ತಂಬಾಕು ಮಾರಾಟದ ಅಂಗಡಿಗಳ ಮೇಲೆ ನಿಯಂತ್ರಣ ತನಿಖಾ ದಳದಿಂದ ದಾಳಿ

ತಾಲೂಕಾ ಆರೋಗ್ಯಾಧಿಕಾರಿ ಜಗಧೀಶ ನಾಯ್ಕ ನೇತ್ರತ್ವದಲ್ಲಿ ನಡೆದ ದಾಳಿ

ಅಂಕೋಲಾ : ತಾಲೂಕಿನಲ್ಲಿ ಕೋಟ್ಟಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಪಟ್ಟಣದ ಮುಂತಾದ ಕಡೆಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ 3700 ದಂಡ ವಸೂತಿ ಮಾಡಿದ್ದಾರೆ.

ಪಟ್ಟಣದ ವಿವಿಧ ತಂಬಾಕು ಮಾರಾಟಡದ ಅಂಗಡಿಗಳ ಮೇಲೆ ನಡೆಸಿ, ಅವರಲ್ಲಿ ಜಾಗೃತಿಯನ್ನು ಮೂಡಿಸಿ ಇನ್ನು ಮುಂದೆ ತಂಬಾಕು ಮಾರಾಟ ಮಾಡದಂತೆ ತಿಳುವಳಿಕೆ ನೀಡಲಾಯಿತು.

ತಾಲೂಕಾ ಆರೋಗ್ಯಾಧಿಕಾರಿ ಜಗಧೀಶ ನಾಯ್ಕ ನೇತ್ರತ್ವದಲ್ಲಿ ನಡೆದ ದಾಳಿಯಲ್ಲಿ ಗ್ರೇಡ್ 2 ತಹಸೀಲ್ದಾರ ಗಿರೀಶ ಜಾಂಬಾವಳಿಕರ, ಕಂದಾಯ ನೀರಿಕ್ಷಕ ಜನ್ನು, ಗ್ರಾಮ ಲೆಕ್ಕಾಧಿಕಾರಿ ಭಾರ್ಗವ ನಾಯಕ, ತಾಲೂಕಾ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಇಂದಿರಾ ನಾಯ್ಕ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ್ ನಾಯ್ಕ, ಪುರಸಭೆಯ ಸಿಬ್ಬಂದಿ ಅರುಣ ಮಾಜಳಿಕರ, ಸಿಡಿಪಿಓ ಸವಿತಾ ಜೋಷಿ, ಪೊಲೀಸ್ ಇಲಾಖೆಯ ಎಸೈ ತಿಮ್ಮಪ್ಪ ಸೇರಿದಂತೆ ತಾಲೂಕ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.