ಅಂಕೋಲಾ : ತಾಲೂಕಿನಲ್ಲಿ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕಳುವು ಮಾಡಿದ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮಂಗಳೂರಿನ ಕುಳೂರು ಬೆಂಗ್ರೆಯ ಮಹ್ಮದ ಸಲ್ಮಾನ್ ಗೌಸ್, (23) ಉದ್ಯೋಗ-ಡಿ.ಜೆ ಆಪರೇಟರ್, ಹಾಗೂ ಕಾರವಾರದ ಕೋಡಿಬಾಗದ ಕಾಳಿ ರಿವರ್ ಗಾರ್ಡನ ಹತ್ತಿರದ ನಿವಾಸಿ ರೋಹಿತ ಆನಂದ ಹರಿಜನ್ (21) ಬಂಧಿತ ಆರೋಪಿಗಳು.

ಪ್ರಕರಣವೇನು..?
ಅಂಕೋಲಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 15 ಬೆಳಿಗ್ಗೆ 09-00 ಗಂಟೆಯಿ0ದ ಮದ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ ಬೊಬ್ರವಾಡಾ ಗಣಪತಿ ತಂದೆ ಶಿವು ನಾಯ್ಕ ಅವರು ನಗರದ ಬಸ್ ನಿಲ್ದಾಣದ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟ ಹಿರೋ ಸ್ಲೆಂಡರ್ ಪ್ಲಸ್ ಯಾರೋ ಕಳ್ಳರು ಕದ್ದು ಕೊಂಡ ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನೆತ್ತಿದ್ದ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯ ವೇಳೆ ಮಹ್ಮದ ಸಲ್ಮಾನ್ ಇತನು ತಾನು ಉಡುಪಿಯ ಬೈಂದೂರಿನ ರಂಜಿತ ಪೂಜಾರಿ ಇತನೊಂದಿಗೆ ಸೇರಿ ಅಂಕೋಲಾದ ವಂದಿಗೆ ರಾಷ್ಟಿçÃಯ ಹೆದ್ದಾರಿಯ ಬದಿಯಲ್ಲಿ ಅಂಗಡಿ ಮುಂದೆ ನಿಲ್ಲಿಸಿಟ್ಟ ಒಂದು ಮೋಟಾರ ಸೈಕಲ್ನ್ನು ಕಳ್ಳತನ ಮಾಡಿದ್ದಾಗಿ ಹಾಗೂ ಮಹ್ಮದ ಸಲ್ಮಾನ್ ಮತ್ತು ರೋಹಿತ ಹರಿಜನ್ ಇಬ್ಬರೂ ಸೇರಿ ಹಿರೇಗುತ್ತಿಯಲ್ಲಿ ಒಂದು ಮನೆ ಕಳ್ಳತನ, ಅಂಕೋಲಾದ ಬಸ್ಸ್ ನಿಲ್ದಾಣದ ಎದುರು ನಿಲ್ಲಿಸಿಟ್ಟ ಹಿರೋ ಹೊಂಡಾ ಸ್ಪೆ÷್ಲಂಡರ್ ಪ್ಲಸ್ ಮೋಟಾರ ಸೈಕಲ್ ಕಳ್ಳತನ, ಕಾರವಾರದಲ್ಲಿ ಕೋಡಿಬಾಗ ನದಿವಾಡದಲ್ಲಿ ಒಂದು ಮೋಟಾರ ಸೈಕಲ್ ಕಳ್ಳತನ ನಡೆಸಿದ್ದಾರೆ ಎಂದು ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾರೆ. ಅಂಕೋಲಾ ಹಾಗೂ ಕಾರವಾರದಲ್ಲಿ ಕಳ್ಳತನವಾದ ಎರಡು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತರು ಅಂಕೋಲಾ ತಾಲೂಕಿನ ಪುರಲಕ್ಕಿಬೇಣದದಲ್ಲಿ ಒಂದು ಮನೆ, ಹಾಗೂ ವಂದಿಗೆಯಲ್ಲಿ ಒಂದು ಮನೆಯನ್ನು ತೋರಿಸಿ, ಸದರಿ ಮನೆಯಲ್ಲಿ ನಿಲ್ಲಿಸಿಟ್ಟ ನಿಲ್ಲಿಸಿಟ್ಟ ಬೈಕ್ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ಹಾಗೂ ವಂದಿಗೆಯಲ್ಲಿ ಒಂದು ಮನೆ, ಜಮಗೋಡದಲ್ಲಿ ಒಂದು ಮನೆ ಹಾಗೂ ಶೆಟಗೇರಿಯಲ್ಲಿ ಒಂದು ಮನೆಗಳನ್ನು ತೋರಿಸಿ ಸದರಿ ಮನೆಗಳ ಕಳ್ಳತನ ಮಾಡಿರುವದನ್ನ ಒಪ್ಪಿಕೊಂಡಿರುತ್ತಾರೆ ಎಂದು ಸಿಪಿಐ ಸಂತೋಷ ಶೆಟ್ಟಿ ತಿಳಿಸಿದ್ದಾರೆ.
ಉಕ ಪೊಲೀಸ ವರಿಷ್ಠಾಧಿಕಾರಿ ವಿಷ್ಣುವರ್ಧನ ಎನ್. ಅವರ ನಿರ್ದೇಶನದದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾರವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದದಲ್ಲಿ ಪಿಸೈಗಳಾದ ಉದ್ದಪ್ಪ ಧರೆಪ್ಪನವರ, ಜಯಶ್ರೀ ಪ್ರಭಾಕರ ಸಿಬ್ಬಂದಿಗಳಾದ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ, ಮನೋಜ. ಡಿ., ಆಸಿಫ್ ಕುಂಕೂರು, ಜಗದೀಶ ನಾಯ್ಕ, ಕಿರಣ ನಾಯ್ಕ, ಗುರುರಾಜ ನಾಯ್ಕ ಹಾಗೂ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ ಮತ್ತು ರಮೇಶ ಕಾರ್ಯಾಚರಣೆಯಲ್ಲಿದ್ದರು.
ಅಂಕೋಲಾ ಪೊಲೀಸ್‌ರ ಕಾರ್ಯಾಚರಣೆಗೆ ಪೊಲೀಸ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ. ಟಿ. ಜಯಕುಮಾರ ಅವರು ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.


