ಗಣೇಶ ಹಬ್ಬದ ಹಿನ್ನಲೆ ಮದ್ಯ ಮಾರಾಟಕ್ಕೆ ನಿಷೇಧ :

ಜಿಲ್ಲೆಯ ಯಾವ ಯಾವ ತಾಲೂಕಿನಲ್ಲಿ ಮದ್ಯ ನಿಷೇದದ ಸಂಪೂರ್ಣ ಮಾಹಿತಿ

ಕಾರವಾರ : ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಸೆ. 20 ರಿಂದ ಸೆ. 29 ರವರೆಗೆ ನಿಗಧಿತ ದಿನದಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.

 ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಸೆ. 23 ಹಾಗೂ 29 ರಂದು, ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ. 23 ಹಾಗೂ ಸೆ. 25 ಹಾಗೂ 27 ರಂದು, ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಸೆ. 23, 27, 28 ಹಾಗೂ 29 ರಂದು, ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಸೆ. 21 , ಸೆ. 23 ರಂದು, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸೆ. 19 ಹಾಗೂ ಸೆ. 20 ರಂದು, ಮುರ್ಡೆಶ್ವರ ಠಾಣಾ ವ್ಯಾಪ್ತಿಯಲ್ಲಿ ಸೆ. 25 ಮಾತ್ರ, ಮಂಕಿ ಠಾಣಾ ವ್ಯಾಪ್ತಿಯಲ್ಲಿ ಸೆ. 21, ಸೆ. 22 ರಂದು, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಸೆ. 23 ಹಾಗೂ ಸೆ.25, ಸೆ. 27 ರಂದು, ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಸೆ. 23, ಸೆ. 25 ಹಾಗೂ ಸೆ. 28 ರಂದು, ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಸೆ. 22 ಹಾಗೂ ಸೆ. 23 ಮತ್ತು 25 ರಂದು ಹಳಿಯಾಳ ಠಾಣಾ ವ್ಯಾಪ್ತಿಯಲ್ಲಿ ಸೆ. 19, ಸೆ.23 ಹಾಗೂ ಸೆ. 25, ಸೆ. 27 ರಂದು, ದಾಂಡೇಲಿ ಹಾಗೂ ಜೋಯಿಡಾ ಠಾಣಾ ವ್ಯಾಪ್ತಿಯಲ್ಲಿ ಸೆ. 23, ಸೆ.25 ಹಾಗೂ ಸೆ. 27, ರಂದು, ಶಿರಶಿ ನಗರ ಪೊಲೀಸ್ ಠಾಣೆ, ಎಸ್.ಎಂ. ಠಾಣೆ, ಬನವಾಸಿ ಠಾಣೆ, ಶಿರಶಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸೆ. 21, ಸೆ. 23 ರಂದು, ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಸೆ. 23, ಸೆ. 25 ರಂದು, ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಸೆ.23, ಸೆ. 25, ಸೆ.28 ಹಾಗೂ ಸೆ. 29 ರಂದು, ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಸೆ. 22 ಸೆ. 24 ರಂದು ಮದ್ಯಮಾರಾಟ ನಿಷೇಧಿಸಲಾಗಿದೆ.