ಅಂಕೋಲಾ : ತಾಲೂಕಿನ ನಾಮಾಂಕಿತ ಹಾಗೂ ಪ್ರತಿಷ್ಠಿತ ದಿನಕರ ವೇದಿಕೆಯ ವತಿಯಿಂದ ಅಕ್ಷರ ಬ್ರಹ್ಮ ದಿನಕರ ದೇಸಾಯಿ ಅವರ ಜನ್ಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡಿದ ವಿಠ್ಠಲ ಗಾಂವಕರ ದಿನಕರ ದೇಸಾಯಿಯವರು ಶಾಲಾ ಕಾಲೇಜುಗಳನ್ನು ಹುಟ್ಟು ಹಾಕದ್ದಿದ್ದರೆ ನಮ್ಮಂತವರಿಗೆ ಇವತ್ತು ಸಮಾಜದಲ್ಲಿ ಉದ್ಯೋಗ ಮತ್ತು ಗೌರವ ಸಿಗುತ್ತಿರಲಿಲ್ಲ. ನಾನು ಇವತ್ತು ಒಬ್ಬ ಸಾಹಿತಿ ಆಗಿದ್ದೇನೆ ಎಂದರೆ ಅದಕ್ಕೆ ಕಾರಣ ನನಗೆ ಕಲಿಸಿದ ಗುರುಗಳಾದ ದಿ. ರಾಜಗೋಪಾಲಾಚಾರಿ (ಶಾಸ್ತ್ರೀ ಮಾಸ್ತರ) ಮತ್ತು ಅಂದಿನ ಗುರುಗಳು ಕಾರಣ ಎಂದರು. ದಿನಕರ ವೇದಿಕೆಯು ಅತ್ಯಂತ ಶಿಸ್ತಿನ ಸಂಘಟನೆಯಾಗಿದ್ದು, ವೇದಿಕೆಯು ಹೆಮ್ಮರವಾಗಿ ಬೆಳೆಯಲಿ ಎಂದರು ಹಾರೈಸಿದರು.
ಇದೇ ಸಂದರ್ಭದಲ್ಲಿ ತಾವು ಬರೆದು ಪ್ರಕಟಿಸಿದ ನಮ್ಮ ದಿನಕರ ದೇಸಾಯಿ ಕೃತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಸಭಿಕರಿಗೆ ವಿತರಿಸಿದರು.
ವೇದಿಕೆಯ ಸದಸ್ಯರು ಹಾಗೂ ಸಾಹಿತಿಗಳಾದ ಸಾತು ಗೌಡ ಅವರು ಹಾಲಕ್ಕಿ ಒಕ್ಕಲಿಗರ ಮೇಲೆ ರಚಿಸಿದ ಚುಟುಕುಗಳನ್ನು ವಾಚಿಸಿ ಎಲ್ಲರ ಮೆಚ್ಚುಗೆ ಪಡೆದರು.
ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ ದಿನಕರ ದೇಸಾಯಿಯವರು ಕಟ್ಟಿದ ಶಿಕ್ಷಣ ಸಂಸ್ಥೆಗಳು ಸಾವಿರಾರು ಜನರು ಬಾಳಿಗೆ ಬೆಳಕನ್ನು ನೀಡಿದಷ್ಟೇ ಅಲ್ಲ ಸರಕಾರ ಇಂದು ಜಾರಿ ತರುತ್ತಿರುವ ಬಹುತೇಕ ಜನಪರ ಯೋಜನೆಗಳನ್ನು, ಅಂದೇ ತಮ್ಮ ಸೇವಾ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ವೇದಿಕೆಯ ಕೋಶಾಧ್ಯಕ್ಷ ಸಂತೋಷ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಸಿಂಗ ರಾಠೋಡ ವಂದಿಸಿದರು*.
ಕಾರ್ಯಕ್ರಮದಲ್ಲಿ ಅಬ್ದುಲ್ ಕರೀಂ ಶೇಖ್ ಕಮಲಾಕರ ಬೋರಕರ ಎಂ.ಎಚ್.ಗೌಡ, ನಾಗಾನಂದ ಬಂಟ, ಖೇಮು ಎಂ ನಾಯ್ಕ, ರಮಾನಂದ ನಾಯಕ, ಶ್ರೀಧರ ನಾಯ್ಕ, ಗಣಪತಿ ಟಿ. ನಾಯಕ, ರಫೀಕ್ ಶೇಖ್, ಶ್ರೀಮತಿ ಶೀಲಾ ಬಂಟ, ಡಾ. ಅರ್ಚನಾ ನಾಯಕ, ಬಿ.ಎಲ್.ಸಂಜೀವ ರಾವ್, ಮಂಜುಳಾ ಬಂಟ, ವಿಕ್ರಾಂತ ಕೇಣಿ, ಗಿರೀಶ್ ಶೆಟ್ಟಿ, ವಿದ್ಯಾರ್ಥಿಗಳಾದ ಸುಜನ ಕೇಣಿ, ಕಿಶನ್ ಕೇಣಿಕರ, ನಿಹಾಲ ಬಂಟ, ಸುಜನ ಶೆಟ್ಟಿ ನಿಖಿಲ್ ಪೌಜುದಾರ್,ನವೇಶ ಕಾಂಬಳೆ, ಭುವನ ಚೋಡಣಕರ, ವಿಶ್ರುತ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.