ದಿನಕರ ನಾಯ್ಕ. ಅಲಗೇರಿ
ಅಂಕೋಲಾ : ರಾತ್ರಿಯ ವೇಳೆ ಅರೆ ಬೆತ್ತಲಾಗಿ ತಿರುಗಿ, ಆತಂಕ ಹುಟ್ಟಿಸಿದ್ದ ಯುವಕನನ್ನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬೊಳೆ ಜಮಗೋಡದಲ್ಲಿ ನಡೆದಿದೆ.
ಅಂಕೋಲಾದ ರೇಲ್ವೆ ನಿಲ್ದಾಣದ ಬಳಿಯ ಪ್ರದೇಶದಲ್ಲಿ ಅರೆ ಬೆತ್ತಲಾಗಿ ಓಡಾಡುತ್ತಿರುವ ಯುವಕನನ್ನ ಗ್ರಾಮಸ್ಥರು ಕಂಡು ಭಯಭೀತರಾಗಿದ್ದಾರೆ. ಇದನ್ನು ಗಮನಿಸಿದ ಬೀರಣ್ಣ ನಾಯಕ ಅವರು ಆತನನ್ನು ಹಿಡಿದು ನಿಲ್ಲಿಸಿ, 112 ಗೆ ಪೋನ್ ಮಾಡಿ ಇತನ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ 112 ಪೊಲೀಸ್ ಸಿಬ್ಬಂದಿಗಳು ಇತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನು ಮುದಗಾದಲ್ಲಿ ಬೋಟ್‌ಲ್ಲಿ ಕೆಲಸಕ್ಕಿದ್ದೇನೆ. ಬೋಟ್‌ನ ಮಾಲಕ ಸಂಬಳವನ್ನ ಸರಿಯಾಗಿ ಕೊಡದೆ ಇರದೆ ಇರೋದರಿಮದ ಆತನೊಂದಿಗೆ ಜಗಲ ಮಾಡಿಕೊಂಡು ಬಂದಿದ್ದೇನೆ. ತನ್ನ ಹತ್ತಿರ ಹಣ ಇಲ್ಲದೆ ಇರುವದರಿಂದ ತನ್ನೂರಾದ ಓರಿಸ್ಸಾಕ್ಕೆ ಕಾಲ್ನಡಿಗೆಯಲ್ಲೆ ಸಾಗುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.
ಪೊಲೀಸರು ಆತನ ಹೇಳಿಕೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

