ಅಂಕೋಲಾ ; ಮಟ್ಕಾ (ಓಸಿ) ಬರೆಯುತ್ತಿದ್ದ ವೇಳೆ ದಾಳಿ ನಡೆಸಿದ ಅಂಕೋಲಾ ಪೊಲೀಸರು ಮಟ್ಕಾ ಬರೆಯುತ್ತಿದ್ದ ಆರೋಪದ ಮೇಲೆ ವಾಸರಕುದ್ರಿಗೆಯ ರಾಜಾರಾಮ ರಾಮಚಂದ್ರ ನಾಯಕ ಹಾಗೂ ಮಟ್ಕಾ ಬುಕ್ಕಿ ಶಿರೂರಿನ ಮಹಾಬಲೇಶ್ವರ ನಾಯ್ಕ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಲೂಕು ಕೇಂದ್ರದಿAದ 10 ಕೀಮಿ ಅಂತರದಲ್ಲಿರುವ ಕೊಡ್ಸಣಿ ಕ್ರಾಸ್ನಲ್ಲಿ ರಾಜಾರಾಮ ರಾಮಚಂದ್ರ ನಾಯಕ ಅವರು ಓಸಿ (ಮಟ್ಕಾ) ಬರೆಯುತ್ತಿದ್ದ ವೇಳೆ ಪಿಎಸೈ ಪ್ರವೀಣಕುಮಾರ ದಾಳಿ ನಡೆಸಿದಾಗ ಮಟ್ಕಾ ಬರೆದ ಚೀಟಿ ಸಹಿತ, 1230 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಟ್ಕಾ ಬುಕ್ಕಿ ನಾಪತ್ತೆ :
ರಾಜಾರಾಮಾ ರಾಮಚಂದ್ರ ನಾಯಕ ಬರೆದ ಮಟ್ಕಾ ಚೀಟಿಯನ್ನು ಶಿರೂರಿನ ಮಹಾಬಲೇಶ್ವರ ನಾಯ್ಕ ಅವರಿಗೆ ನೀಡುತ್ತಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ದೃಡಪಟ್ಟ ಹಿನ್ನಲೆಯಲ್ಲಿ ಮಹಾಬಲೇಶ್ವರ ನಾಯ್ಕ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಾಬಲೇಶ್ವರ ನಾಯ್ಕ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾದಿಗಳ ಕಪಿಮುಷ್ಠಿಯಲ್ಲಿ ಅವ್ಯಾಹುತವಾಗಿ ಸಾಗಿ ಬಂದಿದ್ದ ಮಟ್ಕಾ (ಓಸಿ) ಯನ್ನು ಸಂಪೂರ್ಣವಾಗಿ ನಿಷೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಇದರ ಫಲವಾಗಿಯೇ ಸಿಪಿಐ ಸಂತೋಷ ಶೆಟ್ಟಿ ನೇತ್ರತ್ವದಲ್ಲಿ ಪಿಎಸೈ ಪ್ರವೀಣಕುಮಾರ ಹಾಗೂ ಮಹಾಂತೇಶ ಅವರು ಮಟ್ಕಾ ದಂಧೆಗೆ ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸುತ್ತಿದ್ದು ಮಟ್ಕಾ ಬುಕ್ಕಿಗಳಲ್ಲಿ ನಡುಕ ಹುಟ್ಟಿಸಿದಂತಾಗಿದೆ.
ಈ ಹಿಂದೆ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಮಟ್ಕಾ ದಂಧೆಗೆ ಸಾಥ್ ನೀಡಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಬಂದ ಕಾಂಚಾಣವನ್ನು ಕಿರಿಯ ಅಧಿಕಾರಿಗಳು ತಮ್ಮ ಜೇಬಿಗೆ ತುಂಬಿಸಿಕೊಳ್ಳುತ್ತಿರುವ ವರ್ತಮಾನ ಜಿಲ್ಲೆಯಲ್ಲಿಯೆ ಕಂಡು ಬಂದಿತ್ತು.
ಆದರೆ ಎಸ್ಪಿಯಾಗಿ ಸುಮನ್ ಪೆನ್ನೆಕರ ಉಕ ಜಿಲ್ಲೆಗೆ ಆಗಮಿಸಿದ ಮೇಲೆ ಹಿರಿಯ ಅಧಿಕಾರಗಳ ಹೆಸರನ್ನು ಬಳಸಿಕೊಂಡು ನಡೆಸುತ್ತಿದ್ದ ಕರಾಳ ದಂಧೆಗೆ ಪುಲ್ಸಾ÷್ಟಪ್ ಹಾಕಿದ್ದಾರೆ. ಹಾಗೆ ಯಾವುದೇ ಖಾದಿಗಳ ಒತ್ತಡಕ್ಕೆ ಖಾಕಿಗಳು ಮಣಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಎಸ್ಪಿ ಸುಮನ್ ಪೆನ್ನೆಕರ, ಯಾವುದೇ ಒತ್ತಡಕ್ಕೆ ಮಣಿಯದೆ ನಿಭೀತಿಯಿಂದ ಕಾರ್ಯ ನಿರ್ವಹಿಸಿ, ನಿಮ್ಮ ಜೊತೆ ನಾನೀದ್ದೇನೆ ಎಂದು ಹೇಳಿರುವುದು ಪೊಲೀಸ್ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
