ರಾಘು ಕಾಕರಮಠ.

ಅಂಕೋಲಾ : ಉಕ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಗೌರವ ಸಮಾದೇಷ್ಟರಾಗಿ ಡಾ. ಸಂಜು ಟಿ. ನಾಯಕ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ ಅವರು ಅಧಿಕೃತವಾಗಿ ಬುಧವಾರದಂದು ತಮ್ಮ ಕಛೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ಕ್ರೀಯಾಶೀಲ ವ್ಯಕ್ತಿತ್ವದ ಡಾ. ಸಂಜು ಟಿ. ನಾಯಕ ಅವರು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ರಂಗ0ಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡು ಜನಪ್ರೀಯತೆಗೆ ಕಾರಣರಾದವರು.

ಶಾಂತಿನಿಕೇತನ ದಂತ ಚಿಕಿತ್ಸಾಲಯವನ್ನು ಕಳೆದ ಎರಡು ದಶಕಗಳಿಂದ ಮುನ್ನೆಸಿಕೊಂಡು ಬಂದು ಖ್ಯಾತ್ ವೈದ್ಯರಾಗಿ, ಬಡವರ ವೈದ್ಯರೆಂದರೆ ಖ್ಯಾತನಾಮರಾದವರು ಡಾ. ಸಂಜು ಟಿ. ನಾಯಕ.

ಇನ್ನು ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ಅಂಕೋಲೆಯ ಶೈಕ್ಷಣಿಕ ಭೂಮಿಕೆಯಲ್ಲಿ ಹೈಟೆಕ್ ಪೂರ್ವ ಪ್ರಾಥಮಿಕ ಶಾಲೆಯೆಂಬ ಪ್ರತಿಷ್ಠಿತ ಹೆಸರಿಗೆ ಅರ್ಥ ಕೊಟ್ಟ ಇವರು ಕ್ರೀಯಾಶೀಲತೆಗೆ ಕನ್ನಡಿಯಾದವರಾಗಿದ್ದಾರೆ.

ರೂರಲ ರೋಟರಿ ಕ್ಲಬ್‌ನ ಮೂಲಕ ನೂರಾರು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ, ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹೆಗಲೇರಿಕೊಂಡರು, ಅತ್ಯಂತ ಸರಳರಾಗಿ ಎಲ್ಲರೊಂದಿಗೆ ಬೆರೆತು ಸ್ನೇಹಜೀವಿಯಾದವರೆಂದರೆ ಡಾ, ಸಂಜು ಟಿ. ನಾಯಕ.

ಡಾ. ಸಂಜು ಟಿ. ನಾಯಕ ಅವರ ತಂದೆ ನಿವೃತ್ತ ಶಿಕ್ಷಕ ತಿಮ್ಮಣ್ಣ ನಾಯಕ, ತಾಯಿ ನಿವೃತ್ತ ಶಿಕ್ಷಕಿ ಶಾಂತಿ ಟಿ ನಾಯಕ ಸಂಸ್ಕಾರಯುತ ಮಡಿಲಿನಲ್ಲಿ ಬೆಳೆದ ಈ ತರುಣ ಡಾ. ಸಂಜು ಎಲ್ಲರ ಪ್ರೀತಿಯ ಮಗನಾಗಿ ನಿಂತವರು.

ಡಾ. ಸಂಜು ಅವರ ಹಿರಿಯ ಸಹೋದರ ಬೆಂಗಳೂರಿನ ಬಚಪನ್ ಪ್ಲೇಸ್ಕೂಲ ಸಂಸ್ಥಾಪಕ ಮಂಜುನಾಥ ನಾಯಕ, ಸಹೋದರಿ ಬೆಂಗಳೂರಿನ ಸಿಐಡಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯದಲ್ಲಿರುವ, ರಾಷ್ಟç ಪ್ರಶಸ್ತಿ ಪುರಸ್ಕçತೆ ಅಂಜುಮಾಲ ನಾಯಕ, ಕಿರಿಯ ಸಹೋದರ ಡಾ. ಸಮೀರ ನಾಯಕ, ಪತ್ನಿ ಶ್ವೇತಾ ಅವರ ಪ್ರೋತ್ಸಾಹದ ಒರತೆಯಲ್ಲಿ ಅಂಕೋಲೆಯ ಹೆಮ್ಮೆಗೆ ಗರಿ ಮೂಡಿಸಿದವರೆಂದರೆ ಡಾ. ಸಂಜು ಟಿ. ನಾಯಕ.

ಹಾಗೆ ಮಕ್ಕಳಾದ ಅನ್ವೀತ್, ಅಥರ್ವ ಡಾ. ಸಂಜು ಅವರ ಸಾಮಾಜಿಕ ಕಳಕಳಿಗೆ ಚೈತನ್ಯದ ದೀಪವಾಗಿ ಕಂಡವರಾಗಿದ್ದಾರೆ. ಮಾದರಿ ವ್ಯಕ್ತಿತ್ವದ, ಎಂದೂ ಹಸನ್ಮುಖದ ಡಾ. ಸಂಜು ಟಿ. ನಾಯಕ ಅವರಿಗೆ  ಉಕ ಜಿಲ್ಲಾ ಗೌರವ ಸಮಾದೇಷ್ಟರಾಗಿ ರಾಜ್ಯ ಸರಕಾರ ನೇಮಿಸಿರುವದು ಅಂಕೋಲೆಯ ಪರಿಸರದಲ್ಲಿ ಹರ್ಷಕ್ಕೆ ಕಾರಣವಾಗಿದೆ.