ಅಂಕೋಲಾ : ನಮ್ಮ ಪವಿತ್ರ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಾಲಾಯಕ್ ಎಲಿಸ್ ಎಕಲ್‌ಪಾಟಿ ಎನ್ನುವ ವ್ಯಕ್ತಿ ಕ್ರಿಶ್ಚಿಯನ್ ಧರ್ಮದ ಪ್ರಚಾರಕ ಕೋಮುವಾದಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ ಆತನನ್ನು ಗಡಿಪಾರು ಮಾಡಬೇಕು ಎಂದು ಪಟ್ಟಣದ ಜೈಹಿಂದ ಸರ್ಕಲನಲ್ಲಿ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಘಟನೆಯ ಪ್ರಮುಖ ಸುಂದರ ಖಾರ್ವಿ ನಾವು ಸೌಹಾರ್ದತೆಯಿಂದ ಬದುಕುತಿದ್ದೇವೆ, ಕೆಲವೊಂದು ಕ್ರಿಶ್ಚಿಯನ್ ಧರ್ಮದವರು ನಮ್ಮ ಹಿಂದೂ ಧರ್ಮದ ಜನರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುವಂತ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಇದರ ಬಗ್ಗೆ ತಾವು ಹಾಗೂ ನಮ್ಮ ಪೊಲೀಸ್ ಇಲಾಖೆ ಸ್ವಲ್ಪ ಗಮನಹರಿಸಬೇಕು.
ಎಲಿಸ್ ಎಕಲಪಾಟಿ ಎನ್ನವ ಕೋಮುವಾದಿಗಳು ವ್ಯಕ್ತಿಗಳಿಂದ ನಮ್ಮ ಜಿಲ್ಲೆಯ ಹೆಸರು ಕೂಡ ಹಾಳಾಗುತ್ತಲಿದೆ. ಹಿಗಾಗಿ ಆ ಕೋಮುವಾದಿಯನ್ನು ನಮ್ಮ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಹಿಂದೂ ಭಜರಂಗ್ ದಳದ ವತಿಯಿಂದ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಭಜರಂಗದಳದ ಸಂಚಾಲಕ ಕಿರಣ ನಾಯ್ಕ, ಗಣಿ ನಾಯ್ಕ, ನಿತ್ಯಾನಂದ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜೈ ಹಿಂದ ವೃತ್ತದಲ್ಲಿ ಎಲಿಸ್ ಏಕಲಪಾಟಿಯ ಭಾವ ಚಿತ್ರಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ. ಚಪ್ಪಲಿಯ ಸೇವೆ ಮಾಡಿದರು.
ಪಿಎಸೈ ಗಳಾದ ಸುನಿಲ್ ಸುಳ್ಳೊಳ್ಳಿ, ಸುಹಾಸ್ ಆರ್ ಮತ್ತು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ ಒದಗಿಸಿದರು. ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಅಶೋಕ ಭಟ ರವರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

