ಇಲಾಖೆಯ ಗೌರವ ಹೆಚ್ಚಿಸಿದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಚೈತನ್ಯ

ಅಂಕೋಲಾ : ಇಲ್ಲಿನ ಸಾರಿಗೆ ಘಟಕದಲ್ಲಿ ಸಹಾಯಕ ಸಂಚಾರಿ ನೀರಿಕ್ಷಕನಾಗಿ ಕಾರ್ಯನಿರ್ವಹಿಸಿದ ಅಶೋಕ ನಾಯ್ಕ ಮತ್ತು ಸಂಚಾರಿ ನಿಯಂತ್ರಣ ಅಧಿಕಾರಿ ಮಂಜುನಾಥ ಮುಕ್ರಿ ಹಾಗೂ ನಿರ್ವಾಹಕ ಬಿ.ಎಸ್. ಫರ್ನಾಂಡಿಸ್ ಅವರು ಸೇವಾ ನಿವೃತ್ತರಾದ ಹಿನ್ನಲೆಯಲ್ಲಿ ಅವರನ್ನು ಸಾರಿಗೆ ಘಟಕದಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.

 ಅಂಕೋಲಾ ಸಾರಿಗೆ ಘಟಕದ ಘಟಕಾಧಿಕಾರಿ ಚೈತನ್ಯ ಅಗಳಗಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಸರಕಾರಿ ಕರ್ತವ್ಯ ಎನ್ನುವದು ಕೇವಲ ಇಲಾಖೆಯ ಸೇವೆಯ ಪರಿಮಿತಿಯಲ್ಲೆ ಅಷ್ಟೆ ಕಾರ್ಯನಿರ್ವಹಿಸದೆ, ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ಹಾಗೂ ಸಾಮಾಜಿಕ ಕಳಕಳಿ ಅತ್ಯಗತ್ಯ ನಿಟ್ಟಿನಲ್ಲಿ ಮೂವರು ಸಿಬ್ಬಂದಿಗಳು ಇಲಾಖೆಯ ಗೌರವವನ್ನು ಹೆಚ್ಚಿಸುವಲ್ಲಿ ಕಾರಣೀಕರ್ತರಾಗಿರುವದು ಹರ್ಷ ತಂದಿದೆ ಎಂದರು.

ನಿವೃತ್ತ ವಿಭಾಗೀಯ ಸಂಚಾರ ಅಧಿಕಾರಿ ಸುರೇಶ ನಾಯ್ಕ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಇಲಾಖೆಯ ಸೇವೆಯನ್ನು ಪೂರ್ತಿಗೊಳಿಸಿರುವ ಮೂವರು ಸಿಬ್ಬಂದಿಗಳು ಅಭಿನಂದನಾರ್ಹರು ಎಂದರು.

 ಎಟಿಎಸ್ ಶಿವಾನಂದ ನಾಯ್ಕ, ಕೆ.ಎಸ್.ಆರ್.ಟಿ.ಸಿಯ ಸ್ಟಾಪ್ ಎಂಡ್ ವಕರ‍್ಸ್ ಫೆಡರೆಷನನ ಉಪಾಧ್ಯಕ್ಷ ಪಿ.ಎಸ್. ನಾಯ್ಕ, ವಿಭಾಗೀಯ ಅಧ್ಯಕ್ಷ ನಾರಾಯಣ ಶೆಟ್ಟಿ, ಕೇಂದ್ರ ಕಚೇರಿಯ ನಿವೃತ್ತ ಅಧಿಕಾರಿ ಗೋಪಾಲ ನಾಯಕ, ಯೂನಿಯನ್‌ನ ತಾಲೂಕಾಧ್ಯಕ್ಷ ಪ್ರೇಮಾನಂದ ಟಿ. ನಾಯ್ಕ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಅಧ್ಯಕ್ಷ ಅರುಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ನಿರ್ವಾಹಕ ಸುರೇಶ ಗುಬ್ಬಿವಾಡಾ, ನಿವೃತ್ತ ನಿರ್ವಾಹಕ ಸುಭಾಷ ನಾಯಕ, ಕಾರವಾರ ಘಟಕದ ಸಂಚಾರ ನಿಯಂತ್ರಕ .ವಿ. ನಾಯ್ಕ, ವಿಭಾಗೀಯ ಕಾರ್ಯಾಗಾರ ಹೆಬ್ಬಾಳ, ವಿಭಾಗೀಯ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ನಾಯ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 ಸನ್ಮಾನ ಸಮಿತಿಯ ಅಧ್ಯಕ್ಷ ಉದಯ ಡಿ. ನಾಯ್ಕ, ಕಾರ್ಯದರ್ಶಿ ನಾಗರಾಜ್ ನಾಯ್ಕ, ಸದಸ್ಯರಾದ ಜಾನಪ್ಪ ಗೌಡ, ಉಪಸ್ಥಿತರಿದ್ದರು. ಯೂನಿಯನ್‌ನ ಕಾರ್ಯದರ್ಶಿ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ಸಿಬ್ಬಂದಿ ಎಸ್. ಆರ್. ಬಂಟ ವಂದಿಸಿದರು.