ಅಂಕೋಲಾ : ಪಟ್ಟಣದ ಪೊಸ್ಟ್ ಆಪೀಸ್ ಎದುರಿನ ಜೈಹಿಂದ್ ಆಟೋರಿಕ್ಷಾ ಮಾಲಕ ಮತ್ತು ಚಾಲಕರ ಸಂಘದ ವತಿಯಿಂದ 77 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಒಂದು ಸಾವಿರ ಶಾಲಾ ವಿದ್ಯಾಥಿಗಳಿಗೆ ಪೆನ್ನುಗಳನ್ನು ಹಾಗೂ ಸಿಹಿ ತಿಂಡಿಗಳನ್ನ ನೀಡುವುದರ ಮೂಲಕ ಜೈಹಿಂದ್ ಆಟೋರಿಕ್ಷಾ ಮಾಲಕ ಮತ್ತು ಚಾಲಕರ ಸಂಘ ಮಾದರಿಯಾಗಿ ಕಾರ್ಯಕ್ರಮವನ್ನು ಸಂಘಟಿಸಿತ್ತು. ಸಾರ್ವಜನಿಕರು ಸಹ ಸಿಹಿಯನ್ನು ವಿತರಿಸಲಾಯಿತು.

ಜೈಹಿಂದ್ ಆಟೋರಿಕ್ಷಾ ಮಾಲಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಸಂಜೀವ ಬಲೇಗಾರ, ಉಪಾಧ್ಯಕ್ಷ ಸಚೀನ್ ಅಶೋಕ ನಾಯ್ಕ, ಕಾರ್ಯದರ್ಶಿ ದೀಪಕ ವಾಸುದೇವ ನಾಯ್ಕ, ಖಜಾಂಚಿ ಮಹೇಶ ಹುಲಸ್ವಾರ, ಸಹ ಕಾರ್ಯದರ್ಶಿ ಸಂಜೀವ ದೇವಪ್ಪಾ ನಾಯ್ಕ ಸೇರಿದಂತೆ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದು ದೇಶಾಭಿಮಾನಕ್ಕೆ ಸಾಕ್ಷಿಯಾದರು.