ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

ಅಂಕೋಲಾ : ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತ್ರತ್ವವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ ಮಣಿಪುರದ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಬಲತ್ಕಾರ ಮತ್ತು ಬೆತ್ತಲೆ ಮೆರವಣಿಗೆ ಮಾಡಿದ್ದು ಭಾರತದ ಸಮಸ್ತ ಪ್ರಶ್ನೆಗಳು ತಲೆತಗ್ಗಿಸುವಂತೆ ಮಾಡಿದೆ.

ಭಾರತ ದೇಶದಲ್ಲಿ ಮಹಿಳೆಯರನ್ನು ದೇವತೆ ಎಂದು ಸೂಚಿಸುವ ಸಂಸ್ಕೃತಿ ನಮ್ಮದು ಅಂತಹ ದೇವತೆಯರನ್ನು ಕೀಳು ಮಟ್ಟದಲ್ಲಿ ನಡೆಸಿಕೊಂಡಿರುವುದು ನಮಗೆ ಅಸಹ್ಯವೆನಿಸುತ್ತದೆ. ಇದನ್ನು ಭಾರತ ದೇಶದ ಸಮಗ್ರ ಸ್ತ್ರೀಯರು ತಲೆತಗ್ಗಿಸುವಂತೆ ಮಾಡಿದೆ. ಹೆಣ್ಣಿಗೆ ಉತ್ತಮ ಸ್ಥಾನಮಾನ ನೀಡಿದ ನಮ್ಮ ಭಾರತ ದೇಶದಲ್ಲಿ ಯಾವುದೇ ಮೂಲೆಯಲ್ಲಿ ಆದರೂ ಸಹ ಇಂತಹ ನೀಚ ಕೃತ್ಯ ಎಸೆಗಿದ ದುಷ್ಕರ್ಮಿಗಳಿಗೆ ನಿರ್ದಾಕ್ಷಿಣ್ಯವಾಗಿ ಗಲುಶಿಕ್ಷೆ ವಿಧಿಸುವಂತಾಗಬೇಕು.

ಪ್ರಧಾನಿ ನರೇಂದ್ರ ಮೋದಿಯವರು ಇಷ್ಟು ದೀರ್ಘ ಸಮಯದವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ, ತಟಸ್ಥ ಧೋರಣೆ ತಳೆದಿರುವುದು ಖಂಡನಾರ್ಹ. ಹಿನ್ಲೆಯಲ್ಲಿ ಮೋದಿಯವರು ನೈತಿಕ ಹೊಣೆ ಹೊತ್ತು ಕೂಡಲೆ ರಾಜಿನಾಮೆ ನೀಡಿ ಸಂಸತ್ತನ್ನು ವಿರ್ಸಜಿಸಬೇಕೆಂದು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರ0ಗ ಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಲೀಲಾವತಿ ನಾಯ್ಕ, ವಿನೋದ ಬಾಸ್ಗೋಡ, ಮಂಜುಳಾ ವೆರ್ಣೆಕರ ಶಾಂತಿ ಆಗೇರ, ಉದಯ ವಾಮನ ನಾಯಕ, ಜಿ.ಎಮ್.ಶೆಟ್ಟಿ, ತಾಪಂನ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ, ಪುರಸಭೆಯ ಸದಸ್ಯೆ ನಿರ್ಮಲಾ ಹುಲಸ್ವಾರ, ಸುರೇಶ ನಾಯ್ಕ ಅಸ್ಲಗದ್ದೆ, ರಾಜೇಶ ಮಿತ್ರಾ ನಾಯ್ಕ, ದಾಮೋದರ ನಾಯ್ಕ, ನಾರಾಯಣ ನಾಯಕ. ಸೂರ್ವೆ, ಪುಟ್ಟು ಬೊಮ್ಮಿಗುಡಿ, ಯುವ ಪ್ರಮುಖ ಮಂಜುನಾಥ ನಾಯ್ಕ, ಚಟ್ನಿ,ನಾಗೇಂದ್ರ ನಾಯ್ಕ. ಬೇಳಾ, ಯುಥ್ ಕಾಂಗ್ರೆಸ್ ಅಧ್ಯಕ್ಷ ಜೀವನ ನಾಯಕ, ಸರಸ್ವತಿ ಗುನಗಾ, ಯಲ್ಲಮ್ಮಾ ಕದ್ರಾ, ಮುಷರತ ಯಲ್ಲಾಪುರ, ಜಾನವಿ ಸಿದ್ದಿ, ಮಂಜುಳಾ ಪಡ್ನೇಕರ. ಡೊಂಗ್ರಿ.ಸವಿತಾ ಜಲ್ಮಟ, ಜೀವಿತಾ ವಿನೋದ ಗಾಂವಕರ, ಶೋಬಾ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.