ವರದಿ: ದಿನಕರ ನಾಯ್ಕ ಅಲಗೇರಿ
ಅಂಕೋಲಾ : ಹಟ್ಟಿಕೇರಿಯ ಸೀಬರ್ಡ್ ಯೋಜನಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ವಿಷದ ಹಾವು ಕಡಿದು, ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.
ಖ್ಯಾತ್ ಹಾಸ್ಯ ಕಲಾವಿದ, ಅಲಗೇರಿಯ ಮಂಜುನಾಥ ಶಂಕರ ನಾಯ್ಕ ಹಾವು ಕಡಿತಕ್ಕೊಳಗಾಗಿದ್ದು, ಅಂಕೋಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಿದ್ದೇನು..?
ಅಲಗೇರಿ ಮಂಜು ಎಂದರೆ ನಾಟಕ ಹಾಸ್ಯ ಪಾತ್ರದಲ್ಲಿ ಎತ್ತಿದ ಕೈ. ತನ್ನದೆ ಆದ ಸ್ನೇಹಿತರ ಬಳಗವನ್ನು ಹೊಂದಿರುವ ಮಂಜು ಅವರಿಗೆ ತನ್ನ ಆದ ಅಭಿಮಾನಿಗಳ ಬಳಗವು ಇದೆ. ನಾಟಕದಲ್ಲಿ ಹಾಸ್ಯ ಪಾತ್ರವನ್ನು ಪ್ರವೃತ್ತಿಯನ್ನಾಗಿಸಿಕೊಂಡ ಮಂಜು ಅನೇಕ ವರ್ಷಗಳಲ್ಲಿ ನಾಟಕ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಹಟ್ಟಿಕೇರಿಯ ನೆವಲ ಬೇಸ್‌ನಲ್ಲಿ ಗುತ್ತಿಗೆ ಸಿಬ್ಬಂದಿಯಾಗಿ ಉತ್ತಮ ಕರ್ತವ್ಯದ ಮೂಲಕ ಗುರುತಿಸಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಕೆಲಸ ಮಾಡುತ್ತಿದ್ದಾಗ ವಿಷದ ಹಾವು ಕಡಿದಿದೆ. ಕೂಡಲೆ ಅಂಕೋಲಾದ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಕೂಡಲೆ ಡಾ. ರಮೇಶ ಅವರು ಚಿಕಿತ್ಸೆ ನೀಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗುವದೆಂದು ತಿಳಿಸಿದ್ದಾರೆ.

