರಿಯನ್ ಡಿಸೋಜಾ ಮಾತನಾಡಿದರು.